ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ಖಾಲಿ ಇರುವ 144 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಮತ್ತು ಫಾರ್ಮಸಿಸ್ಟ್ ಹುದ್ದೆಗಳಿಗೆ ಅರ್ಜಿ ಅಹ್ವಾನ
Published by: Hanamant Katteppanavar | Date:16 ಎಪ್ರಿಲ್ 2021

ಸರ್ಕಾರೀ ಸ್ವಾಮ್ಯದ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಇಲ್ಲಿ ಖಾಲಿ ಇರುವ ಒಟ್ಟು 144 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಮತ್ತು ಫಾರ್ಮಸಿಸ್ಟ್ ಹುದ್ದೆಗಳ ನೇಮಕಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ದಿನಾಂಕ ಏಪ್ರಿಲ್ 13, 2021 ರಿಂದ ಆರಂಭಗೊಂಡು, ಮೇ 03 2021 ಕ್ಕೆ ಕೊನೆಗೊಳ್ಳಲಿದೆ.
* ಖಾಲಿ ಹುದ್ದೆಗಳ ವಿವರ:
- ಮ್ಯಾನೇಜರ್ (ರಿಸ್ಕ್ ಮ್ಯಾನೇಜ್‌ಮೆಂಟ್) - 01 ಹುದ್ದೆ
- ವ್ಯವಸ್ಥಾಪಕ (ಕ್ರೆಡಿಟ್ ವಿಶ್ಲೇಷಕ) - 02 ಹುದ್ದೆಗಳು
- ಎಸ್ಆರ್ ವಿಶೇಷ ಕಾರ್ಯನಿರ್ವಾಹಕ (ಅನುಸರಣೆ) - 01 ಹುದ್ದೆ
- ಎಸ್ಆರ್ ವಿಶೇಷ ಕಾರ್ಯನಿರ್ವಾಹಕ (ಸ್ಟ್ರಾಟಜಿ-ಟಿಎಂಜಿ) - 01 ಹುದ್ದೆ
- ವಿಶೇಷ ಕಾರ್ಯನಿರ್ವಾಹಕ - (ಜಾಗತಿಕ ವ್ಯಾಪಾರ) - 01 ಹುದ್ದೆ
- ಹಿರಿಯ ಕಾರ್ಯನಿರ್ವಾಹಕ (ಚಿಲ್ಲರೆ ಮತ್ತು ಅಂಗಸಂಸ್ಥೆಗಳು) - 01 ಹುದ್ದೆ
- ಹಿರಿಯ ಕಾರ್ಯನಿರ್ವಾಹಕ (ಹಣಕಾಸು) - 01 ಹುದ್ದೆ
- ಹಿರಿಯ ಕಾರ್ಯನಿರ್ವಾಹಕ (ಮಾರ್ಕೆಟಿಂಗ್) - 01 ಹುದ್ದೆ
- ಉಪ ಮುಖ್ಯ ತಂತ್ರಜ್ಞಾನ ಅಧಿಕಾರಿ (ಐಟಿ-ಡಿಜಿಟಲ್ ಬ್ಯಾಂಕಿಂಗ್) - 01 ಹುದ್ದೆ
- ವ್ಯವಸ್ಥಾಪಕ (ಇತಿಹಾಸ) - 01 ಹುದ್ದೆ
- ಕಾರ್ಯನಿರ್ವಾಹಕ (ಡಾಕ್ಯುಮೆಂಟ್ ಸಂರಕ್ಷಣೆ-ದಾಖಲೆಗಳು) - 01 ಹುದ್ದೆ
- ಫಾರ್ಮಸಿಸ್ಟ್- 67 ಹುದ್ದೆಗಳು
- ಡೇಟಾ ವಿಶ್ಲೇಷಕ - 08 ಹುದ್ದೆಗಳು
- ವ್ಯವಸ್ಥಾಪಕ (ಕ್ರೆಡಿಟ್ ವಿಶ್ಲೇಷಕ) - 45 ಹುದ್ದೆಗಳು
- ವ್ಯವಸ್ಥಾಪಕ (ಉದ್ಯೋಗ ಕುಟುಂಬ ಮತ್ತು ಉತ್ತರಾಧಿಕಾರ ಯೋಜನೆ) - 01 ಹುದ್ದೆ
- ಮ್ಯಾನೇಜರ್ (ರವಾನೆ) - 01 ಹುದ್ದೆ
- ಡೈ. ವ್ಯವಸ್ಥಾಪಕ (ಮಾರ್ಕೆಟಿಂಗ್ - ಹಣಕಾಸು ಸಂಸ್ಥೆಗಳು- 01 ಹುದ್ದೆ
- ಡೈ. ವ್ಯವಸ್ಥಾಪಕ (ಚಾರ್ಟರ್ಡ್ ಅಕೌಂಟೆಂಟ್) - 06 ಹುದ್ದೆಗಳು
- ಡೈ. ಮ್ಯಾನೇಜರ್ (ಎನಿಟೈಮ್ ಚಾನೆಲ್) - 02 ಹುದ್ದೆಗಳು
- ಉಪ ವ್ಯವಸ್ಥಾಪಕ (ಕಾರ್ಯತಂತ್ರದ ತರಬೇತಿ) - 01 ಹುದ್ದೆ
No. of posts: 144
Application Start Date: 13 ಎಪ್ರಿಲ್ 2021
Application End Date: 3 ಮೇ 2021
Selection Procedure: ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಆಯ್ಕೆ ಪಟ್ಟಿ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification:
ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು B.Tech, B.E, M.Sc, M.Tech, MCA, SSC, D.Pharma, B.Pharma, M.Pharma, Pharma D, Any Degree, PG MBA / PGDBM ವಿದ್ಯಾರ್ಹತೆಯನ್ನು ಹೊಂದಿರಬೇಕು ಮತ್ತು ಆಯಾ ಹುದ್ದೆಗಳ ಅನುಸಾರವಾಗಿ ಕೆಲಸದ ಅನುಭವವನ್ನು ಹೊಂದಿರಬೇಕು.
- ಈ ಕುರಿತ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ.
Fee: ಹಿಂದುಳಿದ ವರ್ಗದ ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ 750/- ರೂ ಗಳು ಮತ್ತು ಪ.ಜಾ ಮತ್ತು ಪ.ಪಂ ದ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯಾದ ಅರ್ಜಿ ಶುಲ್ಕವಿರುವುದಿಲ್ಲ.
Age Limit: ಹುದ್ದೆಗೆ ಅನುಗುಣವಾಗಿ ಕನಿಷ್ಠ-25 ವರ್ಷಗಳನ್ನು ಪೂರ್ಣಗೊಳಿಸಿರಬೇಕು ಮತ್ತು ಗರಿಷ್ಠ - 45 ವರ್ಷಗಳ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.





Comments