Loading..!

UPSC 2025 ಭರ್ಜರಿ ನೇಮಕಾತಿ – 845 ಹುದ್ದೆಗಳ ಅವಕಾಶ, SSLC ಪಾಸಾದವರು ಕೂಡ ಅರ್ಜಿ ಸಲ್ಲಿಸಿ!
Published by: Yallamma G | Date:12 ಡಿಸೆಂಬರ್ 2025
not found

UPSC 2025 ಭರ್ಜರಿ ನೇಮಕಾತಿ ಅವಕಾಶ ಬಂದಿದೆ! ಒಟ್ಟು 845 ಹುದ್ದೆಗಳಿಗೆ SSLC ಪಾಸಾದವರು ಕೂಡ ಅರ್ಜಿ ಸಲ್ಲಿಸಬಹುದು. ಸರ್ಕಾರಿ ನೌಕರಿಯ ಕನಸು ಕಂಡವರಿಗೆ ಇದು ಚಿನ್ನದ ಅವಕಾಶ.


               ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಡಿಸೆಂಬರ್ 2025 ರ ಅಧಿಕೃತ ಅಧಿಸೂಚನೆಯ ಹೊರಡಿಸಿದ್ದು ಈ ನೇಮಕಾತಿ ಅಡಿಯಲ್ಲಿಭಾರತೀಯ ಸೇನಾ ಅಕಾಡೆಮಿ, ವಾಯುಪಡೆ ಅಕಾಡೆಮಿ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಸೇನೆ), ಮಹಿಳಾ ಅಧಿಕಾರಿಗಳ ತರಬೇತಿ ಅಕಾಡೆಮಿ ಮತ್ತು ಭಾರತೀಯ ನೌಕಾ ಅಕಾಡೆಮಿ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕಮಾಡಿಕೊಳಲಾಗುತ್ತದೆ. ಒಟ್ಟು  845 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ವಿಶೇಷವಾಗಿ ಯುವಕರು, ಕೆಲಸ ಹುಡುಕುತ್ತಿರುವವರು, ಮತ್ತು ಸರ್ಕಾರಿ ಕ್ಷೇತ್ರದಲ್ಲಿ ಕರಿಯರ್ ಮಾಡಲು ಬಯಸುವವರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. 


            ಕೇಂದ್ರ ಸರ್ಕಾರಿ ನೌಕರಿಯ ಕನಸು ಕಂಡವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 30-ಡಿಸೆಂಬರ್-2025 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. 


               ನಾವು ಈ ಲೇಖನದಲ್ಲಿ ಮುಖ್ಯವಾಗಿ ಎರಡು ಅಂಶಗಳನ್ನು ತಿಳಿಸುತ್ತೇವೆ: ಮೊದಲು ಅರ್ಹತೆ ಮತ್ತು ಶೈಕ್ಷಣಿಕ ಅವಶ್ಯಕತೆಗಳ ಸಂಪೂರ್ಣ ವಿವರಗಳು, ಮತ್ತು ಎರಡನೆಯದಾಗಿ ಅರ್ಜಿ ಪ್ರಕ್ರಿಯೆ ಮತ್ತು ಮುಖ್ಯ ದಿನಾಂಕಗಳ ಬಗ್ಗೆ. ಅಂತಿಮವಾಗಿ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಹಾಯಕವಾದ ತಯಾರಿ ತಂತ್ರಗಳನ್ನೂ ಹಂಚಿಕೊಳ್ಳುತ್ತೇವೆ.


📌ಮುಖ್ಯಾಂಶಗಳು :
ಸಂಸ್ಥೆಯ ಹೆಸರು : ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ( UPSC )
ಹುದ್ದೆಗಳ ಸಂಖ್ಯೆ: 845
ಉದ್ಯೋಗ ಸ್ಥಳ: ಅಖಿಲ ಭಾರತ
ಹುದ್ದೆ ಹೆಸರು: ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ
ಸಂಬಳ: ತಿಂಗಳಿಗೆ ರೂ. 56,100 – 2,25,000/-

AS, PSI, FDA, SDA, RRB, PC ಮತ್ತು ಇತರ ಟೆಸ್ಟ್ ಸರಣಿಗಳನ್ನು ಕನ್ನಡದಲ್ಲಿ ಅಭ್ಯಾಸ ಮಾಡಲು ಇಲ್ಲಿ ಒತ್ತಿ.


