* ದೇಶದಲ್ಲಿ ಐದು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಏಕಕಾಲದಲ್ಲಿ ಪ್ರಾರಂಭವಾಗಿವೆ. ಜೂನ್ 26 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.- ಭೂಪಾಲ್ (ರಾಣಿ ಕಮಲಪತಿ) - ಇಂದೋರ್ ವಂದೇ ಭಾರತ್ ಎಕ್ಸ್ ಪ್ರೆಸ್ : ಭೂಪಾಲದ ಮಹಾಕಾಲ ನಗರ ಉಜೈನಿಗೆ ತ್ವರಿತ ಸಂಪರ್ಕ, ಭೂಪಾಲ್ ಇಂದೋರ ನಡುವೆ 1 ಗಂಟೆ ಪ್ರಯಾಣದ ಸಮಯ ಉಳಿತಾಯ.- ಭೂಪಾಲ್ (ರಾಣಿ ಕಮಲಪತಿ) - ಜಬಲ್ ಪುರ ವಂದೇ ಭಾರತ್ ಎಕ್ಸ್ ಪ್ರೆಸ್ : ಭೂಪಾಲ್ ಜಬಲ್ ಪುರ ನಡುವೆ 1 ಗಂಟೆ ಪ್ರಯಾಣದ ಸಮಯ ಉಳಿತಾಯ. ಇದು ಆರಾಮದಾಯಕ ಮತ್ತು ಪ್ರಯಾಣದ ಅನುಭವ.-  ರಾಂಚಿ - ಪಟನಾ ವಂದೇ ಭಾರತ್ ಎಕ್ಸ್ ಪ್ರೆಸ್ : ಬಿಹಾರ ಮತ್ತು ಜಾರ್ಖಂಡ್ ರಾಜ್ಯದ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಈ ಎರಡು ರಾಜಧಾನಿಗಳ ನಡುವೆ 1 ಗಂಟೆ 45 ನಿಮಿಷ ಪ್ರಯಾಣದ ಸಮಯ ಉಳಿತಾಯ.  - ಧಾರವಾಡ -ಕೆ ಎಸ್ ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ : ಧಾರವಾಡ -ಕೆ ಎಸ್ ಆರ್ ಬೆಂಗಳೂರು ನಡುವೆ 1 ಗಂಟೆ ಪ್ರಯಾಣದ ಸಮಯ ಉಳಿತಾಯ. ಇದರಿಂದಾಗಿ ಯುವಜನರಿಗೆ ಶಿಕ್ಷಣ ಮತ್ತು ಉದ್ಯೋಗದ ಅವಕಾಶವನ್ನು ಹೆಚ್ಚಿಸುತ್ತದೆ.- ಗೋವಾ (ಮಡಗಾಂವ್) -ಮುಂಬೈ ವಂದೇ ಭಾರತ್ ಎಕ್ಸ್ ಪ್ರೆಸ್ : ಗೋವಾದ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಗೋವಾ ಮತ್ತು ಮುಂಬೈ ನಡುವೆ 1 ಗಂಟೆ ಪ್ರಯಾಣದ ಸಮಯ ಉಳಿತಾಯ.