Job Description: * ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಖ್ಯಾತಿಯ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಉತ್ಸಾ ಪಟ್ನಾಯಕ್ ಅವರು 2023 ರ ಪ್ರತಿಷ್ಠಿತ ಮಾಲ್ಕಮ್ ಆದಿಶೇಷಯ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಪ್ರಶಸ್ತಿಯನ್ನು ಮಾಲ್ಕಮ್ ಮತ್ತು ಎಲಿಜಬೆತ್ ಆದಿಶೇಷಯ್ಯ ಟ್ರಸ್ಟ್ ನಿಂದ ನೀಡಲಾಗುತ್ತದ.* ಉತ್ಸಾ ಪಟ್ನಾಯಕ್ ಪ್ರಶಸ್ತಿಯನ್ನು ಚೆನ್ನೈನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ಮತ್ತು ₹2 ಲಕ್ಷ ನಗದು ಬಹುಮಾನವನ್ನು ಸ್ವೀಕರಿಸಲಿದ್ದು, ಪ್ರಶಸ್ತಿ ಪ್ರಧಾನಮಾಡುವ ದಿನಾಂಕವನ್ನು ಶೀಘ್ರದಲ್ಲೇ ಟ್ರಸ್ಟ್ ಪ್ರಕಟಿಸಲಿದೆ. * 2022 ರಲ್ಲಿ,ಈ ಪ್ರಶಸ್ತಿಯನ್ನು ಭಾರತೀಯ ಅರ್ಥಶಾಸ್ತ್ರಜ್ಞ ಪ್ರಭಾತ್ ಪಟ್ನಾಯಕ್ ಅವರಿಗೆ ನೀಡಲಾಯಿತು. * ಉತ್ಸಾ ಪಟ್ನಾಯಕ್ ರವರ ಕೃಷಿ ಸಂಬಂಧಗಳು, ರೈತ ಚಳುವಳಿಗಳು, ಆಹಾರ ಭದ್ರತೆ, ಬಡತನ ನಿರ್ಮೂಲನೆ, ಹಣಕಾಸು ನೀತಿ, ವ್ಯಾಪಾರ ನೀತಿ, ಸಾಲದ ಬಿಕ್ಕಟ್ಟು, ಜಾಗತೀಕರಣ, ನವ ಉದಾರವಾದ, ಬಂಡವಾಳಶಾಹಿ, ಸಮಾಜವಾದ, ಮಾರ್ಕ್ಸಿಸಂ-ಲೆನಿನಿಸಂ- ಮುಂತಾದ ಅಭಿವೃದ್ಧಿ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಹಲವಾರು ಪುಸ್ತಕಗಳು ಮತ್ತು ಲೇಖನಗಳನ್ನು ಬರೆದಿದ್ದಾರೆ.