Job Description: * ಬಾಂಗ್ಲಾದೇಶದ ನೂತನ ಅಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ ಮೊಹಮ್ಮದ್ ಶಹಾಬುದ್ದೀನ್ ಚುಪ್ಪು ಆಯ್ಕೆಯಾಗಿದ್ದಾರೆ. ಇವರು ಬಾಂಗ್ಲಾದೇಶದ 22 ನೇ ಅಧ್ಯಕ್ಷರಾಗಲಿದ್ದಾರೆ. 74 ವರ್ಷದ ಶಹಾಬುದ್ದೀನ್ ಚುಪ್ಪು ಅವಿರೋಧವಾಗಿ ಆಯ್ಕೆಯಾದರು. ಏಪ್ರಿಲ್ 24 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.* ಮೊಹಮ್ಮದ್ ಅಬ್ದುಲ್ ಹಮೀದ್ ಬದಲಿಗೆ ಅಧಯಜ್ಷ ಸ್ಥಾನಕ್ಕೇರಲಿದ್ದಾರೆ, ಬಾಂಗ್ಲಾದೇಶದ ಮುಖ್ಯ ಚುನಾವಣಾ ಆಯುಕ್ತ ಕಾಜಿ ಹಬೀಬುಲ್ ಅವಲ್ ಅವರು ಭಾನುವಾರ ಫೆಬ್ರುವರಿ 12 ರಂದು ಸಲ್ಲಿಸಿದ ನಾಮಪತ್ರಗಳ ಪರಿಶೀಲನೆಯ ನಂತರ ಚುಪ್ಪು ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು.