* ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದ ಮೊದಲ ಎಕ್ಸ್-ರೇ ಪೋಲಾರಿಮೆಟ್ರಿಕ್ ಮಿಷನ್ ನಕ್ಷತ್ರದ ಸ್ಫೋಟದಿಂದ ಆರಂಭಿಕ ಬೆಳಕನ್ನು ಯಶಸ್ವಿಯಾಗಿ ದಾಖಲಿಸಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.* "XPoSat ನಲ್ಲಿನ XSPECT ಪೇಲೋಡ್, ಭಾರತದ ಮೊದಲ ಎಕ್ಸ್-ರೇ ಪೋಲಾರಿಮೆಟ್ರಿಕ್ ಮಿಷನ್, ಕ್ಯಾಸಿಯೋಪಿಯಾ ಸೂಪರ್ನೋವಾ ಅವಶೇಷದಿಂದ ತನ್ನ ಮೊದಲ ಬೆಳಕನ್ನು ಸೆರೆಹಿಡಿಯಿತು," ISRO ಹೇಳಿಕೆಯಲ್ಲಿ ತಿಳಿಸಿದೆ.* ಕಾಸ್ಮಿಕ್ ಕ್ಷಕಿರಣದ ಮೂಲಗಳ ಧ್ರುವೀಕೃತ ಮತ್ತು ಸ್ಪೆಕ್ಕೋಸ್ಕೋಪಿಕ್ ಸೂಸುವಿಕೆಯ ಅಧ್ಯಯನಕ್ಕಾಗಿ ಸಮರ್ಪಿತವಾದ ಭಾರತದ ಪ್ರಪ್ರಥಮ ಉಪಗ್ರಹವಾಗಿದೆ ಎಕ್ಸ್‌ಪೋ ಸ್ಯಾಟ್. 20 ಕೆಜಿಗಿಂತ ಕಡಿಮೆ ತೂಕದ ಈ ಸಾಂದ್ರ ವೋಮ ನೌಕೆ, ಭೂಮಿಯ ಕೆಳಕಕ್ಷೆಯಲ್ಲಿ ಎರಡು ವೈಜ್ಞಾನಿಕ ಉಪಕರಣಗಳನ್ನು ಹೊಂದಿದೆ. *  ವೈಜ್ಞಾನಿಕ ಉಪಕರಣಗಳು ಪೊಲಿಕ್ಸ್ ಮತ್ತು ಎಕ್ಸ್‌ಪೆಕ್ಟ್. ಈ ಎರಡೂ ಉಪಕರಣಗಳು ಪ್ರಕಾಶಮಾನವಾದ ಕಾಸ್ಮಿಕ್ ಎಕ್ಸ್‌ ರೇ ಮೂಲಗಳ ಬಗ್ಗೆ ಅತ್ಯಂತ ನಿಖರ ಧ್ರುವೀಕರಣ ಹಾಗೂ ಸ್ಪೆಕೋಸ್ಕೋಪಿಕ್ ವಿಶ್ಲೇಷಣೆ ನಡೆಸಲು ನೆರವಾಗುತ್ತದೆ.* ಸೂಪರ್ನೋವಾ ಅವಶೇಷದಲ್ಲಿನ ಮೆಗ್ನೀಸಿಯಮ್, ಸಿಲಿಕಾನ್, ಸಲ್ಫರ್, ಆರ್ಗಾನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅಂಶಗಳಿಗೆ ಅನುಗುಣವಾದ ಹೊರಸೂಸುವಿಕೆ ರೇಖೆಗಳನ್ನು ಸೆರೆ ಹಿಡಿಯುವ ಮೂಲಕ ವೀಕ್ಷಣೆ ಜನವರಿ 5 ರಂದು ಪ್ರಾರಂಭವಾಯಿತು.* ರಾಮನ್‌ ಸಂಶೋಧನಾ ಸಂಸ್ಥೆ ಮತ್ತು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಯು.ಆರ್.ರಾವ್ ಉಪಗ್ರಹ ಕೇಂದ್ರ ಜಂಟಿಯಾಗಿ ಉಪಕರಣವನ್ನು (ಪೇಲೋಡ್) ಅಭಿವೃದ್ಧಿಪಡಿಸಿವೆ. 8-30ಕೆಇವಿ ಮಾಧ್ಯಮ ಶಕ್ತಿ ರೇಂಜ್‌ನಲ್ಲಿ ಪೊಲರೈಸೇಶನ್ ಮಾನದಂಡಗಳನ್ನು ಅದು ಪರಿಶೀಲಿಸುತ್ತದೆ.* ಎಕ್ಸ್‌ಪೋಸ್ಯಾಟ್‌ನಲ್ಲಿರುವ ಪ್ರಮುಖ ಸಲಕರಣೆ ಪೊಲಿಕ್ಸ್ ಅನ್ನು ಕಾಸ್ಮಿಕ್ ಮೂಲಗಳ ಎಕ್ಸ್‌ರೇ ಧ್ರುವೀಕರಣವನ್ನು (ಪೊಲರೈಸೇಶನ್) ಅಳೆಯಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.