Job Description: * ಶ್ರೀಕಂಠೀರವ ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಪ್ರತಿಷ್ಠಿತ ಸ್ಯಾಪ್ ಫುಟ್ಬಾಲ್ ಚಾಂಪಿಯನ್‌ಶಿಪ್‌ (SAFF Championship) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ ಚಾಂಪಿಯನ್‌ ಆಗಿದೆ. ಭಾರತ ತಂಡ 9ನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯಿತು. ಅದಲ್ಲದೆ, ಭಾರತಕ್ಕೆ ಇದು ಸತತ 2ನೇ ಸ್ಯಾಫ್‌ ಗೆಲುವಾಗಿದೆ. ಕಳೆದ ಬಾರಿ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ ಮಾಲ್ಡೀವ್ಸ್‌ ವಿರುದ್ಧ ಗೆಲುವು ಕಂಡಿತ್ತು. * ಸ್ಯಾಪ್ ಚಾಂಪಿಯನ್ ಶಿಪ್ ಫೈನಲ್ ಗೆದ್ದ ಭಾರತಕ್ಕೆ 50 ಸಾವಿರ ಡಾಲರ್ ಅಂದರೆ ಅಂದಾಜು 41 ಲಕ್ಷ ರೂಪಾಯಿ ಬಹುಮಾನ ಸಿಗಲಿದ್ದು, ರನ್ನರ್ ಅಪ್ ತಂಡಕ್ಕೆ ಅಂದಾಜು 25000 ಡಾಲರ್ ಬಹುಮಾನ ಸಿಗಲಿದೆ. ಅಂದರೆ ಅಂದಾಜು 20 ಲಕ್ಷ ರೂಪಾಯಿ ಬಹುಮಾನವನ್ನು ಕುವೈತ್‌ ಪಡೆಯಲಿದೆ.* ಪೆನಾಲ್ಟಿ ಶೂಟೌಟ್‌ನ ತಲಾ ಐದು ಅವಕಾಶ ಮುಕ್ತಾಯವಾದಾಗ ಎರಡೂ ತಂಡಗಳು 4-4 ಗೋಲುಗಳ ಸಮಬಲ ಕಂಡಿತ್ತು. ಬಳಿಕ ನಡೆದ ಸಡನ್‌ ಡೆತ್‌ನಲ್ಲಿ ಕುವೈತ್‌ನ ಖಲೀದ್‌ ಎಲ್‌ ಅಬ್ರಾಹಂ ಗೋಲನ್ನು ಮಿಸ್‌ ಮಾಡಿದರೆ, ಭಾರತದ ಪರವಾಗಿ ಎನ್‌.ಮಹೇಶ್‌ ಸಿಂಗ್‌ ಗೋಲು ಸಿಡಿಸಿದರು.