* ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಹಾಗೂ ಉತ್ತರ ಪ್ರದೇಶ ನಡುವಿನ 23 ವರ್ಷದೊಳಗಿನವರ ಸಿಕೆ ನಾಯ್ಡು ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಇದೇ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.* ಆರ್ ಸ್ಮರಣ್ ನಾಯಕತ್ವದ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ನಲ್ಲಿ 358 ರನ್ ಕಲೆಹಾಕಿತು. ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 358 ರನ್‌ಗಳಿಗೆ ಆಲೌಟ್ ಆಯಿತು. ಮೊದಲನೇ ಇನ್ನಿಂಗ್ಸ್ ಆಡಿದ ಉತ್ತರಪ್ರದೇಶ 139 ರನ್‌ಗಳಿಗೆ ಆಲೌಟ್ ಆಯಿತು. 219 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಬರೋಬ್ಬರಿ 585 ರನ್‌ಗಳನ್ನು ಕಲೆಹಾಕಿತು. ಈ ಮೂಲಕ ಕರ್ನಾಟಕ 804 ರನ್‌ಗಳ ಬೃಹತ್‌ ಮುನ್ನಡೆ ಸಾಧಿಸಿತು.* ಗೆಲುವಿಗೆ 804 ರನ್‌ಗಳ ಬೃಹತ್ ಗುರಿ ಪಡೆದಿದ್ದ ಉತ್ತರ ಪ್ರದೇಶ ತಂಡ ಅಂತಿಮ ದಿನ 6 ವಿಕೆಟ್ ಕಳೆದುಕೊಂಡು ಕೇವಲ 174 ರನ್ ಕಲೆಹಾಕಲಷ್ಟೇ ಶಕ್ತವಾಯಿತು. * ಬಿಸಿಸಿಐ ನಡೆಸುವ ದೇಶದ ಪ್ರಮುಖ 23 ವಯೋಮಿತಿ ಟೂರ್ನಿಯನ್ನು 2007-08ರ ಋತುವಿನಿಂದ ಸಿಕೆ ನಾಯ್ಡು 23 ವಯೋಮಿತಿ ಕ್ರಿಕೆಟ್‌ ಟೂರ್ನಿ ಎನ್ನುವ ಹೆಸರಿನಲ್ಲಿ ಆಡಿಸಲಾಗುತ್ತದೆ.*  ಕರ್ನಾಟಕ 99.5 ಓವರ್‌ಗಳಲ್ಲಿ 358. ಉತ್ತರಪ್ರದೇಶ 46.2 ಓವರ್‌ಗಳಲ್ಲಿ 139. ಎರಡನೇ ಇನಿಂಗ್ಸ್ ಕರ್ನಾಟಕ 151.5 ಓವರ್ ಗಳಲ್ಲಿ 585 (ಕೆ ವಿ ಅನಿಶ್ 214, ಕೃತಿಕ್ ಕೃಷ್ಣಾ 86 ರನ್, ವಿಪ್ರಾಜ್ ನಿಗಮ್ 193 ಕ್ಕೆ 2 ರನ್, ಕುನಲ್ ತ್ಯಾಗಿ 90 ಕ್ಕೆ 4 ರನ್) ಉತ್ತರಪ್ರದೇಶ 31 ಓವರ್ ಗಳಲ್ಲಿ 6 ವಿಕೆಟ್ ಗಳಿಗೆ 174 (ಸ್ವಸ್ತಿಕ್ 67 , ವಿಪ್ರಾಜ್ ನಿಗಮ್ 73 , ಎಲ್. ಮನ್ವಂತ್ ಕುಮಾರ 36 ಕ್ಕೆ 5 ವಿಕೆಟ್ ಗಳಿಸಿದ್ದರು.)