ಕರ್ನಾಟಕ ವಿಶ್ವವಿದ್ಯಾಲಯದ ಕಾನೂನು ಮಹಾವಿದ್ಯಾಲಯದಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿಯನ್ನು ಆಹ್ವಾನ
Published by: Hanamant Katteppanavar | Date:20 ನವೆಂಬರ್ 2020

ಕರ್ನಾಟಕ ವಿಶ್ವವಿದ್ಯಾಲಯದ ಅಧೀನ ಕಾಲೇಜು ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದಲ್ಲಿ 2020-21ನೇ ಸಾಲಿನ 3 ವರ್ಷದ ಎಲ್.ಎಲ್.ಬಿ ಪದವಿಯ ವಿವಿಧ ವಿಷಯಗಳ ಭೋದಿಸುವ ಸಲುವಾಗಿ ಅತಿಥಿ ಉಪನ್ಯಾಸಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನವೆಂಬರ್ 20,2020ರ ಒಳಗಾಗಿ ಪ್ರಾಚಾರ್ಯರು, ಕರ್ನಾಟಕ ವಿಶ್ವವಿದ್ಯಾಲಯದ ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯ ಧಾರವಾಡ ಇವರಿಗೆ ಅರ್ಜಿಯನ್ನು ಸಲ್ಲಿಸಬಹುದು.
- ನಿಗದಿತ ಅರ್ಜಿ ನಮೂನೆಯನ್ನು ಪ್ರಾಚಾರ್ಯರು ಕರ್ನಾಟಕ ವಿಶ್ವವಿದ್ಯಾಲಯದ ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದಿಂದ ಖುದ್ದಾಗಿ ಪಡೆಯಬಹುದು ಅಥವಾ ಈ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ನಾಳೆಯೇ (20 nov 2020) ಅರ್ಜಿಗಳನ್ನು ತಲುಪಿಸಬೇಕು.
No. of posts: 5
Application End Date: 20 ನವೆಂಬರ್ 2020
Qualification:
- ಎಲ್ ಎಲ್ ಬಿ, ನೆಟ್/ KSET ಉತ್ತೀರ್ಣತೆ/ ಪಿಹೆಚ್.ಡಿ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Fee:
- ಸಾಮಾನ್ಯ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳು 600/-ರೂ ಮತ್ತು ಪ.ಜಾ/ಪ.ಪಂ/ಪ್ರ-1/ವಿಕಲಚೇತನ ಅಭ್ಯರ್ಥಿಗಳು- 300/-ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕು.
- ಈ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಸೂಕ್ತ ಮಾಹಿತಿಯೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು, ಅಗತ್ಯ ದೃಢೀಕೃತ ದಾಖಲಾತಿಗಳೊಂದಿಗೆ ನವೆಂಬರ್ 20,2020ರ ಒಳಗಾಗಿ ಪ್ರಾಚಾರ್ಯರು, ಕರ್ನಾಟಕ ವಿಶ್ವವಿದ್ಯಾಲಯದ ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯ ಧಾರವಾಡ ಇವರಿಗೆ ಸಲ್ಲಿಸುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.





Comments