ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ ಇಲ್ಲಿ ಖಾಲಿ ಇರುವ 121 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ
Published by: Basavaraj Halli | Date:23 ಜನವರಿ 2020

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಕರ್ನಾಟಕ ಭವನ ದೆಹಲಿ ಮತ್ತು ಕರ್ನಾಟಕದ ವಿವಿಧ ಘಟಕಗಳಿಗೆ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಹುದ್ದೆಗಳ ವಿವರವೂ ಈ ಕೆಳಗೆ ನಿಂತಿರುತ್ತದೆ * ವ್ಯವಸ್ಥಾಪಕರು * ಸಹಾಯಕ ವ್ಯವಸ್ಥಾಪಕರು * ಸ್ವಾಗತಗಾರರು * ಸೌಸ್ ಶೆಫ್ * ದ್ವಿತೀಯ ದರ್ಜೆ ಲೆಕ್ಕ ಸಹಾಯಕರು * ಹೌಸ್ ಕೀಪಿಂಗ್ ಸೂಪರ್ ವೈಸರ್ * ಉಗ್ರಾಣಿಕರು * ಅಡುಗೆಯವರು * ಸಹಾಯಕ ಅಡುಗೆಯವರು * ರೂಮ್ ಬಾಯ್ * ಅಡುಗೆ ಸಹಾಯಕರು * ಮಾಣಿ (ರೆಸ್ಟೋರೆಂಟ್) * ಸಾಮಾನ್ಯ ಉಪಯೋಗಿ ಕೆಲಸಗಾರರು ಈ ಹುದ್ದೆಗಳು ಕರ್ನಾಟಕ ಮತ್ತು ನವದೆಹಲಿಯಲ್ಲಿ ಖಾಲಿ ಇದ್ದು ಈ ಕುರಿತ ವಿವರಗಳನ್ನು ಕೆಳಗೆ ನೀಡಿರುವ ಅಧಿಸೂಚನೆಯ ಮೂಲಕ ಪಡೆಯಬಹುದಾಗಿದೆ. - ಹುದ್ದೆಗಳಿಗೆ ನಿಗದಿಪಡಿಸಿದ ವೇತನವು ದೆಹಲಿ ಮತ್ತು ರಾಜ್ಯದಲ್ಲಿ ಬೇರೆ ಬೇರೆಯಾಗಿದ್ದು ವಿವರಣೆಗಳಿಗೆ ಅಧಿಸೂಚನೆಗಳನ್ನು ಗಮನಿಸತಕ್ಕದ್ದು - ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹುದ್ದೆಗಳಿಗನುಗುಣವಾಗಿ ವಿದ್ಯಾರ್ಹತೆ, ವೇತನ, ಸೇವಾನುಭವವನ್ನು ನಿಗದಿಪಡಿಸಲಾಗಿದ್ದು ಈ ಕುರಿತ ಸಂಪೂರ್ಣ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿಕೊಳ್ಳಬೇಕು. ಅರ್ಜಿ ಸಲ್ಲಿಸುವುದು ಹೇಗೆ: ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅರ್ಜಿ ನಮೂನೆಗಳನ್ನು ಡೌನ್ಲೋಡ್ ಮಾಡಿಕೊಂಡು ಕೇಳಲಾಗಿರುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ ವಿದ್ಯಾರ್ಹತೆ ಮತ್ತು ಸೇವಾನುಭವ ದಾಖಲೆಗಳು ಮತ್ತು ಇತ್ತೀಚಿನ ಭಾವಚಿತ್ರದೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕೊನೆಯ ದಿನಾಂಕವಾದ ದಿನಾಂಕ 03 ಫೆಬ್ರವರಿ 2020 ರಂದು ತಲುಪುವಂತೆ ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಸಬೇಕಾದ ವಿಳಾಸ: ವ್ಯವಸ್ಥಾಪಕರು, ಆಡಳಿತ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ, ಕಾರ್ಯನಿರ್ವಾಹಕ ಕಚೇರಿ, ನೆಲಮಹಡಿ ಯಶವಂತಪುರ ಟಿಟಿಎಂಸಿ, ಬಿಎಂಟಿಸಿ ಬಸ್ ನಿಲ್ದಾಣ, ಯಶವಂತಪುರ ವೃತ್ತ, ಬೆಂಗಳೂರು-560022
No. of posts: 121
Application Start Date: 23 ಜನವರಿ 2020
Application End Date: 3 ಫೆಬ್ರುವರಿ 2020
Work Location: ಕರ್ನಾಟಕ ಅಥವಾ ದೆಹಲಿ
Employment Type: FULL_TIME
Hiring Organization: KPSC Vaani https://www.kpscvaani.com
Job Location: ಕರ್ನಾಟಕ ಅಥವಾ ದೆಹಲಿ, KA,





Comments