Loading..!

ಬೆಳಗಾವಿ ಜಿಲ್ಲೆಯಲ್ಲಿರುವ ಶ್ರೀ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಹಿಡಕಲ್ ಡ್ಯಾಂ ಈ ಕಾರ್ಖಾನೆಯಲ್ಲಿ ಖಾಲಿ ಇರುವ ಸುಮಾರು 126 ವಿವಿಧ ಹುದ್ದೆಗಳ ನೇಮಕಾತಿ
| Date:11 ಸೆಪ್ಟೆಂಬರ್ 2019
not found
ಬೆಳಗಾವಿ ಜಿಲ್ಲೆಯಲ್ಲಿರುವ ಶ್ರೀ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಹಿಡಕಲ್ ಡ್ಯಾಂ ಈ ಕಾರ್ಖಾನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಕಾರ್ಖಾನೆಯ ಆಡಳಿತ ಮಂಡಳಿಯು ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಕೆಳಗೆ ಹುದ್ದೆಗಳ ವಿವರಗಳನ್ನು ನೀಡಲಾಗಿದೆ ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಹುದ್ದೆಗಳ ವಿವರಗಳು : ಚೀಫ್ ಇಂಜಿನಿಯರ್, ಅಸಿಸ್ಟೆಂಟ್ ಇಂಜಿನಿಯರ್, ಮಿಲ್ ಫಿಲ್ಟರ್, ಆಪರೇಟರ್, ಆಫೀಸರ್, ಸ್ಟೋರ್ ಕೀಪರ್, ಅಟೆಂಡರ್, ಡ್ರೈವರ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಈ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ (SSLC), ಡಿಪ್ಲೊಮಾ(Diploma), ಐಟಿಐ(ITI), ಪದವಿ, ಸ್ನಾತಕೋತ್ತರ ಪದವಿ ಸೇರಿ ವಿವಿಧ ವಿದ್ಯಾರ್ಹತೆ ಮತ್ತು ಸೇವಾನುಭವವನ್ನು ನಿಗದಿಪಡಿಸಲಾಗಿದ್ದು ಈ ಕುರಿತ ಮಾಹಿತಿಯೂ ಈ ಕೆಳಗೆ ನೀಡಿರುವ ಅಧಿಸೂಚನೆಯಲ್ಲಿ ನೀಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಕಾರ್ಖಾನೆಯ ಆಡಳಿತ ಕಚೇರಿಯಲ್ಲಿ ಈ ಕೆಳಗೆ ನೀಡುವ ದಿನಾಂಕಗಳಂದು ತಮ್ಮ ಎಲ್ಲ ಪ್ರಮಾಣ ಪತ್ರಗಳು, ಸೇವಾನುಭವ ಪತ್ರಗಳು, ಜಾತಿ ಪ್ರಮಾಣ ಪತ್ರ, ಭಾವಚಿತ್ರ ಸೇರಿ ಎಲ್ಲ ಮೂಲ ದಾಖಲಾತಿಗಳ ಮೂಲ ಪ್ರತಿಗಳೊಂದಿಗೆ ಹಾಜರಾಗಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ನೇರ ಸಂದರ್ಶನಗಳು ನಡೆಯುವ ದಿನಾಂಕಗಳು : * ಎಂಜಿನಿಯರಿಂಗ್ ವಿಭಾಗಕ್ಕೆ ಬುಧವಾರ 18-09-2019 ರಂದು ಬೆಳಿಗ್ಗೆ 10:30 ಗಂಟೆಗೆ * ತಯಾರಿಕಾ ವಿಭಾಗಕ್ಕೆ ಗುರುವಾರ 19-09-2019 ರಂದು ಬೆಳಗ್ಗೆ 10:30 ಗಂಟೆಗೆ * ಆಡಳಿತ ಮತ್ತು ಕೇನ್ ವಿಭಾಗಕ್ಕೆ ಶನಿವಾರ 21-09-2019 ರಂದು ಬೆಳಗ್ಗೆ 10:30 ನೇರ ಸಂದರ್ಶನವನ್ನು ಏರ್ಪಡಿಸಲಾಗಿದ್ದು, ಅಭ್ಯರ್ಥಿಗಳು ತಪ್ಪದೇ ಹಾಜರಾಗಬೇಕು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಕಾರ್ಖಾನೆ ಪ್ರಕಟಿಸಿದ ಅಧಿಸೂಚನೆಯನ್ನು ಓದಿಕೊಳ್ಳಬಹುದು
No. of posts:  126
Application Start Date:  11 ಸೆಪ್ಟೆಂಬರ್ 2019
Application End Date:  18 ಸೆಪ್ಟೆಂಬರ್ 2019
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
to download official notification
ನಿಮ್ಮ ದಿನನಿತ್ಯದ ಅವಶ್ಯಕತೆಯಾದ memory card ಮತ್ತು pendrive ಇತ್ಯಾದಿಗಳನ್ನೂ amazon ನಿಂದ ಖರೀದಿಸಿ

Comments