Loading..!

15,000 ಸರ್ಕಾರಿ ಶಿಕ್ಷಕರ ಭರ್ಜರಿ ನೇಮಕಾತಿ ಅಧಿಸೂಚನೆ ಪ್ರಕಟ! 100% MCQ ಪರೀಕ್ಷೆ, ಆ.18 ರಿಂದ ಅರ್ಜಿ ಸಲ್ಲಿಕೆ ಶುರು.
Tags: Degree
Published by: Yallamma G | Date:12 ಆಗಸ್ಟ್ 2026
not found
ಕರ್ನಾಟಕ ಶಿಕ್ಷಣ ಇಲಾಖೆಯಿಂದ ಭರ್ಜರಿ ಸಿಹಿಸುದ್ದಿ: 15,000 ಸರ್ಕಾರಿ ಶಾಲಾ ಶಿಕ್ಷಕರ (PST, GPT, HSTR, CST & PET) ನೇಮಕಾತಿ ಅಧಿಸೂಚನೆ ಪ್ರಕಟ!

ಶಿಕ್ಷಕ ವೃತ್ತಿಯ ಕನಸು ಕಾಣುತ್ತಿರುವ ಬಿ.ಎಡ್ ಹಾಗೂ ಡಿ.ಎಡ್ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಬಹುನಿರೀಕ್ಷಿತKarnataka Teacher Recruitment 2026 ಅಧಿಸೂಚನೆಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಒಟ್ಟು 15,000 ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದ್ದು, ಆಗಸ್ಟ್ 18, 2026 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದೆ.

ಶಿಕ್ಷಣ ಇಲಾಖೆಯು ಆಗಸ್ಟ್ 10 ರಂದು ನೂತನ ವಿಶೇಷ ನೇಮಕಾತಿ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಅದರನ್ವಯ ಈ ಬಾರಿ ಪರೀಕ್ಷಾ ಮಾದರಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಲಾಗಿದೆ. ಟಿಇಟಿ ಉತ್ತೀರ್ಣರಾದ ಅಭ್ಯರ್ಥಿಗಳು ಸೆಪ್ಟೆಂಬರ್ 7, 2026 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ವಿಭಾಗಗಳ ಅಡಿಯಲ್ಲಿ ಪಿಎಸ್ಟಿ, ಜಿಪಿಟಿ, ಹೆಚ್ಎಸ್ಟಿಆರ್ ಸೇರಿ ಹಲವು ವೃಂದಗಳ ಖಾಲಿ ಹುದ್ದೆಗಳನ್ನು ತುಂಬಲಾಗುತ್ತಿದೆ. ನೇಮಕಾತಿಯ ಪ್ರಮುಖ ನಿಯಮಗಳು, ವಯೋಮಿತಿ, ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವೇಳಾಪಟ್ಟಿಯ ಸಂಪೂರ್ಣ ಮಾಹಿತಿಯನ್ನು ಓದುಗರ ಅನುಕೂಲಕ್ಕಾಗಿ ಇಲ್ಲಿ ಸರಳವಾಗಿ ವಿವರಿಸಲಾಗಿದೆ.

ಜಿಲ್ಲಾವಾರು Notification ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ..

ನೇಮಕಾತಿಯ ಪ್ರಮುಖ ಮುಖ್ಯಾಂಶಗಳು
  • ನೇಮಕಾತಿ ಇಲಾಖೆ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ
  • ಹುದ್ದೆಗಳ ವಿವರ: ಪ್ರಾಥಮಿಕ ಶಾಲಾ ಶಿಕ್ಷಕರು (PST), ಪದವೀಧರ ಪ್ರಾಥಮಿಕ ಶಿಕ್ಷಕರು (GPT), ಪ್ರೌಢಶಾಲಾ ಸಹ ಶಿಕ್ಷಕರು (HSTR), ಕಂಪ್ಯೂಟರ್ ಸೈನ್ಸ್ (CST) ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು (PET)
  • ಒಟ್ಟು ಹುದ್ದೆಗಳು: 15,000
  • ಆನ್‌ಲೈನ್ ಅರ್ಜಿ ಆರಂಭ: 18 ಆಗಸ್ಟ್ 2026
  • ಅರ್ಜಿ ಸಲ್ಲಿಸಲು ಕಡೇ ದಿನ: 07 ಸೆಪ್ಟೆಂಬರ್ 2026
  • ಶುಲ್ಕ ಪಾವತಿಗೆ ಕಡೇ ದಿನ: 10 ಸೆಪ್ಟೆಂಬರ್ 2026
  • ಪರೀಕ್ಷಾ ವಿಧಾನ: ಸಂಪೂರ್ಣ ಎಂಸಿಕ್ಯೂ (OMR ಮಾದರಿ)
  • ಅಧಿಕೃತ ವೆಬ್‌ಸೈಟ್: schooleducation.karnataka.gov.in
ಪ್ರಮುಖ ಜಿಲ್ಲಾವಾರು ಖಾಲಿ ಹುದ್ದೆಗಳ ವಿವರ
  • ಮೈಸೂರು : 748
  • ವಿಜಯನಗರ : 17
  • ಬೀದರ್ : 103
  • ವಿಜಯಪುರ : 352
  • ಕಲಬುರಗಿ : 199
  • ಬಾಗಲಕೋಟೆ : 6
  • ಬೆಳಗಾವಿ : 831
  • ಕಲಬುರಗಿ : 2051
ಪ್ರಮುಖ ದಿನಾಂಕಗಳು : 
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 18-08-2026
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07 ಸೆಪ್ಟೆಂಬರ್ 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 10 ಸೆಪ್ಟೆಂಬರ್ 2026 
visit official website

ವಿದ್ಯಾರ್ಹತೆ : 
  • ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯಲ್ಲಿ (Degree - B.A/B.Sc) ಕನಿಷ್ಠ ಶೇ. 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಪ್ರವರ್ಗ-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಶೇಕಡಾ 5% ರಷ್ಟು ಸಡಿಲಿಕೆ ನೀಡಲಾಗಿದ್ದು, ಇವರು 45% ಅಂಕಗಳನ್ನು ಪಡೆದಿದ್ದರೂ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.   
  • ಶಿಕ್ಷಕರ ತರಬೇತಿ: ಬಿ.ಎಡ್ (B.Ed) ಅಥವಾ ಡಿ.ಎಡ್ (D.Ed / D.El.Ed) ಅಥವಾ ವಿಶೇಷ ಶಿಕ್ಷಣದಲ್ಲಿ ಬಿ.ಎಡ್ / ಡಿ.ಎಡ್ ಪೂರೈಸಿರಬೇಕು.  
  • TET ಕಡ್ಡಾಯ: ಶಿಕ್ಷಕರ ಅರ್ಹತಾ ಪರೀಕ್ಷೆಯ ಪತ್ರಿಕೆ-2 (TET / CTET Paper-2) ರಲ್ಲಿ ಕಡ್ಡಾಯವಾಗಿ ಅರ್ಹತೆ ಪಡೆದಿರಬೇಕು.
ವಯೋಮಿತಿ ಸಡಿಲಿಕೆ ಹಾಗೂ ಅರ್ಹತೆ
  • ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. 
  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. 
  • ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 43 ವರ್ಷ ಹಾಗೂ 
  • ಎಸ್ಸಿ, ಎಸ್ಟಿ, ಪ್ರವರ್ಗ-1 ಮತ್ತು ವಿಕಲಚೇತನರಿಗೆ 45 ವರ್ಷ ಗರಿಷ್ಠ ವಯೋಮಿತಿ ಇದೆ.
ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಶುಲ್ಕದ ವಿವರ (Application Fee)

ಸಾಮಾನ್ಯ ವರ್ಗ ಮತ್ತು 2A, 2B, 3A, 3B ಅಭ್ಯರ್ಥಿಗಳಿಗೆ:
ಒಂದು ವೃಂದದ ಒಂದು ಹುದ್ದೆಗೆ: ₹750/-  
ಒಂದೇ ವೃಂದದ ಎರಡು ಹುದ್ದೆಗಳಿಗೆ: ₹1125/- (ಪ್ರತಿ ಹೆಚ್ಚುವರಿ ಹುದ್ದೆಗೆ ₹375 ಹೆಚ್ಚುವರಿ).  
SC / ST / ಪ್ರವರ್ಗ-1 / ಮಾಜಿ ಸೈನಿಕ / ವಿಕಲಚೇತನ / ತೃತೀಯ ಲಿಂಗಿ ಅಭ್ಯರ್ಥಿಗಳಿಗೆ:
ಒಂದು ವೃಂದದ ಒಂದು ಹುದ್ದೆಗೆ: ₹500/-  
ಒಂದೇ ವೃಂದದ ಎರಡು ಹುದ್ದೆಗಳಿಗೆ: ₹750/- (ಪ್ರತಿ ಹೆಚ್ಚುವರಿ ಹುದ್ದೆಗೆ ₹250 ಹೆಚ್ಚುವರಿ).  

ಆಯ್ಕೆ ಪ್ರಕ್ರಿಯೆ ಹಾಗೂ ವೆಟೇಜ್ ಲೆಕ್ಕಾಚಾರ
ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಸ್ಪರ್ಧಾತ್ಮಕ ಪರೀಕ್ಷೆ, ಟಿಇಟಿ ಮತ್ತು ಶೈಕ್ಷಣಿಕ ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ತಯಾರಿಸಲಾಗುತ್ತದೆ. ಪರೀಕ್ಷೆಯ ಪ್ರತಿಯೊಂದು ಪತ್ರಿಕೆಯಲ್ಲೂ ಕನಿಷ್ಠ 35% ಅಂಕ ಗಳಿಸುವುದು ಕಡ್ಡಾಯ.
  • ಪಿಎಸ್ಟಿ (1-5) ಹುದ್ದೆಗಳಿಗೆ: ಸಿಇಟಿ ಶೇ 70, ಟಿಇಟಿ ಶೇ 20, ಪಿಯುಸಿ ಶೇ 8 ಹಾಗೂ ಡಿ.ಎಡ್ ಶೇ 2 ರಷ್ಟು ವೆಟೇಜ್ ಇರಲಿದೆ.
  • ಜಿಪಿಟಿ (6-8) ಹುದ್ದೆಗಳಿಗೆ: ಸಿಇಟಿ ಶೇ 70, ಟಿಇಟಿ ಶೇ 20, ಪದವಿ ಶೇ 8 ಹಾಗೂ ಬಿ.ಎಡ್ ಶೇ 2.
  • ಹೆಚ್ಎಸ್ಟಿಆರ್ ಹುದ್ದೆಗಳಿಗೆ: ಸಿಇಟಿ ಶೇ 85, ಪದವಿ ಶೇ 13 ಹಾಗೂ ಬಿ.ಎಡ್ ಶೇ 2.
  • ಕಂಪ್ಯೂಟರ್ ಸೈನ್ಸ್ ಹುದ್ದೆಗಳಿಗೆ: ಸಿಇಟಿ ಶೇ 85 ಹಾಗೂ ಪದವಿ ಶೇ 15.
Karnataka Teacher Recruitment 2026: ಈ ಬಾರಿಯ ನೇಮಕಾತಿ ನಿಯಮಗಳಲ್ಲಿನ ಪ್ರಮುಖ ಬದಲಾವಣೆಗಳು :

ವಿವರಣಾತ್ಮಕ ಪತ್ರಿಕೆ ರದ್ದು:
ಈ ಬಾರಿಯ ಶಿಕ್ಷಕರ ನೇಮಕಾತಿಯಲ್ಲಿ ಹಳೆಯ ದೀರ್ಘ ಬರವಣಿಗೆಯ ವಿವರಣಾತ್ಮಕ ಪತ್ರಿಕೆಯನ್ನು ಕೈಬಿಡಲಾಗಿದೆ. ಪರೀಕ್ಷೆಯು ಕೇವಲ ವಸ್ತುನಿಷ್ಠ ಬಹು ಆಯ್ಕೆ ಪ್ರಶ್ನೆಗಳನ್ನು (ಎಂಸಿಕ್ಯೂ) ಒಳಗೊಂಡಿರಲಿದೆ.

ಒಂದೇ ಅರ್ಜಿಯಲ್ಲಿ ಹಲವು ಹುದ್ದೆಗಳಿಗೆ ಅವಕಾಶ:
ಅಭ್ಯರ್ಥಿಗಳು ಬೇರೆ ಬೇರೆ ಹುದ್ದೆಗಳಿಗೆ ಪ್ರತ್ಯೇಕ ಅರ್ಜಿ ಹಾಕುವಂತಿಲ್ಲ. ಅರ್ಹತೆಗೆ ತಕ್ಕಂತೆ ಒಂದೇ ಆನ್‌ಲೈನ್ ಅರ್ಜಿಯಲ್ಲಿ ಆದ್ಯತೆಗಳನ್ನು ನೀಡಬಹುದು.