📌ಹುದ್ದೆಗಳ ವಿವರ : 


ಭಾರತೀಯ ಸೇನಾ ಅಕಾಡೆಮಿ : 100 
ಭಾರತೀಯ ನೌಕಾ ಅಕಾಡೆಮಿ : 26
ವಾಯುಪಡೆ ಅಕಾಡೆಮಿ : 32
ಅಧಿಕಾರಿಗಳ ತರಬೇತಿ ಅಕಾಡೆಮಿ (ಪುರುಷರು) : 275
ಮಹಿಳಾ ಅಧಿಕಾರಿಗಳ ತರಬೇತಿ ಅಕಾಡೆಮಿ : 18
ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಸೇನೆ) : 208
ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ನೌಕಾಪಡೆ) : 42
ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ವಾಯುಪಡೆ) : 120
ನೌಕಾ ಅಕಾಡೆಮಿ : 24


🎓ಅರ್ಹತೆಗಳು: ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. 
=> ಭಾರತೀಯ ಸೇನಾ ಅಕಾಡೆಮಿ, ಭಾರತೀಯ ನೌಕಾ ಅಕಾಡೆಮಿ, ವಾಯುಪಡೆ ಅಕಾಡೆಮಿ ಮತ್ತು ಅಧಿಕಾರಿಗಳ ತರಬೇತಿ ಅಕಾಡೆಮಿ :  ಪದವಿ, ಬಿಇ/ಬಿ.ಟೆಕ್
=> ರಾಷ್ಟ್ರೀಯ ರಕ್ಷಣಾ ಅಕಾಡೆಮಿ : 10ನೇ , 12ನೇ
=> ನೌಕಾ ಅಕಾಡೆಮಿ :  12ನೇ


💸ಅರ್ಜಿ ಶುಲ್ಕ:
ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆಗೆ
ಇತರ ಎಲ್ಲಾ ಅಭ್ಯರ್ಥಿಗಳು: ರೂ. 200/-
SC/ST ಅಭ್ಯರ್ಥಿಗಳು: ಇಲ್ಲ
ಪಾವತಿ ವಿಧಾನ: ಆನ್‌ಲೈನ್


ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಪರೀಕ್ಷೆಗೆ
ಇತರ ಎಲ್ಲಾ ಅಭ್ಯರ್ಥಿಗಳು: ರೂ. 100/-
SC/ST ಅಭ್ಯರ್ಥಿಗಳು: ಇಲ್ಲ
ಪಾವತಿ ವಿಧಾನ: ಆನ್‌ಲೈನ್

🎂ವಯೋಮಿತಿ: 
ಅಭ್ಯರ್ಥಿಗಳು ಕನಿಷ್ಠ 21 ವರ್ಷದಿಂದ ಗರಿಷ್ಠ 30 ವರ್ಷ (01-ಜನವರಿ-2026ರ ಮಾನದಂಡದಂತೆ) ಗಳ ವಯೋಮಿತಿಯನ್ನು ಹೊಂದಿರಬೇಕು.


