* ಭಾರತ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮುಂಬೈ ತಂಡದ ಮಾಜಿ ನಾಯಕ ಮತ್ತು ದೇಶೀಯ ಕ್ರಿಕೆಟ್ನ ಮಾಜಿ ಆಟಗಾರ ಅಮೋಲ್ ಮಜುಂದಾರ್ ಅವರನ್ನು 2023 ಅಕ್ಟೋಬರ್ 25 ರಂದು ನೇಮಕ ಮಾಡಲಾಗಿದೆ. *  ಸುಲಕ್ಷಣಾ ನಾಯಕ್, ಅಶೋಕ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರಿದ್ದ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಅಭ್ಯರ್ಥಿಗಳ ಸಂದರ್ಶನ ನಡೆಸಿತ್ತು. ಮೂವರು ಸದಸ್ಯರ ಸಮಿತಿಯು ಮಜುಂದಾರ್ ಅವರನ್ನು ಹುದ್ದೆ ವಹಿಸಿಕೊಳ್ಳುವಂತೆ ಸರ್ವಾನುಮತದಿಂದ ಶಿಫಾರಸು ಮಾಡಿದೆ.* ಅಮೋಲ್ ಮಜುಂದಾರ್ ಅವರು 48 ವರ್ಷ ವಯಸ್ಸಿನಲ್ಲಿ 21 ವರ್ಷಗಳ ಕಾಲ ಪ್ರಥಮ ದರ್ಜೆ ಕ್ರಿಕೆಟ್ ಆಡಿದ ಅನುಭವ ಹೊಂದಿದ್ದು, ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲಿ 171 ಪಂದ್ಯಗಳನ್ನು ಆಡಿ 30 ಶತಕ ಬಾರಿಸಿದ ಸಾಧನೆ ಅವರದ್ದಾಗಿದೆ. ಒಟ್ಟಾರೆ 11167 ರನ್ ಬಾರಿಸಿದ್ದಾರೆ. 113 ಲಿಸ್ಟ್ ಎ ಪಂದ್ಯಗಳನ್ನು ಆಡಿ 3286 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಒಳಗೊಂಡಿದೆ.