* 18ನೇ ಶತಮಾನದ ಮರಾಠಾ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಹೆಸರನ್ನು ಮಹಾರಾಷ್ಟ್ರದ ‘ಅಹ್ಮದ್ ನಗರಕ್ಕೆ’ "ಅಹಲ್ಯಾನಗರ" ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಮಹಾರಾಷ್ಟ್ರ ಸಚಿವ ಸಂಪುಟ 2024 ಮಾರ್ಚ್ 13 ರಂದು ಬುಧವಾರ ಅನುಮೋದನೆ ನೀಡಿದೆ. *ಅಹ್ಮದ್ ನಗರವನ್ನು ಮರುನಾಮಕರಣ ಮಾಡುವ ಸರ್ಕಾರದ ಪ್ರಸ್ತಾವನೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು 2023 ರಲ್ಲಿ ಮೇ ತಿಂಗಳಲ್ಲಿ ಮೊದಲು ಘೋಷಿಸಿದರು.* 15 ನೇ ಶತಮಾನದಲ್ಲಿ ನಿಜಾಮ್ ಶಾಹಿ ರಾಜವಂಶ ಮತ್ತು ಅಹ್ಮದ್ ನಗರ ಪಟ್ಟಣವನ್ನು ಸ್ಥಾಪಿಸಿದ ಅಹ್ಮದ್ ನಿಜಾಮ್ ಷಾ ಅವರಿಂದ ಅಹ್ಮದ್ ನಗರ ಎಂಬ ಹೆಸರು ಬಂದಿದೆ. * ಔರಂಗಾಬಾದ್ ಮತ್ತು ಒಸ್ಮಾನಾಬಾದ್ ಗಳಿಗೆ ಮೊಘಲ್ ಚಕ್ರವರ್ತಿಗಳಾದ ಔರಂಗಜೇಬ್ ಮತ್ತು ನಿಜಾಮ್ ಮಿರ್ ಒಸ್ಮಾನ್ ಅಲಿ ಖಾನ್ ಅವರ ಹೆಸರನ್ನು ಇಡಲಾಯಿತು.