ಸೇವಾನಿರತ ಶಿಕ್ಷಕರಿಗೆ ನಿರ್ಬಂಧ:
ಈಗಾಗಲೇ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ತಾವು ಕೆಲಸ ಮಾಡುತ್ತಿರುವ ಅದೇ ವೃಂದದ ಹುದ್ದೆಗೆ ಮರು ಅರ್ಜಿ ಸಲ್ಲಿಸುವಂತಿಲ್ಲ.

ಋಣಾತ್ಮಕ ಮೌಲ್ಯಮಾಪನ:
ಒಎಂಆರ್ ಶೀಟ್‌ನಲ್ಲಿ ನಾಲ್ಕು ಆಯ್ಕೆಗಳಿರುತ್ತವೆ. ಒಂದು ವೇಳೆ ನಿಮಗೆ ಉತ್ತರ ಗೊತ್ತಿಲ್ಲದಿದ್ದರೆ ಕಡ್ಡಾಯವಾಗಿ ಐದನೇ ವೃತ್ತವನ್ನು ಶೇಡ್ ಮಾಡಬೇಕು. ಯಾವುದನ್ನೂ ಶೇಡ್ ಮಾಡದಿದ್ದರೆ ಪ್ರತಿ ಪ್ರಶ್ನೆಗೆ 0.25 ಅಂಕ ಕಡಿತವಾಗುತ್ತದೆ.

ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಸಿಸಲು ಇಲ್ಲಿ ಕ್ಲಿಕ್ ಮಾಡಿ...

ಸ್ಪರ್ಧಾತ್ಮಕ ಪರೀಕ್ಷಾ ವೇಳಾಪಟ್ಟಿ (Exam Timetable)

ಇಲಾಖೆಯು ಜಿಲ್ಲಾ ಮತ್ತು ವಿಭಾಗ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧಿಕೃತ ದಿನಾಂಕಗಳನ್ನು ಘೋಷಿಸಿದೆ:

ಪ್ರಾಥಮಿಕ ಶಾಲಾ ಶಿಕ್ಷಕರು (PST 1-5) & PET Grade-II ಪರೀಕ್ಷೆ:

