* ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ 5ನೇ ಪದಕ ದಕ್ಕಿದೆ. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಸತತ ಎರಡನೇ ಒಲಿಂಪಿಕ್ಸ್ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 89.45 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. * ಇನ್ನು ಇದೇ ಸ್ಪರ್ಧೆಯಲ್ಲಿ ಕಳೆದ ಒಲಿಂಪಿಕ್ಸ್ನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದ ಪಾಕಿಸ್ತಾನದ ಅರ್ಷದ್ ನದೀಮ್ ಈ ಬಾರಿ ದಾಖಲೆಯ 92.97 ಮೀ. ದೂರ ಜಾವೆಲಿನ್ ಎಸೆದು ಇತಿಹಾಸ ನಿರ್ಮಿಸಿದಲ್ಲದೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.* 'ಟೋಕಿಯೋ ಒಲಿಂಪಿಕ್ಸ್' ಅಖಾಡದಲ್ಲಿ ಭಾರತಕ್ಕಾಗಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಇದೀಗ 'ಪ್ಯಾರಿಸ್ ಒಲಿಂಪಿಕ್ಸ್-2024' ಕ್ರೀಡಾಕೂಟದಲ್ಲೂ ದೊಡ್ಡ ಸಾಧನೆ ಮಾಡಿದ್ದಾರೆ. ಚಿನ್ನದ ಮೇಲೆ ಗುರಿ ಇಟ್ಟಿದ್ದ ಭಾರತದ ಹೆಮ್ಮೆಯ ಪುತ್ರ ನೀರಜ್ ಚೋಪ್ರಾ, ಕೆಲವೇ ಕೆಲವು ಮೀಟರ್ ಅಂತರದಲ್ಲಿ ಚಿನ್ನದ ಪದಕ ಮಿಸ್ ಮಾಡಿಕೊಂಡರು. ಆದರೂ ನೀರಜ್ ಚೋಪ್ರಾ ಭರ್ಜರಿಯಾಗಿ ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ.*