* ವ್ಯಾಪಾರ- ವಹಿವಾಟಿಗೆ ಸಂಬಂಧಿಸಿದ ಪ್ರಮುಖ ಆರು ವ್ಯಾಜ್ಯಗಳನ್ನು ವಿಶ್ವ ವ್ಯಾಪಾರ ಸಂಘಟನೆಯಲ್ಲಿ (ಡಬ್ಲ್ಯುಟಿಒ ) ಇತ್ಯರ್ಥ ಪಡಿಸಿಕೊಳ್ಳಲು ಭಾರತ ಮತ್ತು ಅಮೆರಿಕ ಒಪ್ಪಿಗೆ.\* ಭಾರತವು ಅಮೆರಿಕದಿಂದ ಆಮದಾಗುವ ಬಾದಾಮಿ, ಅಕ್ರೋಟ್ (ವಾಲ್ ನಟ್),ಸೇಬು,ಕಡಲೆ, ಬೋರಿಕ್ ಆಸಿಡ್, ವೈದ್ಯಕೀಯ ತಪಾಸಣೆಗೆ ಬಳಸುವ ರಾಸಾಯನಿಕವನ್ನು ಒಳಗೊಂಡು ಒಟ್ಟು 28, ಉತ್ಪನ್ನಗಳ ಮೇಲಿನ ಸುಂಕವನ್ನು ಕೈಬಿಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.* ಅಮೇರಿಕಾದ ಕೃಷಿ ಮತ್ತು ತಯಾರಿಕಾ ಉತ್ಪನ್ನಗಳಿಗೆ ಮಾರುಕಟ್ಟೆ ಅವಕಾಶಗಳು ವಿಸ್ತರಣೆ ಆಗಲಿವೆ ಎಂದು ವ್ಯಾಜ್ಯ ಇತ್ಯರ್ಥದ ಕುರಿತು ಅಮೇರಿಕಾದ ವ್ಯಾಪಾರ ಪ್ರತಿನಿಧಿ (ಯುಎಸ್ ಟಿಆರ್) ಕ್ಯಾಥರೀನ್ ತೈ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.