Loading..!

ರಾಷ್ಟ್ರೀಯ ಮಿಲಿಟರಿ ಶಾಲೆ ಬೆಂಗಳೂರು ಇಲ್ಲಿ ಖಾಲಿ ಇರುವ ಒಟ್ಟು 16 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: PUC
Published by: Hanamant Katteppanavar | Date:16 ಜನವರಿ 2021
not found
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಮಿಲಿಟರಿ ಶಾಲೆಯಲ್ಲಿ ಖಾಲಿ ಇರುವ ಲ್ಯಾಬ್ ಅಟೆಂಡೆಂಟ್, ಲೋಯರ ಡಿವಿಷನ್ ಕ್ಲರ್ಕ್ ಮತ್ತು ವಿವಿಧ ಒಟ್ಟು 16 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಕರೆದ 45 ದಿನದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
No. of posts:  16
Selection Procedure: ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification: - PUC ಅಥವಾ ಮೆಟ್ರಿಕ್ಯುಲೇಷನ್ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Fee:
- ಹುದ್ದೆಗೆ ಸಾಮಾನ್ಯ ಅಭ್ಯರ್ಥಿಗಳು - 50/- ರೂ ಗಳ ಅರ್ಜಿ ಶುಲ್ಕವನ್ನು ಪೋಸ್ಟಲ್ ಆರ್ಡರ್ ಮೂಲಕ ಪಾವತಿಸಬೇಕು ಮತ್ತು

- ಪ.ಜಾ/ಪ.ಪಂ, ಹಿಂದುಳಿದ ವರ್ಗದ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ :- ಯಾವುದೇ ರೀತಿಯ ಅರ್ಜಿ ಶುಲ್ಕವಿರುವುದಿಲ್ಲ.
Age Limit:
- ಅಭ್ಯರ್ಥಿಗಳು ಕನಿಷ್ಠ - 18 ವರ್ಷಗಳ ವಯೋಮಿತಿಯನ್ನು ಪೂರ್ಣಗೊಳಿಸಿರಬೇಕು ಮತ್ತು ಗರಿಷ್ಠ- 27 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಮತ್ತು

- ಪ.ಜಾ/ ಪ.ಪಂ ದ ಅಭ್ಯರ್ಥಿಗಳಿಗೆ - 5 ವರ್ಷ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ - 3 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ - 10 ವಷಗಳ ವಯೋಮಿತಿಯಲ್ಲಿ ಸಡಲಿಕೆ ನೀಡಲಾಗುವುದು.
Pay Scale:

- ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ - 18,000/- ರೂ ದಿಂದ 63,200/- ರೂ ಗಳವರೆಗೆ ವೇತನವನ್ನು ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಪೋಸ್ಟಲ್ ಆರ್ಡರ್ ಮೂಲಕ ಎಲ್ಲ ಮೂಲ ದಾಖಲೆಗಳೊಂದಿಗೆ ಅರ್ಜಿ ಕರೆದ 45 ದಿನದ ಒಳಗಾಗಿ ಅರ್ಜಿಯನ್ನು ಈ ಕೆಳಗೆ ನೀಡಿರುವ ವಿಳಾಸಕ್ಕೆ ಕೊನೆಯ ದಿನಾಂಕದೊಳಗಾಗಿ ತಲುಪುವಂತೆ ಕಳುಹಿಸಿ ಕೊಡಬೇಕು.

* ಕಚೇರಿಯ ವಿಳಾಸ :

The Principal, Rashtriya Military School, Bengaluru- 560025 ಇವರಿಗೆ ಕಳುಹಿಸಬೇಕು

To Download the Official Notification

Comments

Ishwar Gouda ಜನ. 16, 2021, 3:59 ಅಪರಾಹ್ನ