Loading..!

KEA KSET Notification 2026: ಕೆಸೆಟ್ ಪರೀಕ್ಷೆ ಅಧಿಸೂಚನೆ ಬಿಡುಗಡೆ, ಆನ್‌ಲೈನ್ ಅರ್ಜಿ ಸಲ್ಲಿಕೆ ಶುರು!
Tags: Degree
Published by: Yallamma G | Date:10 ಆಗಸ್ಟ್ 2026
not found
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2026ನೇ ಸಾಲಿನ ಕೆಸೆಟ್ ಪರೀಕ್ಷೆ (KSET 2026) ಅಧಿಸೂಚನೆ ಪ್ರಕಟಿಸಿದೆ. ಅರ್ಹತೆ, ಶುಲ್ಕ, ಪರೀಕ್ಷಾ ದಿನಾಂಕ ಹಾಗೂ ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ.

ಸಹಾಯಕ ಪ್ರಾಧ್ಯಾಪಕರಾಗುವ ಕನಸು ಹೊತ್ತಿರುವ ರಾಜ್ಯದ ಲಕ್ಷಾಂತರ ಅಭ್ಯರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬಹುನಿರೀಕ್ಷಿತ ಕೆಸೆಟ್ ಪರೀಕ್ಷೆ ಅಧಿಸೂಚನೆ ಹೊರಡಿಸಿದೆ. ಆಗಸ್ಟ್ 10, 2026 ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಕೂಡ ಶುರುವಾಗಿದೆ.

ಕರ್ನಾಟಕದ ವಿವಿಧ ಸರ್ಕಾರಿ, ಖಾಸಗಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಲು ಈ ಪರೀಕ್ಷೆ ಕಡ್ಡಾಯ. ಒಟ್ಟು 37 ವಿಷಯಗಳಿಗೆ ಯುಜಿಸಿ ನಿಯಮಾವಳಿಯಂತೆ ಈ ಬಾರಿಯ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ ನಡೆಯಲಿದೆ.

ಬರುವ ಅಕ್ಟೋಬರ್ 11ರ ಭಾನುವಾರದಂದು ಕೆಸೆಟ್ ಪರೀಕ್ಷೆ ಆಯೋಜಿಸಲು ಪ್ರಾಧಿಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಅಭ್ಯರ್ಥಿಗಳು ಸೆಪ್ಟೆಂಬರ್ 5ರ ಒಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಿದ್ದು, ಶೈಕ್ಷಣಿಕ ಅರ್ಹತೆ, ವಯೋಮಿತಿ ಮತ್ತು ಅರ್ಜಿ ಹಾಕುವ ವಿಧಾನದ ಸಂಪೂರ್ಣ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ

ಕೆಸೆಟ್ 2026 ಪರೀಕ್ಷೆಯ ಪ್ರಮುಖ ದಿನಾಂಕಗಳು ಮತ್ತು ಮಾಹಿತಿ

  • ಅರ್ಜಿ ಸಲ್ಲಿಕೆ ಆರಂಭ: 10 ಆಗಸ್ಟ್ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನ: 05 ಸೆಪ್ಟೆಂಬರ್ 2026
  • ಶುಲ್ಕ ಪಾವತಿಸಲು ಕಡೆ ದಿನ: 06 ಸೆಪ್ಟೆಂಬರ್ 2026
  • ಪ್ರವೇಶ ಪತ್ರ ಬಿಡುಗಡೆ: 01 ಅಕ್ಟೋಬರ್ 2026
  • ಪರೀಕ್ಷಾ ದಿನಾಂಕ: 11 ಅಕ್ಟೋಬರ್ 2026 (ಭಾನುವಾರ)
  • ಒಟ್ಟು ವಿಷಯಗಳು: 37
  • ಅಧಿಕೃತ ವೆಬ್ಸೈಟ್: cetonline.karnataka.gov.in/kea
ಕೆಸೆಟ್ ಪರೀಕ್ಷೆ ಬರೆಯಲು ಬೇಕಾದ ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಅಂದರೆ ಪಿಜಿ ಮುಗಿಸಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕನಿಷ್ಠ ಶೇಕಡಾ 55 ಅಂಕಗಳನ್ನು ಪಡೆದಿರುವುದು ಕಡ್ಡಾಯ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ವಿಶೇಷಚೇತನ ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಅಂಕಗಳಲ್ಲಿ ಕೊಂಚ ಸಡಿಲಿಕೆ ಇದೆ. ಇವರು ಸ್ನಾತಕೋತ್ತರ ಪದವಿಯಲ್ಲಿ ಶೇಕಡಾ 50 ಅಂಕ ಗಳಿಸಿದ್ದರೆ ಸಾಕು.

