Job Description: * ಅರ್ಥಿಕ ಸಂಕಷ್ಟದಿಂದಾಗಿ ನವೋದ್ಯಮಗಳಿಗೆ ಹಣಕಾಸಿನ ನೆರವು ನೀಡುವ ಅಮರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್‌ (ಎಸ್‌ಪಿಬಿ) ಅರ್ಥಿಕ ಬಾಗಿಲು ಮುಚ್ಚಿದೆ. 2008ರ ಆರ್ಥಿಕ ಬಿಕ್ಕಟ್ಟಿನ ಬಳಿಕ ಅತಿದೊಡ್ಡ ಬ್ಯಾಂಕಿಂಗ್ ವೈಫಲ್ಯ ಇದಾಗಿದೆ.* ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಬಾಗಿಲು ಮುಚ್ಚುವ ನಿರ್ಧಾರವನ್ನು ಕ್ಯಾಲಿಫೋರ್ನಿಯಾದಡಿಪಾಟಿಮೆಂಟ್ ಆಫ್ ಫೈನಾನ್ಶಿಯಲ್ ಪ್ರೊಟೆಕ್ಷನ್ ಆ್ಯಂಡ್ ಇನೊವೇಷನ್ (ಡಿಎಫ್‌ಪಿಐ) ಮಾರ್ಚ್ 10 ಶುಕ್ರವಾರದಂದು ಘೋಷಿಸಿತು. ಬ್ಯಾಂಕ್‌ನ ನಿಯಂತ್ರಣವನ್ನು ಫೆಡರಲ್ ಡೆಪಾಸಿಟ್ ಇನ್ಮುರನ್ಸ್ ಕಾರ್ಪೊರೇಷನ್‌ಗೆ (ಎಫ್‌ಡಿಐಸಿ) ನೀಡಲಾಗಿದೆ.* ಒಂದು ಖಾತೆಯಲ್ಲಿ 2.5 ಲಕ್ಷ ಡಾಲರ್‌ವರೆಗೆ ಠೇವಣಿ ಹೊಂದಿರುವವರಿಗೆ ಮಾತ್ರವೇ ವಿಮೆ ಸಿಗಲಿದ್ದು, 2022ರ ಅಂತ್ಯದ ವೇಳೆಗೆ, ಬ್ಯಾಂಕ್‌ನಲ್ಲಿ 714.35 ಲಕ್ಷ ಕೋಟಿ ಮೌಲ್ಯದ ಠೇವಣಿ ಇದ್ದು, ಅದರಲ್ಲಿ ಶೇ 89ರಷ್ಟು ವಿಮೆಗೆ ಒಳಪಟ್ಟಿಲ್ಲ. ಸೋಮವಾರ ಬ್ಯಾಂಕ್ ತೆರೆಯಲಿದ್ದು, ವಿಮೆ ಮಾಡಿಸಿರುವ ಠೇವಣಿದಾರರು ಹಣ ಹಿಂದಕ್ಕೆ ಪಡೆಯಬಹುದು ಎಂದು ಎಫ್‌ಡಿಐಸಿ ತಿಳಿಸಿದೆ.