Job Description: ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ)ವು ಎಪ್ರಿಲ್ 1ರಿಂದ ಮರ್ಚಂಟ್ (ವ್ಯಾಪಾರಿ) ಯುಪಿಐ ವಹಿವಾಟುಗಳಿಗೆ ಶೇ.1.1ರವರೆಗೆ ಇಂಟರ್‌ಚೇಂಜ್ ಶುಲ್ಕವನ್ನು ವಿಧಿಸಲಾಗುವುದು ಎಂದು ತಿಳಿಸಿದೆ. 2,000ರೂ.ಗಳಿಗೂ ಹೆಚ್ಚಿನ UPI ಮೂಲಕ ವಹಿವಾಟುಗಳಿಗೆ ಪ್ರಿಪೇಡ್ ಪಾವತಿ ಸಾಧನ (ಪಿಪಿಐ)ಗಳ ಬಳಕೆಗಾಗಿ ಇಂಟರ್‌ಚೇಂಜ್ ಶುಲ್ಕವನ್ನು ವಿಧಿಸಲಾಗುವುದು ಎಂದು ಎನ್‌ಪಿಸಿಐ ತನ್ನ ಇತ್ತೀಚಿನ ಸುತ್ತೋಲೆಯಲ್ಲಿ ಪ್ರಕಟಿಸಿದೆ.