Loading..!

ಮೈಸೂರು ಕೃಷಿ ಇಲಾಖೆಯಲ್ಲಿ ಬಂಪರ್ ಉದ್ಯೋಗ: 12 ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನ, ₹30,000 ವೇತನ!

Tags: Degree
Published by: Yallamma G
|
ಮೈಸೂರು ಕೃಷಿ ಇಲಾಖೆಯಲ್ಲಿ ಬಂಪರ್ ಉದ್ಯೋಗ: 12 ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನ, ₹30,000 ವೇತನ!
ಮೈಸೂರು ಕೃಷಿ ಇಲಾಖೆ ನೇಮಕಾತಿ 2026: 'ಆತ್ಮ' ಯೋಜನೆಯಡಿ 12 ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ, ₹30,000 ವರೆಗೆ ವೇತನ!

ಕೃಷಿ ಮತ್ತು ತೋಟಗಾರಿಕೆ ಪದವಿ ಮುಗಿಸಿ ಕೆಲಸ ಹುಡುಕುತ್ತಿರುವ ಯುವಕ ಯುವತಿಯರಿಗೆ ಮೈಸೂರು ಜಿಲ್ಲಾ ಕೃಷಿ ಇಲಾಖೆ ಭರ್ಜರಿ ಅವಕಾಶ ನೀಡಿದೆ. ಆತ್ಮ ಯೋಜನೆಯಡಿ ಖಾಲಿ ಇರುವ ಒಟ್ಟು 12 ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

ತಿಂಗಳಿಗೆ 30 ಸಾವಿರ ರೂಪಾಯಿವರೆಗೆ ಆಕರ್ಷಕ ವೇತನ ಸಿಗಲಿದ್ದು, ಇದು ನೇರ ಗುತ್ತಿಗೆ ಆಧಾರದ ನೇಮಕಾತಿಯಾಗಿದೆ. ಆಗಸ್ಟ್ 21, 2026 ರ ಸಂಜೆ 5 ಗಂಟೆಯೊಳಗೆ ಆಸಕ್ತರು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಿದೆ.

ಜಂಟಿ ಕೃಷಿ ನಿರ್ದೇಶಕರ ಕಛೇರಿ ವ್ಯಾಪ್ತಿಯಲ್ಲಿ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಎಂಬ ಎರಡು ವಿಭಾಗಗಳಲ್ಲಿ ಹುದ್ದೆಗಳಿವೆ. ನಿಮ್ಮ ಬಳಿ ಸೂಕ್ತ ವಿದ್ಯಾರ್ಹತೆ ಇದ್ದರೆ ತಕ್ಷಣವೇ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಿದ್ಧಪಡಿಸಿಕೊಳ್ಳಿ.
ಹುದ್ದೆಗಳ ಸಂಕ್ಷಿಪ್ತ ವಿವರಗಳು
  • ನೇಮಕಾತಿ ಸಂಸ್ಥೆ: ಮೈಸೂರು ಜಿಲ್ಲಾ ಕೃಷಿ ಇಲಾಖೆ
  • ಯೋಜನೆ: ಆತ್ಮ
  • ಹುದ್ದೆಯ ಹೆಸರು: ತಾಂತ್ರಿಕ ವ್ಯವಸ್ಥಾಪಕರು
  • ಖಾಲಿ ಹುದ್ದೆಗಳು: 12
  • ಉದ್ಯೋಗದ ಮಾದರಿ: 1 ವರ್ಷದ ಗುತ್ತಿಗೆ ಆಧಾರ
  • ಕೊನೆಯ ದಿನಾಂಕ: 21 ಆಗಸ್ಟ್ 2026
ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು ಹುದ್ದೆಯ ಮಾಹಿತಿ
  • ಒಟ್ಟು 3 ಹುದ್ದೆಗಳು ಖಾಲಿ ಇವೆ. ಹೆಚ್.ಡಿ.ಕೋಟೆ, ಸರಗೂರು ಮತ್ತು ಸಾಲಿಗ್ರಾಮದಲ್ಲಿ ತಲಾ ಒಂದು ಹುದ್ದೆ ಇದೆ.
  • ಕೃಷಿ ಅಥವಾ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ ಇರಬೇಕು.
  • ಅಥವಾ ಬಿಎಸ್ಸಿ ಅಗ್ರಿ ಮುಗಿಸಿ ಕನಿಷ್ಠ 5 ವರ್ಷಗಳ ಕಾಲ ಎಟಿಎಂ ಆಗಿ ಕೆಲಸ ಮಾಡಿದ ಅನುಭವ ಇರಬೇಕು. ಇದರ ಜೊತೆಗೆ ಕೃಷಿ ಚಟುವಟಿಕೆಗಳಲ್ಲಿ 2 ವರ್ಷ ಫೀಲ್ಡ್ ವರ್ಕ್ ಮಾಡಿದ ಅನುಭವ ಕೇಳಲಾಗಿದೆ.
  • ಈ ಹುದ್ದೆಗೆ ಆಯ್ಕೆಯಾದವರಿಗೆ ಪ್ರತಿ ತಿಂಗಳು 30,000 ರೂಪಾಯಿ ಸಂಬಳ ನೀಡಲಾಗುತ್ತದೆ.
ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಹುದ್ದೆಯ ಮಾಹಿತಿ
  • ಈ ವಿಭಾಗದಲ್ಲಿ ಒಟ್ಟು 9 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹುಣಸೂರು, ಕೆ.ಆರ್.ನಗರ, ನಂಜನಗೂಡು, ಮೈಸೂರು, ಪಿರಿಯಾಪಟ್ಟಣ, ತಿ.ನರಸೀಪುರ ಸೇರಿದಂತೆ ವಿವಿಧೆಡೆ ಅವಕಾಶವಿದೆ.
  • ಅರ್ಜಿ ಹಾಕುವವರು ಕೃಷಿ ವಲಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರೈಸಿರಬೇಕು.
  • ಇದರ ಜೊತೆಗೆ ಕೃಷಿ ಚಟುವಟಿಕೆಗಳಲ್ಲಿ ಕನಿಷ್ಠ 1 ವರ್ಷ ಕೆಲಸ ಮಾಡಿದ ಅನುಭವ ಕಡ್ಡಾಯವಾಗಿರಬೇಕು.
  • ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 25,000 ರೂಪಾಯಿ ವೇತನ ನಿಗದಿಪಡಿಸಲಾಗಿದೆ.
ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ವಯೋಮಿತಿ ಎಷ್ಟಿರಬೇಕು?

