* 2024ರ ಸಂತೋಷದಾಯಕ ದೇಶಗಳ ವರದಿ ಪ್ರಕಟಗೊಂಡಿದೆ, ಫಿನ್ ಲ್ಯಾಂಡ್ ದೇಶವನ್ನು 7804 ಅಂಕಗಳೊಂದಿಗೆ ಆರನೇ ಬಾರಿಗೆ ವಿಶ್ವದ ಅತ್ಯಂತ ಸಂತೋಷದಾಯಕ ದೇಶವೆಂದು ಪರಿಗಣಿಸಲಾಗಿದೆ.* ಈ ಸಂತೋಷದಾಯಕ ದೇಶಗಳ ವರದಿಯಪ್ರಕಾರ 146 ದೇಶಗಳಲ್ಲಿ ಭಾರತವು 126ನೇ ಸ್ಥಾನದಲ್ಲಿದೆ. 4036 ಅಂಕಗಳೊಂದಿಗೆ ಜಾಗತಿಕವಾಗಿ ಅತ್ಯಂತ ಕಡಿಮೆ ಸಂತೋಷದಾಯಕ ರಾಷ್ಟ್ರಗಳಲ್ಲಿ ಒಂದಾಗಿದೆ. ನೇಪಾಳ, ಬಾಂಗ್ಲಾದೇಶ ಮತ್ತು ಚೀನಾ ರಾಷ್ಟ್ರಗಳು ಸಂತೋಷದ ವಿಚಾರದಲ್ಲಿ ಭಾರತವನ್ನು ಮೀರಿಸಿವೆ.  * ಅನೇಕ ವಿಷಯಗಳಲ್ಲಿ ಅಗ್ರಸ್ಥಾನದಲ್ಲಿರುವ ಫಿನ್ ಲ್ಯಾಂಡ್ ದೇಶವು, ಸಮಾನತೆ, ಸ್ವಾತಂತ್ರ್ಯ, ಕಡಿಮೆ ಭ್ರಷ್ಟಾಚಾರ, ಸಹಾಯ, ಉತ್ತಮ ಆರೋಗ್ಯ, ಅಗ್ಗದ ಸಾರ್ವಜನಿಕ ಸಾರಿಗೆ, ಉತ್ತಮ ಗುಣಮಟ್ಟದ ಶಿಕ್ಷಣ, ಉತ್ತಮ ಜೀವನ ಶೈಲಿಗಳಿಗೆ ಹೆಸರುವಾಸಿಯಾಗಿದೆ. * ಫಿನ್‌ಲ್ಯಾಂಡ್‌ನ ವಿಶೇಷತೆ ಏನೆಂದರೆ ಇಲ್ಲಿ ವಿದ್ಯಾರ್ಥಿಗಳು ಪ್ರತಿದಿನ 3 ಜನರಿಗೆ ಸಹಾಯ ಮಾಡುತ್ತಾರೆ. ಮೇಲ್ನೋಟಕ್ಕೆ ಅತ್ಯಂತ ಸರಳವಾಗಿ ಗೋಚರಿಸುವ ಇದು, ಅಪಾರ ಸಂತೋಷವನ್ನು ನೀಡುವ ಕೆಲಸವಾಗಿದೆ. ಪ್ರತೀ ದಿನ ನಡೆಯುವ ಈ ಚಟುವಟಿಕೆ, ಮಕ್ಕಳ ಮನಸ್ಸನ್ನು ದಿನವಿಡೀ ಪ್ರಫುಲ್ಲತೆಯಿಂದಿರಿಸಲು ಸಹಾಯ ಮಾಡುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.* ಸಂತೋಷದಾಯಕ ದೇಶಗಳ ವರದಿಯನ್ನು 2012 ಏಪ್ರಿಲ್ 1ರಂದು ಮೊದಲ ಬಾರಿಗೆ ಬಿಡುಗಡೆಯಾಯಿತು. ಮೊದಲ ವರದಿಯು ಪ್ರಪಂಚದ ಸಂತೋಷದ ಸ್ಥಿತಿ, ಸಂತೋಷ ಮತ್ತು ದುಃಖದ ಕಾರಣಗಳು, ಕೇಸ್ ಸ್ಟಡೀಸ್ ಫಲಿತಾಂಶದ ಮೇಲೆ ಆಧರಿಸಿತ್ತು.* ವಿಶ್ವದ ಟಾಪ್ 10 ಸಂತೋಷದಾಯಕ ದೇಶಗಳು : 1ನೇ ಸ್ಥಾನ ಫಿನ್ ಲ್ಯಾಂಡ್ - 78042ನೇ ಸ್ಥಾನ ಡೆನ್ಮಾರ್ಕ್ - 7586  3ನೇ ಸ್ಥಾನ ಐಸ್ ಲ್ಯಾಂಡ್ - 75344ನೇ ಸ್ಥಾನ ಇಸ್ರೇಲ್ - 74735ನೇ ಸ್ಥಾನ ನೆದರ್ ಲ್ಯಾಂಡ್ - 74036ನೇ ಸ್ಥಾನ ಸ್ವೀಡನ್ - 73957ನೇ ಸ್ಥಾನ ನಾರ್ವೆ -73158ನೇ ಸ್ಥಾನ ಸ್ವಿಟ್ಜರ್ ಲ್ಯಾಂಡ್ - 72409ನೇ ಸ್ಥಾನ ಲಕ್ಸೆಂಬರ್ಗ್ - 7228  10ನೇ ಸ್ಥಾನ ನ್ಯೂಜಿಲೆಂಡ್ - 7128