* ಅರುಣ್‌ ಜೇಟ್ಲಿ ಮೈದಾನದಲ್ಲಿ ಮಾರ್ಚ್ 17 ರಂದು (ರವಿವಾರ) ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ (WPL) ಫೈನಲ್ ಪಂದ್ಯದಲ್ಲಿ ಅಮೋಘ ಆಟವಾಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ಮಹಿಳೆಯರ ವಿರುದ್ಧ ಅಧಿಕಾರಯುತ ಜಯ ಸಾಧಿಸಿ ಮೊದಲ ಬಾರಿ ಕಪ್ ಗೆದ್ದು ಐಪಿಎಲ್ ಆರಂಭಕ್ಕೂ ಮುನ್ನ ಆರ್ ಸಿಬಿ ತಂಡಕ್ಕೆ ಹೊಸ ಉತ್ಸಾಹದ ಮಾರ್ಗ ತೋರಿಸಿದ್ದಾರೆ.* ಸ್ಮೃತಿ ಮಂದಾನ ಅವರ ನಾಯಕತ್ವದ ಮಹಿಳಾ ತಂಡವು WPL ನ ಎರಡನೇ ಆವೃತ್ತಿಯಲ್ಲಿ ಪ್ರಶಸ್ತಿ ಜಯಸಿದ್ದು, ಅರುಣ್ ಜೇಟ್ಲೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ನಲ್ಲಿ 8 ವಿಕೆಟ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ ಸಿಬಿ ತಂಡ ಜಯಭೇರಿ ಸಾಧಿಸಿತ್ತು.  * ಡೆಲ್ಲಿ ಕ್ಯಾಪಿಟಲ್ಸ್ ವನಿತೆಯರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರ್ ಸಿಬಿ ಮಹಿಳೆಯರು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು 113 ರನ್ ಗಳಿಗೆ ಆಲೌಟ್ ಮಾಡಿದರು. ಗುರಿ ಬೆನ್ನಟ್ಟಿದ ಸ್ಮೃತಿ  ಮಂಧಾನ ಅವರ ಬಳಗ 19.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿ(115) ತಲುಪಿ ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. * ಸ್ಮೃತಿ ಮಂಧಾನ 31 ರನ್, ಸೋಫಿ ಡಿವೈನ್ 32 ರನ್ ಗಳಿಸಿ ಔಟಾದರು. ಆ ಬಳಿಕ ಎಲ್ಲಿಸ್ ಪೆರ್ರಿ(35) ರಿಚಾ ಘೋಷ್(17) ಗೆಲುವಿನತ್ತ ಕೊಂಡೊಯ್ದರು.* ಮಹಿಳಾ ಪ್ರೀಮಿಯರ್ ಲೀಗ್ 2023ನೇ ಸಾಲಿನಲ್ಲಿ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್  ಪ್ರಶಸ್ತಿಯನ್ನು ಪಡೆದಿತ್ತು.* ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿತು. ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 130 ರನ್ ಗಳಿಸಲು ಶಕ್ತವಾಯಿತು. ಬೆಂಗಳೂರು ಈ ಮೂಲಕ 5 ರನ್ಗಳ ಗೆಲುವಿನೊಂದಿಗೆ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಫೈನಲ್ ತಲುಪಿತು.* ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂದಾನ ಮತ್ತು ಸೋಫಿ ಡಿವೈನ್ (27 ಎಸೆತಗಳಲ್ಲಿ 32 ರನ್) ಮೊದಲ ವಿಕೆಟ್ಗೆ 49 ಎಸೆತಗಳಲ್ಲಿ 49 ರನ್ ಸೇರಿಸಿದರು. * ಒಂಬತ್ತನೇ ಓವರ್ನಲ್ಲಿ ಡಿವೈನ್ ಔಟ್ ಮಾಡಿದ ಶಿಖಾ ಪಾಂಡೆ ಜತೆಯಾಟ ಮುರಿದರು. ನಾಯಕಿ ಮಂಧನಾ (39 ಎಸೆತಗಳಲ್ಲಿ 31 ರನ್), ಎಲಿಸ್ ಪೆರ್ರಿ (37 ಎಸೆತಗಳಲ್ಲಿ 35* ರನ್) ಮತ್ತು ರಿಚಾ ಘೋಷ್ (14 ಎಸೆತಗಳಲ್ಲಿ 17 ರನ್) ಮಧ್ಯಮ ಓವರ್ಗಳಲ್ಲಿ ಯಾವುದೇ ಕುಸಿತವಾಗದಂತೆ ನೋಡಿಕೊಂಡರು.* ಆರ್‌ಸಿಬಿ ತಂಡದ ಮಹಿಳಾ ಆಟಗಾರರು : ಸ್ಮೃತಿ ಮಂದಾನ (ನಾಯಕಿ), ರಿಚಾ ಘೋಷ್ (ವಿಕೆಟ್‌ಕೀಪರ್), ಸೋಫಿ ಡಿವೈನ್, ಹೀಥರ್ ನೈಟ್, ಸಿಮ್ರನ್ ಬಹಾದ್ದೂರ್, ಸೋಫಿ ಡಿವೈನ್, ಶ್ರೇಯಾಂಕಾ ಪಾಟೀಲ, ಎಲಿಸ್ ಪೆರಿ, ಸೋಫಿ ಮಾಲಿನೆ, ರೇಣುಕಾ ಸಿಂಗ್, ಜಾರ್ಜಿಯಾ ವೆರ್ಹಾಮ್, ಆಶಾ ಶೋಭನಾ, ಏಕತಾ ಬಿಷ್ಠ, ಎಸ್. ಮೇಘನಾ, ಇಂದ್ರಾಣಿ ರಾಯ್, ಸತೀಶ್ ಶುಭಾ, ದಿಶಾ ಕಸತ್  * ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಹಿಳಾ ಆಟಗಾರರು : ಮೆಗ್ ಲ್ಯಾನಿಂಗ್ (ನಾಯಕಿ), ತನಿಯಾ ಭಾಟಿಯಾ (ವಿಕೆಟ್ ಕೀಪರ್), ಲಾರಾ ಹ್ಯಾರಿಸ್, ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ಅಲೈಸ್ ಕ್ಯಾಪ್ತಿ, ಮರಿಝಾನೆ ಕಾಪ್, ಶಿಖಾ ಪಾಂಡೆ, ಅನಾಬೆಲ್ ಸದರ್ಲೆಂಡ್, ಜೆಸ್ ಯಾನ್ಸೆನ್, ಮಿನು ಮಣಿ, ಪೂನಮ್ ಯಾದವ್, ಅರುಂಧತಿ ರೆಡ್ಡಿ, ತಿತಾಸ್ ಸಾಧು, ರಾಧಾ ಯಾದವ್ ಅಶ್ವನಿ ಕುಮಾರಿ, ಅಪರ್ಣಾ ಮಂಡಲ್, ವಿ. ಸ್ನೇಹಾ ದೀಪ್ತಿ. - ಪಂದ್ಯಾವಳಿಯ ಉದಯೋನ್ಮುಖ ಆಟಗಾರ್ತಿ - ಶ್ರೇಯಾಂಕ ಪಾಟೀಲ್- ಪಂದ್ಯಾವಳಿಯ ಅತ್ಯಂತ ಮೌಲ್ಯಯುತ ಆಟಗಾರ್ತಿ - ದೀಪ್ತಿ ಶರ್ಮಾ- ಆರೆಂಜ್ ಕ್ಯಾಪ್ - ಎಲ್ಲಿಸ್ ಪೆರ್ರಿ (347 ರನ್)- ಪರ್ಪಲ್ ಕ್ಯಾಪ್ - ಶ್ರೇಯಾಂಕ ಪಾಟೀಲ್ (13 ವಿಕೆಟ್)