Loading..!

SBI ಬಿಗ್ ಬ್ರೇಕಿಂಗ್: ಯಾವುದೇ ಡಿಗ್ರಿ ಪಾಸಾದವರಿಗೆ ಸ್ಟೇಟ್ ಬ್ಯಾಂಕ್‌ನಲ್ಲಿ 9,100+ ಹುದ್ದೆ, ₹46,000 ವೇತನ! ಇಂದೇ ಅಪ್ಲೈ ಮಾಡಿ.

Tags: Degree
Published by: Yallamma G
|
SBI ಬಿಗ್ ಬ್ರೇಕಿಂಗ್: ಯಾವುದೇ ಡಿಗ್ರಿ ಪಾಸಾದವರಿಗೆ ಸ್ಟೇಟ್ ಬ್ಯಾಂಕ್‌ನಲ್ಲಿ 9,100+ ಹುದ್ದೆ, ₹46,000 ವೇತನ! ಇಂದೇ ಅಪ್ಲೈ ಮಾಡಿ.
SBI ಕ್ಲರ್ಕ್ ನೇಮಕಾತಿ 2026 ರ ಅಧಿಸೂಚನೆ ಪ್ರಕಟವಾಗಿದೆ. ಕರ್ನಾಟಕದಲ್ಲಿ 799 ಸೇರಿದಂತೆ ಒಟ್ಟು 9,100+ ಹುದ್ದೆಗಳಿವೆ. 46,000 ರೂ. ವೇತನ. ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಕನಸು ಕಾಣುತ್ತಿರುವ ಯುವಜನತೆಗೆ ಇಲ್ಲಿದೆ ಭರ್ಜರಿ ಸಿಹಿಸುದ್ದಿ. ಭಾರತದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), 2026ನೇ ಸಾಲಿನ ಬೃಹತ್ ನೇಮಕಾತಿಗೆ ಚಾಲನೆ ನೀಡಿದೆ. ದೇಶಾದ್ಯಂತ ಒಟ್ಟು 9,124 ಕ್ಲರ್ಕ್ (Junior Associate) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದ್ದು, ಆಗಸ್ಟ್ 11 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ.

ಕನ್ನಡಿಗರಿಗೆ ವಿಶೇಷ ಖುಷಿಯ ವಿಚಾರವೆಂದರೆ, ಕರ್ನಾಟಕದಲ್ಲೇ ಬರೋಬ್ಬರಿ 799 ಹುದ್ದೆಗಳು ಲಭ್ಯವಿವೆ. ಯಾವುದೇ ಪದವಿ ಮುಗಿಸಿದವರು ಆಗಸ್ಟ್ 31 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕ ಹಂತದಲ್ಲೇ ತಿಂಗಳಿಗೆ ಅಂದಾಜು 46,000 ರೂಪಾಯಿಗಳವರೆಗೆ ವೇತನ ಸಿಗಲಿದೆ.

ಬ್ಯಾಂಕ್ ಉದ್ಯೋಗ ಪಡೆಯಬೇಕು ಎಂಬುದು ಲಕ್ಷಾಂತರ ಯುವಕರ ಗುರಿ. ಈ ಬಾರಿಯ SBI ಕ್ಲರ್ಕ್ ನೇಮಕಾತಿ 2026 ಆ ನಿಟ್ಟಿನಲ್ಲಿ ಒಂದು ಸುವರ್ಣಾವಕಾಶ. ಹಾಗಾದರೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ವಯೋಮಿತಿ ಎಷ್ಟಿರಬೇಕು? ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? ಎಂಬ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ಸರಳವಾಗಿ ವಿವರಿಸಿದ್ದೇವೆ.

