* ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. * ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದು (ಆಗಸ್ಟ್ 15 2023) 10 ನೇ ಸ್ವಾತಂತ್ರ್ಯ ದಿನದ ಭಾಷಣವಾಗಿದೆ, ಮೋದಿಯವರು ಕೆಂಪು ಕೋಟೆಯಲ್ಲಿ ಸತತವಾಗಿ 90 ನಿಮಿಷಗಳ ಕಾಲ ಭಾಷಣವನ್ನು ಮಾಡಿದ್ದಾರೆ. * ಮೋದಿಯವರ ಸ್ವಾತಂತ್ರ್ಯ ದಿನದ ಭಾಷಣವು ಹಿಂದಿನ ಯಾವುದೇ ಪ್ರಧಾನಿ ಸತತವಾಗಿ 90 ನಿಮಿಷಗಳ ದೀರ್ಘಕಾಲ ಭಾಷಣವನ್ನು ಮಾಡಿರಲಿಲ್ಲ. * ಮೋದಿಯವರ ಭಾಷಣದ ಮಹತ್ವದ ಘೋಷಣೆಗಳು : •ಕ್ಷೌರಿಕರು ಮತ್ತು ಅಕ್ಕಸಾಲಿಗರನ್ನು ಉನ್ನತೀಕರಿಸುವ ಉದ್ದೇಶದಿಂದ ವಿಶ್ವಕರ್ಮ ಯೋಜನೆ ಆರಂಭಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದರು.•ಮಣಿಪುರದಲ್ಲಿ ನಡೆಯುತ್ತಿರುವ ಬಿಕ್ಕಟ್ಟನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈಶಾನ್ಯ ರಾಜ್ಯಕ್ಕೆ ಶಾಂತಿಯುತ ಪರಿಹಾರವನ್ನು ಅನುಸರಿಸಲಾಗುವುದು ಎಂದು ಭರವಸೆ ನೀಡಿದರು.• ಗಡಿ ಗ್ರಾಮಗಳ ದೃಷ್ಟಿಕೋನವನ್ನು ಪರಿವರ್ತಿಸುವ ಸರ್ಕಾರದ “ವೈಬ್ರಂಟ್ ವಿಲೇಜಸ್” ಉಪಕ್ರಮವನ್ನು ಪ್ರಧಾನಿ ಮೋದಿ ಎತ್ತಿ ತೋರಿಸಿದರು.