* ಸುಪ್ರೀಂಕೋರ್ಟ್ ನಲ್ಲಿ ಡಿಜಿಟಲೀಕರಣದತ್ತ ಕಾಗದ ರಹಿತ ವ್ಯವಸ್ಥೆ ಜಾರಿಗೆ ತರಲಿದ್ದು, ಮೂರು ನ್ಯಾಯಾಲಯಗಳಲ್ಲಿ ಸಂಪೂರ್ಣ ಕಾಗದ ರಹಿತ ವ್ಯವಸ್ಥೆ ಜಾರಿಗೆ ತರಲಾಗುವುದು.* ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಂದು, ಕಾಗದ ರಹಿತ ಸುಪ್ರೀಂಕೋರ್ಟ್ ನಿರ್ಮಾಣ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿ ಡಿಜಿಟಲ್ ಫೈಲಿಂಗ್ ಪರಿಚಯಿಸುವ ಅಂಗವಾಗಿ ಸಮಗ್ರ ಪ್ರಕರಣ ನಿರ್ವಹಣೆ ಮಾಹಿತಿ ವ್ಯವಸ್ಥೆ (Integrated Case Management Information System) ಅನ್ನು ಸುಪ್ರೀಂಕೋರ್ಟ್ ಅಂತರ್ಜಾಲ ತಾಣದಲ್ಲಿ ಅಪ್ ಲೋಡ್ ಮಾಡಿದರು.* ಸುಪ್ರೀಂ ಕೋರ್ಟ್ ಕೋರ್ಟ್‌ನಲ್ಲಿ ಉಚಿತ ವೈ-ಫೈ ಸೌಲಭ್ಯವನ್ನು ಲಭ್ಯವಾಗುವಂತೆ ಮಾಡಿದೆ ಮತ್ತು ಶೀಘ್ರದಲ್ಲೇ ವಕೀಲರ ಕೊಠಡಿ (ಬಾರ್ ರೂಂ)ಯಲ್ಲಿಯೂ ಇದನ್ನು ಸಕ್ರಿಯಗೊಳಿಸಲಾಗುವುದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಅವರು ಘೋಷಿಸಿದರು.