  • 05.10.2026: ಬೆಳಿಗ್ಗೆ 10 ರಿಂದ 12 (ಪತ್ರಿಕೆ-1 ಸಾಮಾನ್ಯ) | ಮಧ್ಯಾಹ್ನ 2:30 ರಿಂದ 4:30 (ಪತ್ರಿಕೆ-2 ವಿಷಯ ನಿರ್ದಿಷ್ಟ).  
  • 06.10.2026: ಬೆಳಿಗ್ಗೆ 10 ರಿಂದ 12 (ಪತ್ರಿಕೆ-2 ದೈಹಿಕ ಶಿಕ್ಷಣ ಗ್ರೇಡ್-2).  
ಪದವೀಧರ ಪ್ರಾಥಮಿಕ ಶಿಕ್ಷಕರು (GPT 6-8) & ಕಂಪ್ಯೂಟರ್ ಸೈನ್ಸ್ (CST) ಪರೀಕ್ಷೆ:
  • 08.10.2026: ಬೆಳಿಗ್ಗೆ 10 ರಿಂದ 12 (ಪತ್ರಿಕೆ-1 ಸಾಮಾನ್ಯ) | ಮಧ್ಯಾಹ್ನ 2:30 ರಿಂದ 4:30 (ಪತ್ರಿಕೆ-2 CST).  
  • 09.10.2026: ಬೆಳಿಗ್ಗೆ 10 ರಿಂದ 12 (ಪತ್ರಿಕೆ-2 ಸಮಾಜ ವಿಜ್ಞಾನ / ಜೀವ ವಿಜ್ಞಾನ) | ಮಧ್ಯಾಹ್ನ 2:30 ರಿಂದ 4:30 (ಪತ್ರಿಕೆ-2 ಗಣಿತ & ವಿಜ್ಞಾನ).  
  • 10.10.2026: ಬೆಳಿಗ್ಗೆ 10 ರಿಂದ 12 (ಪತ್ರಿಕೆ-2 ಕನ್ನಡ / ಆಂಗ್ಲ ಭಾಷೆ).  
ಪ್ರೌಢಶಾಲಾ ಸಹ ಶಿಕ್ಷಕರು (HSTR) & PET Grade-I ಪರೀಕ್ಷೆ (ಮೈಸೂರು & ಬೆಳಗಾವಿ ವಿಭಾಗ):
  • 12.10.2026: ಬೆಳಿಗ್ಗೆ 10 ರಿಂದ 12 (ಪತ್ರಿಕೆ-1 ಸಾಮಾನ್ಯ) | ಮಧ್ಯಾಹ್ನ 2:30 ರಿಂದ 4:30 (ಪತ್ರಿಕೆ-2 PET Grade-1).  
  • 13.10.2026: ಬೆಳಿಗ್ಗೆ 10 ರಿಂದ 12 (ಪತ್ರಿಕೆ-2 CBZ, Arts, Kannada) | ಮಧ್ಯಾಹ್ನ 2:30 ರಿಂದ 4:30 (ಪತ್ರಿಕೆ-2 English). 
ಅರ್ಜಿ ಸಲ್ಲಿಸುವ ವಿಧಾನ
  1. ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ಜಾಲತಾಣ schooleducation.karnataka.gov.in ಗೆ ಭೇಟಿ ನೀಡಿ.
  2. ಮುಖಪುಟದಲ್ಲಿರುವ ಟೀಚರ್ ರಿಕ್ರೂಟ್ಮೆಂಟ್ 2026 ಆನ್ಲೈನ್ ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ನಿಮ್ಮ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಂಡು ಲಾಗಿನ್ ಆಗಿ.
  4. ವೈಯಕ್ತಿಕ ಮಾಹಿತಿ, ಶೈಕ್ಷಣಿಕ ದಾಖಲೆಗಳು ಹಾಗೂ ಮೀಸಲಾತಿ ಪ್ರಮಾಣಪತ್ರಗಳ ಆರ್.ಡಿ ಸಂಖ್ಯೆಯನ್ನು ನಮೂದಿಸಿ.
  5. ಫೋಟೋ ಮತ್ತು ಸಹಿ ಅಪ್ಲೋಡ್ ಮಾಡಿದ ನಂತರ ಶುಲ್ಕ ಪಾವತಿಸಿ ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳಿ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ. ದೀರ್ಘಕಾಲದಿಂದ ನೇಮಕಾತಿಗಾಗಿ ಕಾಯುತ್ತಿದ್ದ ನಿರುದ್ಯೋಗಿ ಯುವಜನತೆಗೆ 15,000 ಹುದ್ದೆಗಳ ಅಧಿಸೂಚನೆ ದೊಡ್ಡ ರಿಲೀಫ್ ನೀಡಿದೆ. ಪರೀಕ್ಷಾ ಮಾದರಿಯಲ್ಲಿನ ಬದಲಾವಣೆಗಳು ಸ್ಪರ್ಧೆಯನ್ನು ಮತ್ತಷ್ಟು ಪಾರದರ್ಶಕ ಮತ್ತು ನಿಖರವಾಗಿಸುವ ನಿರೀಕ್ಷೆ ಇದೆ.

ತಯಾರಿ ನಡೆಸುತ್ತಿರುವ ಪ್ರತಿಯೊಬ್ಬರೂ ಪರೀಕ್ಷಾ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ಓದಿನಲ್ಲಿ ತೊಡಗಿಸಿಕೊಳ್ಳುವುದು ಜಾಣತನ. ಅಕ್ಟೋಬರ್ ತಿಂಗಳಲ್ಲಿಯೇ ಪರೀಕ್ಷೆಗಳಿರುವುದರಿಂದ ಸಮಯ ಬಹಳ ಕಡಿಮೆಯಿದೆ. ಉತ್ತಮ ಯೋಜನೆಯೊಂದಿಗೆ ಕಿರಿದಾದ ಗುರಿಯಿಟ್ಟುಕೊಂಡು ವ್ಯಾಸಂಗ ಮಾಡಿದರೆ ಯಶಸ್ಸು ಖಂಡಿತ.
Application Start Date:  18 ಆಗಸ್ಟ್ 2026
Application End Date:  7 ಸೆಪ್ಟೆಂಬರ್ 2026
Last Date for Payment:  10 ಸೆಪ್ಟೆಂಬರ್ 2026
Employment Type: FULL_TIME
Hiring Organization: ಶಾಲಾ ಶಿಕ್ಷಣ ಇಲಾಖೆ https://schooleducation.karnataka.gov.in/
Work Location: ಬೆಂಗಳೂರು, KA, 560001
Related Tags: Degree

Comments