* ಭಾರತದ ಆರು ರಾಷ್ಟ್ರೀಯ ಪಕ್ಷಗಳು 2022-23ರ 'ಹಣಕಾಸು ವರ್ಷದಲ್ಲಿ 3,077 ಕೋಟಿ ರೂ. ಆದಾಯ ಗಳಿಸಿದ್ದು, ಇದರಲ್ಲಿ ಬಿಜೆಪಿ ಪಕ್ಷ 2,361 ಕೋಟಿ ರೂ. ಗಳಿಸಿದೆ. ಅಂದರೆ 6 ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದಲ್ಲಿ ಶೇ. 75.73ರಷ್ಟು ಬಿಜೆಪಿ ಪಕ್ಷದ್ದಾಗಿದೆ .* ಭಾರತದ ಆರು ರಾಷ್ಟೀಯ ಪಕ್ಷಗಳ ಒಟ್ಟು ಆದಾಯ ಶೇ, 14.70 ಆಗಿದ್ದು, ಕಾಂಗ್ರೆಸ್ ಪಕ್ಷವು 452.37 ಕೋಟಿ ಆದಾಯಗಳಿಸಿ 2 ನೇ ಸ್ಥಾನದಲ್ಲಿದೆ. * 2021-22 ರ ಹಣಕಾಸು ವರ್ಷದಿಂದ 2022-23 ರ ಹಣಕಾಸು ವರ್ಷದವರೆಗೆ ಬಿಜೆಪಿಯ ಆದಾಯ ಶೇ. 23.15ರಷ್ಟು  (443.72 ಕೋಟಿ ರೂ.) ಹೆಚ್ಚಾಗಿದೆ. ಈ ಅವಧಿಯಲ್ಲಿ ಕಾಂಗ್ರೆಸ್ಸಿನ ಆದಾಯ ಶೇ. 16.42ರಷ್ಟು (88.90 3 ಕೋಟಿ ರೂ) ಹೆಚ್ಚಾಗಿದೆ .