* ಸುಮಾರು 14 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ಟೀಂ ಇಂಡಿಯಾಗೆ ದೊಡ್ಡ ಕೊಡುಗೆ ನೀಡಿದ ಭಾರತೀಯ ಹಾಕಿ ತಂಡದ ಮಾಜಿ ನಾಯಕ ಮತ್ತು ಗೋಲ್‌ ಕೀಪರ್ ಪಿಆರ್ ಶ್ರೀಜೇಶ್ ನಿವೃತ್ತಿ ಘೋಷಿಸಿದ್ದಾರೆ.* 2024ರ ಟಿ20 ವಿಶ್ವಕಪ್ ನಂತರ ವಿರಾಟ್-ರೋಹಿತ್ ಟಿ20ಗೆ ವಿದಾಯ ಹೇಳಿದ್ದರು. ಈಗ ಪಿಆರ್ ಶ್ರೀಜೇಶ್ ಅವರು ನಿವೃತ್ತಿ ಘೋಷಿಸಿದ್ದಾರೆ.* 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆಗಸ್ಟ್ 8 ರಂದು ಸ್ಪೇನ್ ಅನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಭಾರತ ಹಾಕಿಯಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದೆ ಈ ಮೂಲಕ ಭಾರತ ಸತತ ಎರಡನೇ ಒಲಿಂಪಿಕ್ಸ್ ಕಂಚಿನ ಪದಕವನ್ನು ಗೆದ್ದುಕೊಂಡತಾಗಿದೆ.*ನಿವೃತ್ತಿಯ ನಂತರ ಮಾತನಾಡಿದ ಶ್ರೀಜೇಶ್ "ನಾನು ಪ್ರೀತಿ, ಕಾಳಜಿಯನ್ನು ಗೌರವಿಸುತ್ತೇನೆ ಮತ್ತು ಕೆಲವೊಮ್ಮೆ ಕೆಲವು ನಿರ್ಧಾರಗಳು ಕಠಿಣವಾಗಿರುತ್ತದೆ. ಆದರೆ ಸರಿಯಾದ ಸಮಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಪರಿಸ್ಥಿತಿಯನ್ನು ಇನ್ನಷ್ಟು ಸುಂದರಗೊಳಿಸುತ್ತದೆ" ಎಂದು ಹೇಳಿದರು.