Job Description: * ಗೃಹ ಸಚಿವ ಅಮಿತ್ ಶಾ ಬೀದರ್ ಜಿಲ್ಲೆಯ ಗೊರಟಾ ಮೈದಾನದಲ್ಲಿ 103 ಅಡಿ ಎತ್ತರದ ರಾಷ್ಟ್ರಧ್ವ ಜ,'ಬಲಿದಾನದ ಸ್ಮಾರಕ'ವನ್ನು ಲೋಕಾರ್ಪಣೆಗೊಳಿಸಿದರು.* "ಗೊರಟಾ ಸ್ಮಾರಕ" ದ ಇತಿಹಾಸ * ಆಗಸ್ಟ್ 15,1947ರಂದು ಇಡೀ ದೇಶವೇ ಸ್ವಾತಂತ್ಯ್ರ ಸಿಕ್ಕ ಸಂಭ್ರಮಾಚರಣೆಯಲ್ಲಿದ್ದರೆ, ಹೈದರಾಬಾದ್‌ ನಿಜಾಮರ ವಶದಲ್ಲಿದ್ದ ಕರ್ನಾಟಕ, ಬೀದರ್‌, ಯಾದಗಿರಿ, ಗುಲ್ಬರ್ಗ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳು ಮಾತ್ರ ಆ ಸಂತಸವನ್ನು ಅನುಭವಿಸಲಿಲ್ಲ. ಈ ನಡುವೆಯೇ ಹೈದರಾಬಾದ್‌ ಕರ್ನಾಟಕ ವಿಮೋಚನಾ ಚಳುವಳಿಯಲ್ಲಿ ಬಸವಕಲ್ಯಾಣ ತಾಲ್ಲೂಕಿನ ಗೊರಟಾ ಗ್ರಾಮದಲ್ಲಿ ವಂದೇ ಮಾತರಂ, ಭಾರತ ಮಾತಾಕೀ ಜೈ ಘೋಷಣೆಗಳೊಂದಿಗೆ ರಾಷ್ಟ್ರಧ್ವಜದ ಮೆರವಣಿಗೆ ನಡೆಯಿತು. * ಅದನ್ನು ಸಹಿಸದ ರಜಕಾರರು ಇಡೀ ಗ್ರಾಮಕ್ಕೇ ಬೆಂಕಿ ಇಟ್ಟರು. ಈ ಹತ್ಯಾಕಾಂಡದ ದಳ್ಳುರಿಯಲ್ಲಿ ಒಂದೇ ದಿನದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡರು. ಸ್ವಾತಂತ್ರ್ಯ ಹೋರಾಟದ ನರಮೇಧಕ್ಕೆ ಸಾಕ್ಷಿಯಾದ ಈ ಗ್ರಾಮ ʼಕರ್ನಾಟಕದ ಜಲಿಯನ್‌ ವಾಲಾಬಾಗ್‌ʼ ಎಂದೇ ಹೆಸರಾಯಿತು.