* ರಾಷ್ಟ್ರೀಯ ಕ್ರೀಡಾ ದಿನವನ್ನು ಭಾರತದ ಶ್ರೇಷ್ಠ ಹಾಕಿ ಆಟಗಾರರಾಗಿದ್ದ ಮೇಜರ್ ಧ್ಯಾನ್ ಚಂದ್ ರವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಆಗಸ್ಟ್ 29 ರಂದು  ಆಚರಿಸಲಾಗುತ್ತದೆ. * 2012 ರಲ್ಲಿ ಕ್ರೀಡಾ ಮನೋಭಾವದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ವಿವಿಧ ಕ್ರೀಡೆಗಳ ಸಂದೇಶವನ್ನು ಪ್ರಚಾರ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಬೇಕು ಎಂದು ಘೋಷಿಸಲಾಯಿತು.* ಭಾರತ ಸರ್ಕಾರವು ರಾಷ್ಟ್ರೀಯ ಕ್ರೀಡಾ ದಿನದಂದು ಹಾಕಿ ಆಟಗಾರ ಮತ್ತು ದೇಶದ ಅಥ್ಲೆಟಿಕ್ ಕ್ರೀಡಾಪಟುಗಳನ್ನು ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗಳನ್ನು ನೀಡಿ  ಗೌರವಿಸುತ್ತದೆ. * ರಾಷ್ಟ್ರಪತಿ ಭವನದಲ್ಲಿ ಪ್ರತಿವರ್ಷ ವಿಶೇಷ ಸಮಾರಂಭವನ್ನು ನಡೆಸಲಾಗುತ್ತದೆ ಮತ್ತು ಭಾರತದ ರಾಷ್ಟ್ರಪತಿಗಳು ಈ ಪ್ರಶಸ್ತಿಗಳನ್ನು ನೀಡುತ್ತಾರೆ.