* ಭಾರತದ ಆಟೋಮೋಟಿವ್ ಉದ್ಯಮವು 2030 ರ ವೇಳೆಗೆ ಜಾಗತಿಕವಾಗಿ ಮೂರನೇ ಸ್ಥಾನಕ್ಕೆ ಏರಲಿದೆ ಎಂದು ಕೇಂದ್ರ ಸರ್ಕಾರ ಆಗಸ್ಟ್ 28 ರಂದು ತಿಳಿಸಿದೆ.* ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ ಐ) ಯೋಜನೆಯ ಅಡಿ 25,938 ಕೋಟಿ ನೀಡಿರುವುದು ಹಾಗೂ ವಾಹನ ಬಿಡಿಭಾಗಗಳಿಗೆ ಉತ್ತೇಜನ ನೀಡುವದು ವಲಯದ ಬೆಳವಣಿಗೆಗೆ ನೆರವಾಗಲಿದೆ ಎಂದು ತಿಳಿಸಿದೆ.* ಭಾರತವು 2024 ರ ಕೊನೆಯ ವೇಳೆಗೆ ವಾಹನದ ಉದ್ಯಮದ ಗಾತ್ರವನ್ನು 15 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.* ಪಿಎಲ್‌ಐ ಯೋಜನೆಯ ಕುರಿತು ಬೃಹತ್‌ ಉದ್ದಿಮೆಗಳ ಸಚಿವ ಮಹೇಂದ್ರನಾಥ್ ಪಾಂಡೆ ಅವರು ಆಗಸ್ಟ್ 29 ರಂದು ಪರಿಶೀಲನೆ ನಡೆಸಲಿದೆ.