* ಆಸ್ಟ್ರೇಲಿಯಾದ ಕಾಕಡು ರಾಷ್ಟ್ರೀಯ ಉದ್ಯಾನವನದೊಳಗೆ ಇರುವ ವಿಶ್ವದ ಅತಿದೊಡ್ಡ ಉನ್ನತ ದರ್ಜೆಯ ಯುರೇನಿಯಂನ ನಿಕ್ಷೇಪಗಳಲ್ಲಿ ಒಂದಾದ ಜಬಿಲುಕಾ ಸ್ಥಳದಲ್ಲಿ ಗಣಿಗಾರಿಕೆಯನ್ನು ನಿಷೇಧಿಸಲು ಅಲ್ಲಿನ ಸರ್ಕಾರ ನಿರ್ಣಾಯಕ ಕ್ರಮವನ್ನು ತೆಗೆದುಕೊಂಡಿದೆ. * ಈ ಮೂಲಕ ಸ್ಥಳೀಯ ಜನರ ಆಶಯಕ್ಕೆ ಆಸ್ಟ್ರೇಲಿಯಾ ಸರ್ಕಾರ ಮನ್ನಣೆ ನೀಡಿದೆ. ಸರ್ಕಾರದ ಈ ನಿರ್ಧಾರ ಸ್ಥಳೀಯ ಮಿರಾರ್ ಜನರ ಸಂಭ್ರಮಕ್ಕೆ ಕಾರಣವಾಗಿದೆ.* ಉದ್ಯಾನವನದ ಯೋಜಿತ ವಿಸ್ತರಣೆ ಮಿರಾರ್‌ನ ಆಶಯಕ್ಕೆ ಅನುಗುಣವಾಗಿದೆ. ಅವರು ತಮ್ಮ ಭೂಮಿಯಲ್ಲಿ ಯುರೇನಿಯಂ ಗಣಿಗಾರಿಕೆ ನಿಲ್ಲಿಸಬೆಕು ಎಂದು ಬಯಸುತ್ತಿದ್ದರು. ಇದೀಗ ಜಬಿಲುಕಾದಲ್ಲಿ ಎಂದಿಗೂ ಗಣಿಗಾರಿಕೆ ಇರುವುದಿಲ್ಲ ಎಂದು ಪ್ರಧಾನಿ ಆಂಥೋನಿ ಅಲ್ಮವೀಸ್ ಭರವಸೆ ನೀಡಿದ್ದಾರೆ.* ಜಬಿಲುಕಾದಲ್ಲಿ ಗಣಿಗಾರಿಕೆಯನ್ನು ನಿಷೇಧಿಸುವ ಕ್ರಮವು ಪಾರಂಪರಿಕ-ಪಟ್ಟಿ ಮಾಡಿದ ಉದ್ಯಾನವನವನ್ನು ವಿಸ್ತರಿಸುತ್ತದೆ. ಈ ಉಷ್ಣವಲಯದ ಪ್ರದೇಶವು ಅದರ ಕಮರಿಗಳು ಮತ್ತು ಜಲಪಾತಗಳಿಗೆ ಹೆಸರುವಾಸಿಯಾಗಿದೆ.