ವಯೋಮಿತಿ ಸಡಿಲಿಕೆ:
- SC/ST ಅಭ್ಯರ್ಥಿಗಳಿಗೆ: 5 ವರ್ಷ
- OBC ಅಭ್ಯರ್ಥಿಗಳಿಗೆ: 3 ವರ್ಷ
- PwBD ಅಭ್ಯರ್ಥಿಗಳಿಗೆ: 10 ವರ್ಷ


📥ಆಯ್ಕೆ ಪ್ರಕ್ರಿಯೆ:
ಪೂರ್ವಭಾವಿ ಪರೀಕ್ಷೆ
ಮುಖ್ಯ ಪರೀಕ್ಷೆ
ವೈದ್ಯಕೀಯ ಪರೀಕ್ಷೆ
SSB ಸಂದರ್ಶನ


UPSC ಪರೀಕ್ಷಾ ಮಾದರಿ 2026
➡️ ಪೂರ್ವಭಾವಿ ಪರೀಕ್ಷೆ : ಈ ಅಕಾಡೆಮಿಗಳಿಗಾಗಿ ಮೂರು ವಿಷಯಗಳ ಲಿಖಿತ ಪರೀಕ್ಷೆ:
English 100 ಪ್ರಶ್ನೆಗಳು 2 ಗಂಟೆ ಸಮಯ ಇರುತ್ತದೆ.  
General Knowledge (GK) 100 ಪ್ರಶ್ನೆಗಳು 2 ಗಂಟೆ ಸಮಯ ಇರುತ್ತದೆ.
Elementary Mathematics 100 ಪ್ರಶ್ನೆಗಳು 2 ಗಂಟೆ ಸಮಯ ಇರುತ್ತದೆ.


➡️ ಮುಖ್ಯ ಪರೀಕ್ಷೆ : Officers Training Academy (OTA – ಪುರುಷರು ಹಾಗೂ ಮಹಿಳೆಯರು) OTAಗೆ ಎರಡು ವಿಷಯಗಳು ಮಾತ್ರ:
English 100 ಪ್ರಶ್ನೆಗಳು 2 ಗಂಟೆ ಸಮಯ ಇರುತ್ತದೆ.
General Knowledge (GK)100 ಪ್ರಶ್ನೆಗಳು 2 ಗಂಟೆ ಸಮಯ ಇರುತ್ತದೆ.


➡️ ಪ್ರಶ್ನೆಗಳ ಸ್ವರೂಪ
ಎಲ್ಲಾ ಪ್ರಶ್ನೆಗಳು Objective Type (Multiple Choice Questions).
ಪ್ರಶ್ನೆಗಳು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಲಭ್ಯ.
ನಕಾರಾತ್ಮಕ ಅಂಕ (Negative Marking) ಇದೆ.
ತಪ್ಪು ಉತ್ತರಕ್ಕೆ 1/3 ಅಂಕ ಕಡಿತ.


➡️ SSB ಸಂದರ್ಶನ (SSB Interview)
IMA, INA, AFA
300 ಅಂಕಗಳು (ಲಿಖಿತ ಪರೀಕ್ಷೆಯಷ್ಟು)
OTA : 200 ಅಂಕಗಳು
SSB ಎರಡು ಹಂತಗಳು
Stage I: OIR Test + Picture Perception & Description Test
Stage II: Psychology Test, GTO Tasks, Interview 


➡️ ಮೆಡಿಕಲ್ ಪರೀಕ್ಷೆ : 
ಸೇನೆಯಲ್ಲಿ ಸೇರಲು ಅಗತ್ಯವಿರುವ ದೈಹಿಕ ಮಾನದಂಡಗಳ ಆಧಾರದ ಮೇಲೆ ಪರೀಕ್ಷೆ.
ದೃಷ್ಟಿ, ಎತ್ತರ, ತೂಕ, ಆರೋಗ್ಯ ಸಂಬಂಧಿತ ಪರೀಕ್ಷೆಗಳು.


➡️  ಅಂತಿಮ ಆಯ್ಕೆ (Final Merit List)
ಲೆಖಿತ ಪರೀಕ್ಷೆಯ ಅಂಕಗಳು + SSB ಸಂದರ್ಶನ ಅಂಕಗಳು
ಮೆಡಿಕಲ್ ಪರೀಕ್ಷೆ ಪಾಸ್ ಆಗುವುದು ಕಡ್ಡಾಯ.