ನೀವು ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿದ್ದರೆ ನಿಮಗೂ ಅರ್ಜಿ ಹಾಕುವ ಅವಕಾಶವಿದೆ. ಆದರೆ, ಪರೀಕ್ಷೆಯ ಫಲಿತಾಂಶ ಬಂದ ಎರಡು ವರ್ಷದೊಳಗೆ ನಿಗದಿತ ಅಂಕಗಳೊಂದಿಗೆ ಪಿಜಿ ಪಾಸ್ ಮಾಡಿರುವ ಸರ್ಟಿಫಿಕೇಟ್ ನೀಡುವುದು ಕಡ್ಡಾಯ. ಹೊರರಾಜ್ಯದ ಅಭ್ಯರ್ಥಿಗಳು ಸಾಮಾನ್ಯ ವರ್ಗದ ಅಡಿಯಲ್ಲೇ ಪರಿಗಣಿಸಲ್ಪಡುತ್ತಾರೆ.

ವಯೋಮಿತಿ ಸಡಿಲಿಕೆ ಮತ್ತು ವಿನಾಯಿತಿ
ಉಪನ್ಯಾಸಕ ವೃತ್ತಿಗೆ ಕಾಲಿಡಲು ವಯಸ್ಸು ಅಡ್ಡಿಯಾಗುವುದಿಲ್ಲ. ಹೌದು, ಈ ಕೆಸೆಟ್ ಪರೀಕ್ಷೆ ಬರೆಯಲು ಯಾವುದೇ ಗರಿಷ್ಠ ವಯೋಮಿತಿ ನಿಗದಿ ಮಾಡಿಲ್ಲ.
ಇದರ ಜೊತೆಗೆ 1989ಕ್ಕೂ ಮೊದಲು ಯುಜಿಸಿ ನೆಟ್ ಅಥವಾ ಜೆಆರ್ಎಫ್ ಪಾಸ್ ಮಾಡಿದವರಿಗೆ ಹಾಗೂ 2002ರ ಜೂನ್ 1ಕ್ಕಿಂತ ಮುಂಚೆ ರಾಜ್ಯ ಮಟ್ಟದ ಸೆಟ್ ಪರೀಕ್ಷೆ ತೇರ್ಗಡೆಯಾದವರಿಗೆ ಈ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ.

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.. 

ಅರ್ಜಿ ಶುಲ್ಕದ ವಿವರಗಳು
ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ, 3ಬಿ ಹಾಗೂ ಹೊರರಾಜ್ಯದ ಅಭ್ಯರ್ಥಿಗಳಿಗೆ 750 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ವಿಶೇಷಚೇತನ ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳು 500 ರೂಪಾಯಿ ಪಾವತಿಸಬೇಕು. ಶುಲ್ಕವನ್ನು ಕೇವಲ ಆನ್ಲೈನ್ ಮೂಲಕವೇ ಕಟ್ಟಬೇಕು.

ಪರೀಕ್ಷಾ ಮಾದರಿ ಹೇಗಿರಲಿದೆ?
ಈ ಬಾರಿಯ ಕೆಸೆಟ್ ಪರೀಕ್ಷೆಯನ್ನು ಅಕ್ಟೋಬರ್ 11ರಂದು ಒಂದೇ ಅವಧಿಯಲ್ಲಿ ನಡೆಸಲಾಗುತ್ತದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಫ್ಲೈನ್ (ಓಎಂಆರ್) ಮಾದರಿಯಲ್ಲಿ ಪರೀಕ್ಷೆ ಇರುತ್ತದೆ.

ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಮೊದಲ ಪತ್ರಿಕೆಯು ಸಾಮಾನ್ಯ ವಿಷಯಗಳಾದ ಬೋಧನಾ ಸಾಮರ್ಥ್ಯ, ಸಂಶೋಧನೆ ಕುರಿತಾಗಿದ್ದು, 50 ಪ್ರಶ್ನೆಗಳಿಗೆ 100 ಅಂಕಗಳಿರುತ್ತವೆ.

