* ಭಾರತೀಯ ಸೇನೆಯ ಅಂಗವಾಗಿರುವ ಆರ್ಮಿ ಎಜುಕೇಶನ್ ಕಾರ್ಪ್ಸ್ (ಎಇಸಿ)' ಅನ್ನು "ಆರ್ಮಿ ನಾಲೆಜ್ ಎನೇಬಲ್ಸ್ ಕಾರ್ಪ್ಸ್' ಎಂದು ಮರು ನಾಮಕರಣ ಮಾಡಲಾಗಿದೆ. * ಇದು ಸುಮಾರು 12 ಲಕ್ಷ ಸಿಬ್ಬಂದಿ ಹೊಂದಿರುವ ಬೃಹತ್ ಪಡೆಯಲ್ಲಿ ಆಗುತ್ತಿರುವ ಬದಲಾವಣೆ. ಸೈಬರ್, ಇನ್ಫೋಟೆಕ್, ಗ್ರಹಿಕೆ ನಿರ್ವಹಣೆ ಮತ್ತು ಮ್ಯಾಂಡರಿನ್, ಬರ್ಮೀಸ್ ಮತ್ತು ಇತರ ಭಾಷೆಗಳಲ್ಲಿ ಪರಿಣತಿ ಸೇರಿದಂತೆ ಹಲವು ನವೀನ ಉಪಕ್ರಮಗಳು ಪರಿವರ್ತನಾ ಪರ್ವದಲ್ಲಿ ಸೇರಿವೆ. * ಈಗಾಗಲೇ ಚೀನಾ ಮತ್ತು ಟಿಬೆಟ್ ಸಂಬಂಧಿತ ವಿಷಯಗಳನ್ನು, ಸಾಮರ್ಥ್ಯ-ಅಸಾಮರ್ಥ್ಯದ ಬಗ್ಗೆ ಅರಿಯುವುದು, ಅವುಗಳನ್ನರಿತು ಅವುಗಳಿಗೆ ಪೂರಕ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳುವಂಥ ಉಪಕ್ರಮಗಳನ್ನು ಅಳವಡಿಸಿಕೊಂಡಿರುವ ಭಾರತೀಯ ಸೇನೆಗೆ ಈಗ 'ಭಾಷಾ ಆಯಾಮ' ಕೂಡ ಸೇರಿಕೊಂಡಿದೆ.* 1921ರಲ್ಲಿ ಆರ್ಮಿ ಎಜುಕೇಶನ್ ಕಾರ್ಪ್ಸ್ (ಎಇಸಿ)' ಅನ್ನು ಸ್ಥಾಪಿಸಲಾಗಿದೆ.* ಈ ಪಡೆಗೆ ಪದವೀಧರರು ಮತ್ತು ಅದಕ್ಕಿಂತ ಹೆಚ್ಚು ಓದಿರುವವರನ್ನು ಮಾತ್ರ ನೇಮಕ ಮಾಡಿಕೊಳ್ಳಬೇಕು ಎಂಬುದು ಆರ್ಮಿ ಎಜುಕೇಶನ್ ಕಾರ್ಪ್ಸ್ (ಎಇಸಿ) ರೂಲ್ಸ್ ಇತ್ತು. ಪ್ರಸ್ತುತ ವೃತ್ತಿಪರರನ್ನು ನೇಮಕ ಮಾಡಲು ಮತ್ತು ನಿಯೋಜಿಸಲು ಹೊಸ ಮಾರ್ಗಸೂಚಿ ರೂಪಿಸಲಾಗುತ್ತಿದೆ.