* ಚಂದ್ರಯಾನ 3 ಯಶಸ್ಸಿನ ರೂವಾರಿ, ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರ  ಆತ್ಮಚರಿತ್ರೆ ‘ನಿಲವು ಕುಡಿಚ ಸಿಂಹಂಗಲ್’ ಮಲಯಾಳಂ ಭಾಷೆಯಲ್ಲಿ ಸದ್ಯದಲ್ಲೇ ಬಿಡುಗಡೆಯಾಗಲಿದೆ.   * ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರ  ಆತ್ಮಚರಿತ್ರೆ ಮಲಯಾಳಂನಲ್ಲಿ ರಿಲೀಸ್ ಆಗಲಿದೆ. ‘ನಿಲವು ಕುಡಿಚ ಸಿಂಹಂಗಲ್’ ಎಂಬ ಶೀರ್ಷಿಕೆ ಇಡಲಾಗಿದೆ. ಕೇರಳ ಮೂಲದ ಲಿಪಿ ಪಬ್ಲಿಕೇಷನ್ಸ್‍ನಿಂದ ಪ್ರಕಟವಾಗುತ್ತಿರುವ ಈ ಪುಸ್ತಕವು ನವೆಂಬರ್ ನಲ್ಲಿ ಲೋಕಾರ್ಪಣೆಗೊಳ್ಳಲಿದೆ.* ಸೋಮನಾಥ ಅವರು ಕಾಲೇಜು ದಿನಗಳಲ್ಲಿ ಅನುಭವಿಸಿದ ಕಷ್ಟದ ದಿನಗಳನ್ನು ಪುಸ್ತಕದಲ್ಲಿ ಮೆಲುಕು ಹಾಕಲಾಗಿದ್ದು ಯುವ ವಿಜ್ಞಾನಿಗಳಿಗೆ ಪ್ರೇರಣೆ ಯಾಗಲಿದೆ ಎಂದು ಭಾವಿಸಲಾಗಿದೆ.  * ಪುಸ್ತಕವು ನನ್ನ ಜೀವನದ ಕಥೆಯನ್ನು ಕಲಿಸುವ ಉದ್ದೇಶವನ್ನು ಹೊಂದಿಲ್ಲ. ಜೀವನದಲ್ಲಿ ಪ್ರತಿಕೂಲತೆಯನ್ನು ಎದುರಿಸುವಾಗ ಜನರು ತಮ್ಮ ಕನಸುಗಳನ್ನು ಬೆನ್ನಟ್ಟಲು ಪ್ರೇರೇಪಿಸುವುದು ಇದರ ಏಕೈಕ ಉದ್ದೇಶವಾಗಿದೆ" ಎಂದು ಸೋಮನಾಥ್ ಹೇಳಿದ್ದಾರೆ.