* 77 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕೆಂಪು ಕೋಟೆಯ ಆವರಣದಿಂದ ದೇಶವನ್ನುದ್ದೇಶಿಸಿ ಆಗಸ್ಟ್ 15 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕುಶಲ ಕಾರ್ಮಿಕರು, ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ನಗರ ಬಡವರಿಗಾಗಿ ಹಲವಾರು ಯೋಜನೆಗಳನ್ನು ಘೋಷಿಸಿದರು .* ದೇಶದ ಕಾರ್ಮಿಕರಿಗೆ, ಕ್ಷೌರಿಕರು, ಅಕ್ಕಸಾಲಿಗರು, ಬಟ್ಟೆ ಒಗೆಯುವವರು ಮುಂತಾದ ನುರಿತ ಕೆಲಸಗಳಿಗೆ ₹ 13,000 ಕೋಟಿಯಿಂದ ₹ 15,000 ಕೋಟಿ ರೂಪಾಯಿ ಮೀಸಲಿಡುವ ವಿಶ್ವಕರ್ಮ ಯೋಜನೆಗೆ ಸರ್ಕಾರ ಚಾಲನೆ ನೀಡಿದ್ದಾರೆ.* ಈ ಯೋಜನೆಯನ್ನು ಸೆಪ್ಟೆಂಬರ್‌ನಲ್ಲಿ ನಡೆಯುವ ವಿಶ್ವಕರ್ಮ ಜಯಂತಿಯಂದು ಈ ಯೋಜನೆಗೆ ಚಾಲನೆ ನೀಡಲಾಗುವುದು. * ನಗರ ಬಡವರು ಮತ್ತು ಮಧ್ಯಮ ವರ್ಗದವರಿಗೆ ಸ್ವಂತ ಮನೆ ಹೊಂದಲು ಹೊಸ ನಗರ ವಸತಿ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.