* ಕೇಂದ್ರ ಸರ್ಕಾರವು ಶೀಘ್ರದಲ್ಲೇ ಕೌಶಲ್ಯ ವೋಚರ್ ಚೀಟಿ ವ್ಯವಸ್ಥೆಯನ್ನು ಪ್ರಾರಂಭಿಸಲಿದೆ ಎಂದು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಅವರು ಫಿಕ್ಕಿಯ ಗ್ಲೋಬಲ್ ಸ್ಕಿಲ್ಸ್ ಶೃಂಗಸಭೆ(2024)ಯಲ್ಲಿ ತಿಳಿಸಿದ್ದಾರೆ.* ಯುವಜನತೆ ಗುಣಮಟ್ಟದ ಕೌಶಲ ತರಬೇತಿ ಪಡೆದುಕೊಳ್ಳುವುದು ಇನ್ನಷ್ಟು ಸುಗಮ ಹಾಗೂ ಸರಾಗಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸ್ಕಿಲ್ ವೋಚರ್ ಗಳನ್ನು ನೀಡಲಿದೆ.* ರಾಷ್ಟ್ರವ್ಯಾಪಿ 1,000 ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ನವೀಕರಿಸಲು ಕೇಂದ್ರವು ಉದ್ಯಮದ ಪಾಲುದಾರಿಕೆಯನ್ನು ಸಕ್ರಿಯವಾಗಿ ಬಯಸುತ್ತಿದೆ.* ಈ ಮಹತ್ವಾಕಾಂಕ್ಷೆಯ ಯೋಜನೆಯು 200 ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐ) ಹಬ್ ಸಂಸ್ಥೆಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ.* ಸೆಂಟರ್ ಫಾರ್ ಸಿವಿಲ್ ಸೊಸೈಟಿ ನೀಡಿರುವ ಮಾಹಿತಿ ಪ್ರಕಾರ ಮುಂಬೈ ಹಾಗೂ ಪುಣೆಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ಬರಲಿದೆ. ಒಟ್ಟು 10,000 ವೋಚರ್‌ಗಳನ್ನು ನೀಡಲಾಗುತ್ತದೆ.* ಕೇಂದ್ರ ಸರ್ಕಾರದ ಕನಿಷ್ಠ ಹಾಗೂ ರಾಜ್ಯ ಸರ್ಕಾರದ ತಲಾ ಎರಡು ಯೋಜನೆಗಳಲ್ಲಿನ ತರಬೇತಿಯನ್ನು ಈ ಮೂಲಕ ಪಡೆಯಲು ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.* ಆಟೋಮೊಬೈಲ್, ಬ್ಯಾಂಕಿಂಗ್, ನಿರ್ಮಾಣ ಕ್ಷೇತ್ರ, ಪ್ರಯಾಣ ಮತ್ತು ಪ್ರವಾಸೋದ್ಯಮ ಒಳಗೊಂಡಂತೆ ತೀವ್ರ ಬೆಳವಣಿಗೆಯಿರುವ ವಲಯಗಳಲ್ಲಿ ಕೌಶಲ ತರಬೇತಿ ನೀಡಲಾಗುತ್ತದೆ. ಒಂದೂವರೆಯಿಂದ ನಾಲ್ಕು ತಿಂಗಳ ಅಲ್ಪಾವಧಿಯ ತರಬೇತಿಯನ್ನು ಆರಂಭದಲ್ಲಿ ನೀಡಲಾಗುತ್ತದೆ.* ತರಬೇತಿ ಬಳಿಕ ನೀಡಲಾಗುವ ಪ್ರಮಾಣಪತ್ರಕ್ಕೆ ಅಖಿಲ ಭಾರತ ಮಟ್ಟದಲ್ಲಿ ಮಾನ್ಯತೆ ಇರಲಿದೆ. ಉದ್ಯೋಗ, ನೇಮಕಾತಿ, ಉದ್ಯಮ, ಸಲ ಸೌಲಭ್ಯ ಮೊದಲಾದ ಉದ್ದೇಶಗಳಿಗೆ ಈ ಪ್ರಮಾಣಪತ್ರ ಬಳಕೆಯಾಗಲಿದೆ.