* ಕರ್ನಾಟಕ ಲೇಖಕಿಯರ ಸಂಘ ನೀಡುವ 2023ನೇ ಸಾಲಿನ ಟಿ. ಎಸ್. ಆರ್. ಪ್ರಶಸ್ತಿ ಪುರಸ್ಕೃತರಾದ ನಾಗಮಣಿ ಎಸ್‌. ರಾವ್ ದತ್ತಿ ಪ್ರಶಸ್ತಿಗೆ ಪತ್ರಕರ್ತೆಯಾದ ಆರ್. ಪೂರ್ಣಿಮಾ ಅವರು ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ.ಎಚ್.ಎಲ್.ಪುಷ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.* ಈ ಪ್ರಶಸ್ತಿಯನ್ನು ಜುಲೈ 8 ರಂದು ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಹಿತಿ ಕಮಲಾ ಹಂಪನಾ ಅವರು ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.* ಈ ಪ್ರಶಸ್ತಿಯು ನಗದು 5 ಸಾವಿರ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದ್ದು, ಕನ್ನಡ ಪತ್ರಿಕಾ ಕ್ಷೇತ್ರ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮೊದಲ ಪ್ರಶಸ್ತಿಯನ್ನು ಪತ್ರಕರ್ತ ಆರ್. ಪೂರ್ಣಿಮಾ ಅವರಿಗೆ ನೀಡಲಾಗುತ್ತಿದೆ' ಎಂದು ಲೇಖಕಿಯರ ಸಂಘದ ಅಧ್ಯಕ್ಷರಾದ ಎಚ್‌.ಎಲ್. ಪುಷ್ಪ ಅವರು ತಿಳಿಸಿದ್ದಾರೆ.