ಮೈಸೂರು ಕೃಷಿ ಇಲಾಖೆ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 45 ವರ್ಷ ಮೀರಿರಬಾರದು. ಆದರೆ, ಈಗಾಗಲೇ ಆತ್ಮ ಯೋಜನೆಯಡಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ವಯೋಮಿತಿಯಲ್ಲಿ ವಿನಾಯಿತಿ ಇದ್ದು, 60 ವರ್ಷದವರೆಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ
  1. ಇದು ಆಫ್ ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಾಗಿದೆ. ಕೃಷಿ ನಿರ್ದೇಶಕರ ಕಚೇರಿಯಿಂದ ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಬೇಕು.
  2. ಅದರೊಂದಿಗೆ ನಿಮ್ಮ ಎಸ್ಎಸ್ಎಲ್ಸಿ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಡಿಗ್ರಿ ಮಾರ್ಕ್ಸ್ ಕಾರ್ಡ್, ಕಂಪ್ಯೂಟರ್ ಸರ್ಟಿಫಿಕೇಟ್ ಹಾಗೂ ಅನುಭವದ ದಾಖಲೆಗಳನ್ನು ಲಗತ್ತಿಸಬೇಕು.
  3. ಈ ಎಲ್ಲಾ ದಾಖಲೆಗಳನ್ನು ಒಂದು ಕವರ್ ನಲ್ಲಿ ಹಾಕಿ ಸೀಲ್ ಮಾಡಿ. ಆ ಲಕೋಟೆಯನ್ನು ಖುದ್ದಾಗಿ ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸಬಹುದು.
ಅರ್ಜಿ ಕಳುಹಿಸಬೇಕಾದ ವಿಳಾಸ
ಜಂಟಿ ಕೃಷಿ ನಿರ್ದೇಶಕರ ಕಛೇರಿ, ಆತ್ಮ ವಿಭಾಗ, ಸಾರ್ವಜನಿಕ ಕಛೇರಿಗಳ ಕಟ್ಟಡ, ನ್ಯೂ ಸಯ್ಯಾಜಿರಾವ್ ರಸ್ತೆ, ಮೈಸೂರು – 570001.
ದೂರವಾಣಿ ಸಂಖ್ಯೆ: 0821-2442239

ಅರ್ಜಿ ಕಳುಹಿಸಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗನೆ ನಿಮ್ಮ ದಾಖಲೆಗಳನ್ನು ಸರಿಪಡಿಸಿಕೊಂಡು ಪೋಸ್ಟ್ ಮಾಡಿ. ಅಂಚೆ ವಿಳಂಬವಾದರೆ ಇಲಾಖೆ ಹೊಣೆಯಾಗುವುದಿಲ್ಲ.

ಈ ನೇಮಕಾತಿ ಬಗ್ಗೆ ಏನಾದರೂ ಗೊಂದಲಗಳಿದ್ದರೆ ಇಲಾಖೆಯ ಅಧಿಕೃತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಕೃಷಿ ಓದಿರುವ ಎಲ್ಲಾ ಆಕಾಂಕ್ಷಿಗಳಿಗೂ ಉಜ್ವಲ ಭವಿಷ್ಯ ಸಿಗಲಿ ಎಂದು ಹಾರೈಸುತ್ತೇವೆ.
Job Overview
No. of posts
12
End Date
21 ಆಗಸ್ಟ್ 2026
Employment Type
FULL_TIME
Organization
Agriculture Department Mysore (Website)
Location
Public Offices Building, New Sayyaji Rao Road, Mysuru, KA, 570001
To Download Official Notification
Related Tags: Degree

Comments