visit official website

BI ಕ್ಲರ್ಕ್ ನೇಮಕಾತಿ 2026: ಪ್ರಮುಖ ವಿವರಗಳು
  • ನೇಮಕಾತಿ ಸಂಸ್ಥೆ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
  • ಹುದ್ದೆಯ ಹೆಸರು : ಜೂನಿಯರ್ ಅಸೋಸಿಯೇಟ್ (Clerk)
  • ಒಟ್ಟು ಹುದ್ದೆಗಳು : 9,124 (ಭಾರತಾದ್ಯಂತ)
  • ಕರ್ನಾಟಕದಲ್ಲಿರುವ ಹುದ್ದೆಗಳು : 799 (Bengaluru Circle)
  • ಅರ್ಜಿ ಸಲ್ಲಿಕೆ ಆರಂಭ : 11 ಆಗಸ್ಟ್ 2026
  • ಅರ್ಜಿ ಸಲ್ಲಿಸಲು ಕೊನೆ ದಿನ : 31 ಆಗಸ್ಟ್ 2026 
  • ಅಧಿಕೃತ ವೆಬ್‌ಸೈಟ್ : sbi.bank.in/web/careers 
ಕರ್ನಾಟಕದಲ್ಲಿ ಲಭ್ಯವಿರುವ ಹುದ್ದೆಗಳ ವರ್ಗೀಕರಣ
ಬೆಂಗಳೂರು ವೃಂದಕ್ಕೆ ಒಟ್ಟು 799 ಹುದ್ದೆಗಳನ್ನು ಮೀಸಲಿಡಲಾಗಿದೆ. ಇದರಲ್ಲಿ 760 ನಿಯಮಿತ ಹಾಗೂ 39 ಬ್ಯಾಕ್‌ಲಾಗ್ ಹುದ್ದೆಗಳಿವೆ. ವರ್ಗಾವಾರು ಹುದ್ದೆಗಳ ಹಂಚಿಕೆ ಈ ಕೆಳಗಿನಂತಿದೆ:
  • ಸಾಮಾನ್ಯ ವರ್ಗ (General): 305
  • ಒಬಿಸಿ (OBC): 205
  • ಪರಿಶಿಷ್ಟ ಜಾತಿ (SC): 121
  • ಆರ್ಥಿಕವಾಗಿ ಹಿಂದುಳಿದ ವರ್ಗ (EWS): 76
  • ಪರಿಶಿಷ್ಟ ಪಂಗಡ (ST): 53
ಭಾಷಾ ಪ್ರಾವೀಣ್ಯತೆ ಕಡ್ಡಾಯ: ಕರ್ನಾಟಕದಿಂದ ಅರ್ಜಿ ಸಲ್ಲಿಸುವವರು ಕನ್ನಡವನ್ನು ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು. 10ನೇ ಅಥವಾ 12ನೇ ತರಗತಿಯಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಓದಿದ್ದರೆ, ಸ್ಥಳೀಯ ಭಾಷಾ ಪರೀಕ್ಷೆ ಬರೆಯುವ ಅಗತ್ಯವಿರುವುದಿಲ್ಲ.

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ..

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ
ಶೈಕ್ಷಣಿಕ ಅರ್ಹತೆ (01.04.2026ಕ್ಕೆ ಅನ್ವಯ):
  • ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Graduation) ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು. ಬಿಎ, ಬಿಕಾಂ, ಬಿಎಸ್ಸಿ ಅಥವಾ ಇಂಜಿನಿಯರಿಂಗ್ ಸೇರಿ ಯಾವುದೇ ಕೋರ್ಸ್ ಓದಿದ್ದರೂ ಅವಕಾಶವಿದೆ.
  • ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅವಕಾಶ: ಪ್ರಸ್ತುತ ಅಂತಿಮ ವರ್ಷದ ಪದವಿಯಲ್ಲಿರುವ ವಿದ್ಯಾರ್ಥಿಗಳು ಕೂಡ ಅರ್ಜಿ ಹಾಕಬಹುದು. ಆದರೆ, ಬ್ಯಾಂಕ್‌ಗೆ ಆಯ್ಕೆಯಾದರೆ 31 ಡಿಸೆಂಬರ್ 2026ರ ಒಳಗೆ ಪದವಿ ಪಾಸಾಗಿರುವ ಪ್ರಮಾಣಪತ್ರ ನೀಡುವುದು ಕಡ್ಡಾಯ.
ವಯೋಮಿತಿ (01.04.2026ಕ್ಕೆ ಅನ್ವಯ):
  • ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 28 ವರ್ಷ ಮೀರಿರಬಾರದು.
  • ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ವಿಕಲಚೇತನರಿಗೆ 10 ರಿಂದ 15 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ಆಕರ್ಷಕ ವೇತನ ಶ್ರೇಣಿ:

ಕ್ಲರ್ಕ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ 26,730 ರೂ. ಮೂಲ ವೇತನ ಸಿಗಲಿದೆ. ಇದರ ಜೊತೆಗೆ ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) ಸೇರಿದಂತೆ ಎಲ್ಲ ಭತ್ಯೆಗಳನ್ನು ಸೇರಿಸಿ ತಿಂಗಳಿಗೆ ಸುಮಾರು 46,000 ರೂ. ಕೈಗೆ ಸಿಗಲಿದೆ.

