* ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ದತ್ತಾಂಶವನ್ನು ಎಸ್ ಬಐ, ಸುಪ್ರೀಂ ಕೋರ್ಟ್ ಗೆ ನೀಡಿದೆ. ಬಾಂಡ್ ಗಳ ಮುಖ ಬೆಲೆ, ಅದನ್ನು ಖರೀದಿಸಿದವರ ಹೆಸರು, ಯಾವ ಪಕ್ಷಕ್ಕೆ ನೀಡಲಾಗಿದೆ, ಹಾಗೂ ದಿನಾಂಕಗಳನ್ನೊಳಗೊಂಡ ವಿವರಗಳು ಸುಪ್ರೀಂ ಕೋರ್ಟ್ ಗೆ ಸಲ್ಲಿಕೆಯಾಗಿವೆ.* 2019ರ ಏಪ್ರಿಲ್‌ನಿಂದ 2024ರ ಫೆಬ್ರವರಿ 15ರವರೆಗೂ ಒಟ್ಟು 22,217 ಚುನಾವಣಾ ಬಾಂಡ್‌ಗಳನ್ನು ವಿತರಿಸಲಾಗಿದೆ ಎಂದು ಎಸ್‌ಬಿಐ ಅಫಿಡವಿಟ್‌ನಲ್ಲಿ ತಿಳಿಸಿದೆ.* ಚುನಾವಣಾ ಆಯೋಗಕ್ಕೆ ಪೆನ್‌ ಡ್ರೈವ್ ನಲ್ಲಿ ಮಾಹಿತಿಯನ್ನು ಸಲ್ಲಿಸಲಾಗಿದೆ. ಪಾಸ್‌ವರ್ಡ್ ಭದ್ರತೆಯೊಂದಿಗೆ ಎರಡು ಪಿಡಿಎಫ್ ಫೈಲ್‌ಗಳನ್ನು ನೀಡಲಾಗಿದೆ ಎಂದು ಎಸ್‌ಬಿಐ ತಿಳಿಸಿದೆ.* ರಾಜಕೀಯ ಪಕ್ಷಗಳು 22,030 ಚುನಾವಣಾ ಬಾಂಡ್ ಗಳನ್ನು ಬಳಸಿಕೊಂಡಿವೆ. ಉಳಿದ 187 ಬಾಂಡ್‌ಗಳನ್ನು ನಗದೀಕರಿಸಿ ನಿಯಮಕ್ಕೆ ಅನುಗುಣವಾಗಿ ಪ್ರಧಾನಿ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ಹಣ ಪಾವತಿಸಲಾಗಿದೆ ಎಂದು ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಖಾರಾ ಅವರು ಸಲ್ಲಿಸಿರುವ ಅಫಿಡವಿಟ್ ತಿಳಿಸಿದೆ.* ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದಂತೆ ಚುನಾವಣಾ ಬಾಂಡ್‌ಗಳನ್ನು ನಗದೀಕರಿಸಿದ ದಿನಾಂಕ ಮತ್ತು ನಗದೀಕರಿಸಿದ ಬಾಂಡ್‌ಗಳ ಮುಖಬೆಲೆಯನ್ನು ದಾಖಲಿಸಲಾಗಿದೆ" ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.* ಈ ಯೋಜನೆ ಅಡಿಯಲ್ಲಿ ದಾನಿಗಳು ತಮ್ಮ ಆಯ್ಕೆಯ ಪಕ್ಷಕ್ಕಾಗಿ ಬಾಂಡ್‌ಗಳನ್ನು ಖರೀದಿಸಬಹುದಾಗಿತ್ತು. ಆದರೆ ಪಕ್ಷಗಳು ಅದನ್ನು 15 ದಿನಗಳ ಒಳಗೆ ಬಳಸಿಕೊಳ್ಳಬೇಕಿತ್ತು. ಇಲ್ಲದಿದ್ದರೆ ಈ ಹಣವು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಹೋಗುವಂತೆ ನಿಯಮ ರೂಪಿಸಲಾಗಿತ್ತು.* 2018ರಲ್ಲಿ ಚುನಾವಣಾ ಬಾಂಡ್‌ಗಳ ಬಳಕೆ ಜಾರಿಗೆ ಬಂದ ಬಳಿಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 30 ಕಂತುಗಳಲ್ಲಿ 16,518 ಕೋಟಿ ರೂ ಮೊತ್ತದ ಬಾಂಡ್‌ಗಳನ್ನು ವಿತರಿಸಿದೆ.