* ವಿಶ್ವ ಪರಂಪರೆಯ ದಿನದ ಅಂಗವಾಗಿ ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು ಏಪ್ರಿಲ್ 18 ರಂದು (ಗುರುವಾರ) ಅನಾವರಣಗೊಳಿಸಲಾಯಿತು. * ಕೊಹ್ಲಿ ಮೇಲಿನ ಅಭಿಮಾನಕ್ಕೋಸ್ಕರ ಜೈಪುರದಲ್ಲಿ ಕೊಹ್ಲಿಯ ಮೇಣದ ಪ್ರತಿಮೆಯೊಂದನ್ನು ನಿರ್ಮಾಣ ಮಾಡಲಾಗಿದೆ. ಈ ಪ್ರತಿಮೆಯನ್ನು 35 ಕೆ.ಜಿ. ತೂಕದ ಕೊಹ್ಲಿ ಅವರ ಪ್ರತಿಮೆಯನ್ನು ಸುಮಾರು ಎರಡು ತಿಂಗಳಲ್ಲಿ ಕೆತ್ತಲಾಗಿದೆ. * ಈ ಮ್ಯೂಸಿಯಂನಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಸಚಿನ್‌ ತೆಂಡೂಲ್ಕರ್‌ ಮತ್ತು ಎಂ.ಎಸ್‌. ಧೋನಿ ಸಹಿತ 44 ಮಂದಿಯ ಮೇಣದ ಪ್ರತಿಮೆಗಳಿವೆ.* ನಹರ್‌ಗಢ್ ಕೋಟೆಯ ಆವರಣದಲ್ಲಿ ನೆಲೆಗೊಂಡಿರುವ ಈ ವಸ್ತುಸಂಗ್ರಹಾಲಯವು ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು, ಎಪಿಜೆ ಅಬ್ದುಲ್ ಕಲಾಂ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಕಲ್ಪನಾ ಚಾವಾಲಾ, ಅಮಿತಾಭ್ ಬಚ್ಚನ್ ಮತ್ತು ಮದರ್ ತೆರೇಸಾ ಅವರ ಪ್ರತಿಮೆಗಳನ್ನು ಸಹ ಹೊಂದಿದೆ.