* ಭಾರತವು 2050ರ ವೇಳೆಗೆ 340 ಮಿಲಿಯನ್ ಹಿರಿಯ ನಾಗರಿಕರನ್ನು ಹೊಂದಲಿದೆ. ಇದು ವಿಶ್ವದ ವಯಸ್ಸಾದ ಜನಸಂಖ್ಯೆಯ ಸರಿಸುಮಾರು ಶೇ. 17ರಷ್ಟು ಇರಲಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಸಿಬಿಆ‌ರ್ ಇ (CBRE) ಸೌತ್ ಏಷ್ಯಾದ ವರದಿ ತಿಳಿಸಿದೆ.* ಭಾರತದ ಹಿರಿಯ ಜನಸಂಖ್ಯೆಯು ಗಮನಾರ್ಹವಾಗಿ ಶೇ. 25.4 ಬೆಳವಣಿಗೆಯಾಗುವ ನಿರೀಕ್ಷೆಯಿದೆ. ಭಾರತ, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ಹಿರಿಯ ನಾಗರಿಕರ ಪ್ರಮಾಣ ವೇಗವಾಗಿ ಬೆಳೆಯುತ್ತಿದೆ ಎಂದು ಸಿಬಿಆರ್ ಇ ಯ ಅಧ್ಯಕ್ಷ ಮತ್ತು ಸಿಇಒ ಅಂಶುಮಾನ್ ಮ್ಯಾಗಜೀನ್ ಅವರು ತಿಳಿಸಿದ್ದಾರೆ.* ದೇಶದಲ್ಲಿ ಪ್ರಸ್ತುತ ಹಿರಿಯರ ಆರೈಕೆ ಕೇಂದ್ರಗಳು ವೇಗವಾಗಿ ಹೆಚ್ಚಾಗುತ್ತಿದೆ. ಈಗಾಗಲೇ ದೇಶ್ಯದಾದ್ಯಂತ  ಹಿರಿಯರ ಆರೈಕೆ ಕೇಂದ್ರಗಳು 18,000 ಘಟಕಗಳಿದ್ದು, ಸಂಘಟಿತ ಹಿರಿಯ ಜೀವನ ಮತ್ತು ಆರೈಕೆ ವಿಭಾಗಗಳಲ್ಲಿ ಶೇ. 62ರಷ್ಟನ್ನು ಹೊಂದಿರುವ ದಕ್ಷಿಣ ಪ್ರದೇಶದಲ್ಲೇ ಇದು ಹೆಚ್ಚಾಗಿದೆ.