* 2023-24ನೇ ಹಣಕಾಸು ವರ್ಷ ಭಾರತದ ಆರ್ಥಿಕ ಬೆಳವಣಿಗೆ ದರದ  ಜಿಡಿಪಿಯು 3 ನೇ  ತ್ರೈಮಾಸಿಕದಲ್ಲಿ ಶೇ 8.4 ರಷ್ಟು ದಾಖಲಾಗಿದೆ .* ಕಳೆದ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ 4.3ರಷ್ಟು ದಾಖಲಾಗಿತ್ತು. ತಯಾರಿಕಾ ವಲಯ. ಗಣಿಗಾರಿಕೆ ಮತ್ತು ನಿರ್ಮಾಣ ವಲಯವು ಸಕಾರಾತ್ಮಕ ಬೆಳವಣಿಗೆ  ಹೊಂದಿದ್ದು ಡಿಸೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಏರಿಕೆಗೆ ಕಾರಣವಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಇಲಾಖೆ (NSO)ಯು  ಫೆಬ್ರುವರಿ 29 ರಂದು ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.*  2023-24ರ ಹಣಕಾಸು ವರ್ಷದಲ್ಲಿ ಜಿಡಿಪಿಯು ಶೇ 7.3ರಷ್ಟು ಪ್ರಗತಿ ಕಾಣಲಿದೆ ಎಂದು ಜನವರಿಯಲ್ಲಿ ಬಿಡುಗಡೆಗೊಂಡಿದ್ದ  NSO ವರದಿಯಲ್ಲಿ ಅಂದಾಜಿಸಲಾಗಿತ್ತು. ಈಗಿನ ವರದಿಯಲ್ಲಿ  ಶೇ 7.6ರಷ್ಟು ಬೆಳವಣಿಗೆ ದಾಖಲಿಸಲಿದೆ ಎಂದು ಹೇಳಿದೆ.* 2023 ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇ 4.8ರಷ್ಟು ಬೆಳವಣಿಗೆ ಕಂಡಿದ್ದು , ತಯಾರಿಕಾ ವಲಯವು ಈ ಅವಧಿಯಲ್ಲಿ ಶೇ 11.5ರಷ್ಟು ಬೆಳವಣಿಗೆ ದಾಖಲಿಸಿದೆ. ಗಣಿಗಾರಿಕೆಯು ಶೇ 1.4ರಿಂದ ಶೇ 7.5ರಷ್ಟು ಬೆಳವಣಿಗೆ ಕಂಡಿದೆ. ನಿರ್ಮಾಣ ವಲಯವು ಶೇ 9.5ರಷ್ಟು ಪ್ರಗತಿ ಸಾಧಿಸಿದೆ.* 2023 ರ ಹಣಕಾಸು ವರ್ಷದ ಅವಧಿಯಲ್ಲಿ ಶೇ.5.2ರಷ್ಟು ಬೆಳವಣಿಗೆ ಕಂಡಿದ್ದು  ಕೃಷಿ ವಲಯವು ಶೇ0.8ರಷ್ಟು ಇಳಿಕೆ ದಾಖಲಿಸಿದೆ.  ವಿದ್ಯುತ್, ಅನಿಲ, ನೀರು ಪೂರೈಕೆ ಸೇರಿದಂತೆ ಇತರೆ ಸೇವಾ ವಲಯಗಳು ಶೇ 8.7ರಿಂದ ಶೇ 9ರಷ್ಟು ಬೆಳವಣಿಗೆ ದಾಖಲಿಸಿವೆ.* 2022 -23 ರಲ್ಲಿ 269.50 ಲಕ್ಷ ಕೋಟಿ ಇದ್ದ ಜಿಡಿಪಿ ಗಾತ್ರವು 2023 -24 ರಲ್ಲಿ 293.90 ಕೋಟಿಗೆ ತಲುಪಿದೆ . * 2023 ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಆರ್ಥಿಕತೆಯ ಗಾತ್ರವು ಶೇ , 9.1 ರಷ್ಟು ಏರಿಕೆಯಾಗಲಿದೆ  ಎಂದು ವರದಿ ತಿಳಿಸಿದೆ .