ಆಯ್ಕೆ ವಿಧಾನ ಹೇಗಿರುತ್ತದೆ?
  • ನೇಮಕಾತಿ ಪ್ರಕ್ರಿಯೆಯು ಆನ್‌ಲೈನ್ ಲಿಖಿತ ಪರೀಕ್ಷೆಗಳನ್ನು ಆಧರಿಸಿರುತ್ತದೆ. ಇದರಲ್ಲಿ ಎರಡು ಹಂತಗಳಿರುತ್ತವೆ:
  • ಪ್ರಿಲಿಮಿನರಿ ಪರೀಕ್ಷೆ (ಸೆಪ್ಟೆಂಬರ್ 2026): 100 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, ಇಂಗ್ಲಿಷ್, ನ್ಯೂಮರಿಕಲ್ ಎಬಿಲಿಟಿ ಹಾಗೂ ರೀಸನಿಂಗ್ ವಿಷಯಗಳಿರುತ್ತವೆ. ವಿಶೇಷವೆಂದರೆ, ಅಭ್ಯರ್ಥಿಗಳು ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯಬಹುದು.
  • ಮುಖ್ಯ ಪರೀಕ್ಷೆ (ನವೆಂಬರ್ 2026): ಪ್ರಿಲಿಮ್ಸ್ ಪಾಸ್ ಆದವರು 200 ಅಂಕಗಳ ಮೇನ್ಸ್ ಪರೀಕ್ಷೆ ಬರೆಯಬೇಕು. ಇದರಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆಯೇ ಅಂತಿಮ ಮೆರಿಟ್ ಪಟ್ಟಿ ತಯಾರಾಗುತ್ತದೆ.
ಶುಲ್ಕದ ವಿವರ:
  • ಸಾಮಾನ್ಯ, ಒಬಿಸಿ ಮತ್ತು EWS ಅಭ್ಯರ್ಥಿಗಳಿಗೆ: 750 ರೂ.
  • ಎಸ್‌ಸಿ, ಎಸ್‌ಟಿ, ವಿಕಲಚೇತನರು ಹಾಗೂ ಮಾಜಿ ಸೈನಿಕರಿಗೆ: ಯಾವುದೇ ಶುಲ್ಕವಿಲ್ಲ (ಉಚಿತ).
ಇದನ್ನು ಓದಿ : 15,000 ಸರ್ಕಾರಿ ಶಿಕ್ಷಕರ ಭರ್ಜರಿ ನೇಮಕಾತಿ ಅಧಿಸೂಚನೆ ಪ್ರಕಟ! 100% MCQ ಪರೀಕ್ಷೆ, ಆ.18 ರಿಂದ ಅರ್ಜಿ ಸಲ್ಲಿಕೆ ಶುರು. 

ಅರ್ಜಿ ಸಲ್ಲಿಸುವ ವಿಧಾನ
  1. ಮೊದಲಿಗೆ SBI ನ ಅಧಿಕೃತ ಕೆರಿಯರ್ ಪೋರ್ಟಲ್ (sbi.bank.in/web/careers) ತೆರೆಯಿರಿ.
  2. ಅಲ್ಲಿ 'RECRUITMENT OF JUNIOR ASSOCIATES 2026' ವಿಭಾಗದಲ್ಲಿ 'Apply Online' ಕ್ಲಿಕ್ ಮಾಡಿ.
  3. ಹೊಸದಾಗಿ ರಿಜಿಸ್ಟರ್ ಮಾಡಿಕೊಂಡು, ನಿಮ್ಮ ವೈಯಕ್ತಿಕ ವಿವರ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಭರ್ತಿ ಮಾಡಿ.
  4. ಫೋಟೋ, ಸಹಿ ಹಾಗೂ ಎಡಗೈ ಹೆಬ್ಬೆರಳ ಗುರುತನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
  5. ಕೊನೆಯದಾಗಿ ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ, ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.
ಸರ್ಕಾರಿ ಬ್ಯಾಂಕ್‌ನಲ್ಲಿ ಕೆಲಸ ಮಾಡಬೇಕು ಎನ್ನುವವರಿಗೆ ಇದೊಂದು ಅತ್ಯುತ್ತಮ ಅವಕಾಶ. ಖಾಸಗಿ ವಲಯದ ಉದ್ಯೋಗದ ಅನಿಶ್ಚಿತತೆಯ ನಡುವೆ SBI ನಂತಹ ಪ್ರತಿಷ್ಠಿತ ಬ್ಯಾಂಕ್‌ನಲ್ಲಿ ವೃತ್ತಿ ಆರಂಭಿಸುವುದು ಭವಿಷ್ಯದ ದೃಷ್ಟಿಯಿಂದ ಬಹಳ ಸುರಕ್ಷಿತ.

ಅರ್ಜಿ ಸಲ್ಲಿಸಲು ಕೊನೆಯ ಗಳಿಗೆಯವರೆಗೆ ಕಾಯಬೇಡಿ. ಸರ್ವರ್ ಸಮಸ್ಯೆಗಳು ಎದುರಾಗುವ ಮುನ್ನವೇ ಆದಷ್ಟು ಬೇಗ ಅರ್ಜಿ ಸಲ್ಲಿಸಿ, ಪರೀಕ್ಷಾ ಸಿದ್ಧತೆಗೆ ಹೆಚ್ಚಿನ ಸಮಯ ಮೀಸಲಿಡಿ. ನಿರಂತರ ಅಭ್ಯಾಸ ಹಾಗೂ ಸರಿಯಾದ ಮಾರ್ಗದರ್ಶನವಿದ್ದರೆ ಬ್ಯಾಂಕ್ ಪರೀಕ್ಷೆ ಪಾಸ್ ಮಾಡುವುದು ಕಷ್ಟವೇನಲ್ಲ. ಆಲ್ ದಿ ಬೆಸ್ಟ್!
Job Overview
No. of posts
9124
Start Date
13 ಆಗಸ್ಟ್ 2026
End Date
31 ಆಗಸ್ಟ್ 2026
Employment Type
FULL_TIME
Organization
SBI (Website)
Location
State Bank Bhavan, Madame Cama Road, Nariman Point, Mumbai, Maharashtra, 400021
To Download Official Notification
Related Tags: Degree

Comments