ಎರಡನೇ ಪತ್ರಿಕೆಯು ಅಭ್ಯರ್ಥಿಗಳು ಆಯ್ಕೆ ಮಾಡಿದ ನಿರ್ದಿಷ್ಟ ವಿಷಯದ ಮೇಲಿರುತ್ತದೆ. ಇದರಲ್ಲಿ 100 ಪ್ರಶ್ನೆಗಳಿದ್ದು 200 ಅಂಕಗಳನ್ನು ನಿಗದಿ ಮಾಡಲಾಗಿದೆ. ಒಟ್ಟಾರೆ 3 ಗಂಟೆಗಳಲ್ಲಿ 150 ಪ್ರಶ್ನೆಗಳಿಗೆ ಉತ್ತರಿಸಬೇಕು.

ನೆನಪಿರಲಿ, ಪ್ರತಿ ಸರಿಯಾದ ಉತ್ತರಕ್ಕೆ 2 ಅಂಕ ಸಿಗಲಿದ್ದು, ತಪ್ಪು ಉತ್ತರಗಳಿಗೆ ಯಾವುದೇ ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ. ಪರೀಕ್ಷೆ ಪಾಸ್ ಮಾಡಲು ಸಾಮಾನ್ಯ ವರ್ಗದವರು ಶೇಕಡಾ 40 ಹಾಗೂ ಮೀಸಲಾತಿ ಕೋರುವವರು ಶೇಕಡಾ 35ರಷ್ಟು ಅಂಕ ಪಡೆಯುವುದು ಕಡ್ಡಾಯ.
ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ
  • ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
  • ಅಲ್ಲಿ ಕೆಸೆಟ್ 2026 ಆನ್ಲೈನ್ ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಎಸ್ಎಸ್ಎಲ್ಸಿ ಅಂಕಪಟ್ಟಿಯಲ್ಲಿರುವಂತೆ ಹೆಸರು, ತಂದೆ ತಾಯಿಯ ಹೆಸರು ಹಾಗೂ ಶೈಕ್ಷಣಿಕ ವಿವರಗಳನ್ನು ತುಂಬಿ ರಿಜಿಸ್ಟರ್ ಮಾಡಿಕೊಳ್ಳಿ.
  • ಮೀಸಲಾತಿ ಬಯಸುವವರು ಜಾತಿ ಮತ್ತು ಆದಾಯ ಪ್ರಮಾಣಪತ್ರದ ಆರ್ಡಿ ಸಂಖ್ಯೆಯನ್ನು ತಪ್ಪದೇ ನಮೂದಿಸಿ.
  • ನಿಮ್ಮ ಇತ್ತೀಚಿನ ಫೋಟೋ ಹಾಗೂ ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ಕೊನೆಯದಾಗಿ ಶುಲ್ಕ ಪಾವತಿಸಿ, ಭರ್ತಿ ಮಾಡಿದ ಅರ್ಜಿಯನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ಸಹಾಯಕ ಪ್ರಾಧ್ಯಾಪಕರಾಗುವ ಗುರಿ ಹೊಂದಿರುವ ಎಲ್ಲರಿಗೂ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಈ ಕೆಸೆಟ್ ಪರೀಕ್ಷೆ ಅಧಿಸೂಚನೆ ಹೊರಬಿದ್ದಿರುವ ಬೆನ್ನಲ್ಲೇ ನಿಮ್ಮ ಸಿದ್ಧತೆಯನ್ನು ಇನ್ನಷ್ಟು ಚುರುಕುಗೊಳಿಸಿ. ನಿಗದಿತ ಸಮಯದೊಳಗೆ ಅರ್ಜಿ ಪ್ರಕ್ರಿಯೆ ಮುಗಿಸುವುದು ಜಾಣತನ.

ಕೊನೆಯ ಗಳಿಗೆಯಲ್ಲಿ ಸರ್ವರ್ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಇಂದೇ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಪರೀಕ್ಷೆಯ ಪಠ್ಯಕ್ರಮವನ್ನು ಸರಿಯಾಗಿ ಅರ್ಥಮಾಡಿಕೊಂಡು ಓದಲು ಶುರುಮಾಡಿ. ಎಲ್ಲಾ ಅಭ್ಯರ್ಥಿಗಳಿಗೂ ಶುಭವಾಗಲಿ.
Application Start Date:  10 ಆಗಸ್ಟ್ 2026
Application End Date:  5 ಸೆಪ್ಟೆಂಬರ್ 2026
Last Date for Payment:  6 ಸೆಪ್ಟೆಂಬರ್ 2026
Employment Type: FULL_TIME
Hiring Organization: KEA KSET https://cetonline.karnataka.gov.in/kea/
Work Location: Bengaluru, KA, 560001
To Download Official Notification
Related Tags: Degree

Comments