💸ಮಾಸಿಕ ವೇತನ : 
ಲೆಫ್ಟಿನೆಂಟ್ : ರೂ. 56,100 -1,77,500/-
ಕ್ಯಾಪ್ಟನ್ : ರೂ. 61,300- 1,93,900/-
ಮೇಜರ್ : ರೂ. 69,400 – 2,07,200/-
ಲೆಫ್ಟಿನೆಂಟ್ ಕರ್ನಲ್  : ರೂ. 1,21,200 – 2,12,400/-
ಕರ್ನಲ್  : ರೂ. 1,30,600-2,15,900/-
ಬ್ರಿಗೇಡಿಯರ್  : ರೂ. 1,39,600-2,17,600/-
ಮೇಜರ್ ಜನರಲ್  : ರೂ. 1,44,200-2,18,200/-
ಲೆಫ್ಟಿನೆಂಟ್ ಜನರಲ್ HAG ಸ್ಕೇಲ್  : ರೂ. 1, 82, 200-2,24,100/-
HAG+ಸ್ಕೇಲ್  : ರೂ. 2,05,400 – 2,24,400/-
VCOAS/ಸೇನಾ ಕಮಾಂಡರ್/ ಲೆಫ್ಟಿನೆಂಟ್ ಜನರಲ್  : ರೂ. 2,25,000/-
ಸಿಒಎಎಸ್ ಲೆಫ್ಟಿನೆಂಟ್ ನಿಂದ ಮೇಜರ್ ವರೆಗೆ  : ರೂ. 56,100 – 2,07,200/-
ಲೆಫ್ಟಿನೆಂಟ್ ಕರ್ನಲ್ ನಿಂದ ಮೇಜರ್ ಜನರಲ್ ವರೆಗೆ : ರೂ. 1,21,200 – 2,18,200/-
ಲೆಫ್ಟಿನೆಂಟ್ ಜನರಲ್ (HAG ಸ್ಕೇಲ್)  : ರೂ. 1,82,200 – 2,24,100/-
ಲೆಫ್ಟಿನೆಂಟ್ ಜನರಲ್ (HAG+ ಸ್ಕೇಲ್) : ರೂ. 2,05,400 – 2,24,400/-
VCOAS/ಸೇನಾ ಕಮಾಂಡರ್/ ಲೆಫ್ಟಿನೆಂಟ್ ಜನರಲ್ : ರೂ. 2,25,000/-


📋ಅರ್ಜಿ ಸಲ್ಲಿಸುವ ವಿಧಾನ:
• ಮೊದಲನೆಯದಾಗಿ UPSC ನೇಮಕಾತಿ ಅಧಿಸೂಚನೆ 2025 ಅನ್ನು ಸಂಪೂರ್ಣವಾಗಿ ಓದಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
• ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
• UPSC ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ ಎಕ್ಸಾಮಿನೇಷನ್ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ – ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
• UPSC ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯಿಸಿದರೆ) ಅಪ್‌ಲೋಡ್ ಮಾಡಿ.
• ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
• UPSC ನೇಮಕಾತಿ 2025 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಗೆ ಸಲ್ಲಿಸು ಬಟನ್ ಕ್ಲಿಕ್ ಮಾಡಿ. ಬಹು ಮುಖ್ಯವಾಗಿ ಅರ್ಜಿ ಸಂಖ್ಯೆ ಅಥವಾ ಹೆಚ್ಚಿನ ಉಲ್ಲೇಖಕ್ಕಾಗಿ ವಿನಂತಿ ಸಂಖ್ಯೆಯನ್ನು ಸೆರೆಹಿಡಿಯಿರಿ.


📅ಪ್ರಮುಖ ದಿನಾಂಕಗಳು : 
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 10-12-2025
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-ಡಿಸೆಂಬರ್-2025
ಪರೀಕ್ಷೆಯ ದಿನಾಂಕ: 12ನೇ ಏಪ್ರಿಲ್ 2026

Application End Date:  30 ಡಿಸೆಂಬರ್ 2025
To Download Official Notification

Comments