* ಭಾರತ ಮತ್ತು ನೇಪಾಳ ಸರ್ಕಾರಗಳು ತಮ್ಮ ಬಾಂಧವ್ಯವನ್ನು ಹಿಮಾಲಯದೆತ್ತರಕ್ಕೆ ಕೊಂಡೊಯ್ಯಲಿವೆ ಮತ್ತು ಗಡಿ ಸೇರಿದಂತೆ ಎಲ್ಲ ರೀತಿಯ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳ ಪ್ರಧಾನಿ ಪುಷ್ಪಕಮಲ್‌ ದಹಲ್‌ (ಪ್ರಚಂಡ) ಜೂನ್ 1 ರಂದು ತಿಳಿಸಿದ್ದಾರೆ.* ಭಾರತ ಮತ್ತು ನೇಪಾಳದ ಗಡಿಗಳ ನಡುವಿನ ಪೆಟ್ರೋಲಿಯಂ ಪೈಪ್‌ಲೈನ್‌ ವಿಸ್ತರಣೆ, ಚೆಕ್‌ಪೋಸ್ಟ್‌ಗಳ ನಿರ್ಮಾಣ, ಜಲವಿದ್ಯುತ್ಛಕ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಳ ಕುರಿತು ಉಭಯ ನಾಯಕರು ಒಟ್ಟು 7 ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಈ ಒಪ್ಪಂದಗಳಲ್ಲಿ ಪ್ರಮುಖವಾಗಿ “ಭಾರತ-ನೇಪಾಳ ಪರಿಷ್ಕೃತ ಸಾರಿಗೆ ಒಪ್ಪಂದಕ್ಕೂ ಸಹಿ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.