* ರಿಲಯನ್ಸ್ ಜಿಯೊ ಕಂಪನಿಯು 'ಜಿಯೊ ಫೈಬರ್' ಸೇವೆಗಳನ್ನು ಸೆಪ್ಟೆಂಬರ್ 19ರಿಂದ ಆರಂಭಿಸಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್‌) ಅಧ್ಯಕ್ಷ ಮುಕೇಶ್ ಅಂಬಾನಿ ಆ.28ರಂದು ಘೋಷಿಸಿದ್ದಾರೆ.* ಆರ್‌ಐಎಲ್‌ನ 46ನೆಯ ವಾರ್ಷಿಕ ಮಹಾಸಭೆಯಲ್ಲಿ 'ಜಿಯೊ ಏರ್‌ಫೈಬರ್‌ ಸೇವೆಯು ದೇಶದಾದ್ಯಂತ ಇರುವ 5ಜಿ ಜಾಲವನ್ನು ಬಳಸಿ ಕೊಳ್ಳಲಿದೆ ಮತ್ತು  ವಯರ್‌ಲೆಸ್  ತಂತ್ರಜ್ಞಾನದ ಮೂಲಕ ಮನೆಮನೆಗಳಿಗೆ ಬ್ರಾಡ್‌ಬ್ಯಾಂಡ್‌ ಸೇವೆ ಸಿಗಲಿದೆ' ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ. * ಜಿಯೊ ಕಂಪನಿಯು ಈಗಾಗಲೇ ಹೊಂದಿರುವ ಆಪ್ಟಿಕಲ್ ಫೈಬರ್ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆಯು ಪ್ರತಿದಿನ 15 ಸಾವಿರ ಸಂಪರ್ಕವನ್ನು ಕಲ್ಪಿಸುವ ಸಾಮರ್ಥ್ಯ ಹೊಂದಿದೆ. ಆದರೆ ಜಿಯೊ ಏರ್‌ಫೈಬರ್ ಸೇವೆಯ ಮೂಲಕ ಬ್ರಾಡ್‌ಬ್ಯಾಂಡ್ ಸಂಪರ್ಕದ ವೇಗ ವಿಸ್ತರಣೆ ಯಾಗಲಿದ್ದು ಪ್ರತಿದಿನ 1.50 ಲಕ್ಷ ಸಂಪರ್ಕ ನೀಡಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.