* ಎಸ್ ಪ್ಲನೇಡ್ ನಿಂದ ಮೈದಾನದವರೆಗಿನ ಟ್ರಾಮ್ ರೈಲು ಸಂಚಾರವನ್ನು ಹೊರತುಪಡಿಸಿ, ಕೋಲ್ಕತ್ತಾದಲ್ಲಿನ ಎಲ್ಲ ಮಾರ್ಗಗಳ ಟ್ರಾಮ್ ರೈಲು ಸೇವೆಯನ್ನು ಸ್ಥಗಿತಗೊಳಿಸಲು ಪಶ್ಚಿಮ ಬಂಗಾಳ ಸರಕಾರ ನಿರ್ಧರಿಸಿದೆ.* ಕೋಲ್ಕತ್ತಾದಲ್ಲಿನ ಟ್ರಾಮ್ ರೈಲು ಸೇವೆಗೆ 150 ವರ್ಷಗಳ ಇತಿಹಾಸವಿದೆ. ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಸಾರಿಗೆ ಸಚಿವ ಸ್ನೇಹಾಸಿಸ್ ಚಕ್ರವರ್ತಿ “ಪ್ರಯಾಣಿಕರಿಗೆ ವೇಗದ ಸಾರಿಗೆಯ ಅಗತ್ಯವಿದ್ದು, ಟ್ರಾಮ್ ರೈಲುಗಳು ನಿಧಾನಗತಿಯಲ್ಲಿ ಸಂಚರಿಸುವುದರಿಂದ ರಸ್ತೆಗಳಲ್ಲಿ ವಾಹನ ದಟ್ಟಣೆಯುಂಟಾಗುತ್ತಿದೆ. ಎಂದು ಹೇಳಿದ್ದಾರೆ.* ಫೆಬ್ರವರಿ 24, 1873ರಲ್ಲಿ ಬ್ರಿಟಿಷರು ಹಳಿಯ ಮೇಲೆ ಕುದುರೆ ಎಳೆಯುವ ಕಾರಾಗಿ ಮೊದಲ ಬಾರಿಗೆ ಟ್ರಾಮ್ ರೈಲನ್ನು ಪರಿಚಯಿಸಿದ್ದರು. ಬಳಿಕ ಆಧುನಿಕರಣಗೊಂಡು ೧೯೦೦ ರಲ್ಲಿ ಮೊದಲ ವಿದ್ಯುತ್ ಚಾಲಿತ ಟ್ರಾಮ್ ರೈಲು ಪ್ರಾರಂಭವಾಯಿತು.* ಈ ಟ್ರಾಮ್ ರೈಲುಗಳು  ಪಾಟ್ನಾ, ಚೆನ್ನೈ, ನಾಸಿಕ್ ಮುಂಬಯಿ ನಗರಗಳಲ್ಲಿ ಸಂಚರಿಸುತಿತ್ತು.