* ಏಕದಿನ ವಿಶ್ವಕಪ್ ಕ್ರಿಕೆಟ್ ಟ್ರೋಫಿಯು ಚಿತ್ತಾಕರ್ಷಕ ರೀತಿಯಲ್ಲಿ ಅನಾವರಣಗೊಂಡಿದ್ದು, ಭಾರತದಲ್ಲಿ ಟೂರ್ನಿ ನಡೆಯುವ ಮೊದಲು ವಿಶ್ವದ ಐದು ರಾಷ್ಟ್ರಗಳಿಗೆ ಸಂಚರಿಸಲಿದೆ.* ಮೊದಲು ಟ್ರೋಫಿಯ ಅನಾವರಣಕ್ಕೆ ಭುವಿಯಿಂದ 1.20 ಲಕ್ಷ ಅಡಿ ಎತ್ತರದಲ್ಲಿ ಬಲೂನ್‌ಗೆ ಕಟ್ಟಿದ ಪ್ರತಿಷ್ಠಿತ ಬೆಳ್ಳಿಯ ಟ್ರೋಫಿಯನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅತ್ಯಾಕರ್ಷಕ ರೀತಿಯಲ್ಲಿ ಇಳಿಸಲಾಯಿತು.* ಐಸಿಸಿ ಪುರುಷರ ವಿಶ್ವಕಪ್ ಟ್ರೋಫಿಯ ಸಂಚಾರವು ಟೂರ್ನಿಯ ಕೌಂಟ್‌ಡೌನ್‌ನಲ್ಲಿ ಪ್ರಮುಖ ಮೈಲಿಗಲಾಗಿದ್ದು, ಇದು ಅತಿ ದೊಡ್ಡ ವಿಶ್ವಕಪ್ ಟೂರ್ನಿ ಯಾಗಲಿದೆ' ಎಂದು ಐಸಿಸಿ ಚೀಫ್ ಎಕ್ಸಿಕ್ಯೂಟಿವ್ ಜೆಫ್ ಆಲ್ಡರ್ ಡೈಸ್ ಅವರು ತಿಳಿಸಿದರು.