* ಅಟ್ಲಾಂಟಿಕ್‌ ಸಾಗರದಲ್ಲಿ ಶತಮಾನದ ಹಿಂದೆ ಮುಳುಗಿರುವ ಟೈಟಾನಿಕ್ ಹಡಗಿನ ಅವಶೇಷಗಳ ವೀಕ್ಷಣೆಗಾಗಿ ಐದು ದಿನಗಳ ಹಿಂದೆ ತೆರಳಿದಾಗ ಕಣ್ಮರೆಯಾಗಿದ್ದ, ಟೈಟನ್ ಹೆಸರಿನ ಸಬ್‌ಮರ್ಸಿಬಲ್ ಪುಟ್ಟ ನೌಕ ಸ್ಫೋಟಗೊಂಡಿದ್ದು, ನೌಕೆಯಲ್ಲಿದ್ದ ಐವರು ಸಾಹಸಯಾತ್ರಿಗಳು ಮೃತ ಪಟ್ಟಿದ್ದಾರೆ ಎಂದು ಅಮೆರಿಕದ ಕರಾವಳಿ ಕಾವಲು ಪಡೆ ಖಚಿತಪಡಿಸಿದೆ.* ಟೈಟಾನಿಕ್ ಹಡಗಿನ ಅವಶೇಷಗಳ ವೀಕ್ಷಣೆಗೆ ಓಷನ್‌ಗೇಟ್‌ ಎಕ್ಸ್‌ಪೆಡಿಷನ್ ಕಂಪನಿಯ ಸಿಇಒ ಸ್ಟಾಕ್‌ಟನ್, ರಷ್, ಭಾರತದಲ್ಲಿ ಚೀತಾ ಮರುಪರಿಚಯಿಸುವ ಯೋಜನೆಗೆ ಕೈಜೋಡಿಸಿದ ಉದ್ಯಮಿ ಹಮಿಷ ಹಾರ್ಡಿಂಗ್, ಪಾಲ್ ಹೆನ್ರಿ, ಪಾಕಿಸ್ತಾನಿ ಉದ್ಯಮಿ ಶಹಝಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್ ದಾವೂದ್ ಸಬ್ ಮರ್ಸಿಬಲ್ ಟೈಟನ್‌ ನೌಕೆಯಲ್ಲಿ ಹಡಗಿನ ಅವಶೇಷಗಳನ್ನು ನೋಡಲು ಪ್ರಯಾಣಿಸಿದ್ದರು.* ಸಾಗರದ ಒಳಗಡೆ ಟೈಟಾನಿಕ ಹಡಗಿನ ಅವಶೇಷಗಳ ಬಳಿಯೇ ಟೈಟಾನ್ ನೌಕೆಯು ಸ್ಪೋಟಗೊಂಡಿದೆ ಎಂದು ಅಮೆರಿಕ ಕರಾವಳಿ ಕಾವಲು ಪಡೆಯ ರಿಯರ್ ಅಡ್ಮಿರಲ್ ಜಾನ್  ಮೌಗರ್‌ ತಿಳಿಸಿದ್ದಾರೆ.