* 2024 ನೇ ಸಾಲಿನ ಜಾಗತಿಕ 200 ಅತ್ಯುತ್ತಮ ವಿಶ್ವ ವಿದ್ಯಾಲಯಗಳ ರ‍್ಯಾಂಕಿಂಗ್ ಪಟ್ಟಿ 2023 ಅಕ್ಟೋಬರ್ 26 ರಂದು ಬಿಡುಗಡೆಗೊಂಡಿದ್ದು,  ರ‍್ಯಾಂಕಿಂಗ್ ಪಟ್ಟಿಯಲ್ಲಿ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐ ಐಎಸ್ ಸಿ) ನಾಲ್ಕು ವಿಷಯದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.* ಈ ಸಂಸ್ಥೆಯಲ್ಲಿ ಇರುವ 4 ವಿಷಯಗಳಾದ ಭೌತಿಕ ವಿಜ್ಞಾನ, ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಜೀವ ವಿಜ್ಞಾನದಲ್ಲಿ ಬೆಂಗಳೂರು ವಿಜ್ಞಾನ ಸಂಸ್ಥೆ ಭಾರತೀಯ ವಿಶ್ವ ವಿದ್ಯಾಲಯಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.* ವಿಷಯವಾರು ಜಾಗತಿಕ ವಿವಿಗಳ ಪಟ್ಟಿಯಲ್ಲಿ ಬೆಂಗಳೂರಿನ ಐ ಐಎಸ್ ಸಿ ಗೆ ಎಂಜಿನಿಯರಿಂಗ್ ವಿಭಾಗ 101 ರಿಂದ 125 ನೇ ಸ್ಥಾನ ಪಡೆದಿದ್ದು, ಭಾರತೀಯ ವಿವಿಗಳ ಪಟ್ಟಿಗೆ ಮೊದಲ ಸ್ಥಾನ ಪಡೆದುಕೊಂಡಿದೆ.* ಶ್ರೇಯಾಂಕದಲ್ಲಿರುವ ಅಗ್ರ 10 ವಿಶ್ವ ವಿದ್ಯಾಲಯ ಸಂಸ್ಥೆಗಳು:ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಯುಕೆಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ, USಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, USಹಾರ್ವರ್ಡ್ ವಿಶ್ವವಿದ್ಯಾಲಯ, USಕೇಂಬ್ರಿಡ್ಜ್ ವಿಶ್ವವಿದ್ಯಾಲಯ , ಯುಕೆಪ್ರಿನ್ಸ್‌ಟನ್ ವಿಶ್ವವಿದ್ಯಾಲಯ, USಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, USಇಂಪೀರಿಯಲ್ ಕಾಲೇಜ್ ಲಂಡನ್, ಯುಕೆಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿ, USಯೇಲ್ ವಿಶ್ವವಿದ್ಯಾಲಯ, US