ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ ಮಿಷನ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Basavaraj Halli | Date:24 ಆಗಸ್ಟ್ 2020

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ ಮಿಷನ್ ಹಾಗೂ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಕೇಂದ್ರ ಕಛೇರಿ ಜಿಲ್ಲೆಗಳಲ್ಲಿ ಖಾಲಿ ಇರುವ ವಿವಿಧ 54 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 31,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ:
ದಾಖಲಾತಿ ತಜ್ಞರು - 1 ಹುದ್ದೆ
ಹಿರಿಯ ಭೂ ವಿಜ್ಞಾನಿ - 1 ಹುದ್ದೆ
ಸಮಾಲೋಚಕರು - 2 ಹುದ್ದೆಗಳು
ಹಿರಿಯ ಸಮಾಲೋಚಕರು - 2 ಹುದ್ದೆಗಳು
ಕಿರಿಯ ಸಮಾಲೋಚಕರು - 1 ಹುದ್ದೆ
ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ - 5 ಹುದ್ದೆಗಳು
ಸಪೋರ್ಟ್ ಇಂಜಿನಿಯರ್ - 4 ಹುದ್ದೆಗಳು
ಡೇಟಾ ಎಂಟ್ರಿ ಆಪರೇಟರ್ - 2 ಹುದ್ದೆಗಳು
ಜಿಲ್ಲಾ ಯೋಜನಾ ವ್ಯವಸ್ಥಾಪಕ - 8 ಹುದ್ದೆಗಳು
ಜಿಲ್ಲಾ ಎಂಐಎಸ್ ಸಮಾಲೋಚಕರು - 16 ಹುದ್ದೆಗಳು
ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಮಾಲೋಚಕರು - 1 ಹುದ್ದೆ
ನೈರ್ಮಲ್ಯ ಹಾಗೂ ಶುಚಿತ್ವ ಸಮಾಲೋಚಕರು - 7 ಹುದ್ದೆಗಳು
ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ ಸಮಾಲೋಚಕರು - 2 ಹುದ್ದೆಗಳು
ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ-ಸಮಾಲೋಚಕರು - 2 ಹುದ್ದೆಗಳು
ಒಟ್ಟು - 54 ಹುದ್ದೆಗಳು
No. of posts: 54
Application Start Date: 14 ಆಗಸ್ಟ್ 2020
Application End Date: 31 ಆಗಸ್ಟ್ 2020
Qualification: ಹುದ್ದೆಗಳಿಗನುಗುಣವಾಗಿ ಪದವಿ, ಪಿಯುಸಿ ಮತ್ತು ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ಬೋರ್ಡ್ /ಸಂಸ್ಥೆ / ವಿಶ್ವವಿದ್ಯಾಲಯದಿಂದ ಪಡೆದಿರಬೇಕು.
Age Limit:
ನೇಮಕಾತಿ ಅಧಿಸೂಚನೆ ಪ್ರಕಟಗೊಂಡ ದಿನಾಂಕಕ್ಕೆ ಗರಿಷ್ಠ 45 ವರ್ಷಗಳು ಮೀರಿರಬಾರದು.
Pay Scale:
ಹುದ್ದೆಗಳಿಗನುಗುಣವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 22,000/- ರಿಂದ 60,000/-ರೂ ಗಳ ವರೆಗೆ ವೇತನ ನಿಗದಿಪಡಿಸಲಾಗಿದೆ.
* ಅಭ್ಯರ್ಥಿಗಳು ನಿಗದಿತ ನಮೂನೆಯ ಅರ್ಜಿಯನ್ನು ಭರ್ತಿ ಮಾಡಿ ಕಛೇರಿಯ ವಿಳಾಸಕ್ಕೆ ಆಗಸ್ಟ್ 31,2020ರ ಸಂಜೆ 5:30ರೊಳಗೆ ತಲುಪುವಂತೆ ಸಲ್ಲಿಸಬಹುದು.
ಅರ್ಜಿ ಸಲ್ಲಿಸಬೇಕಾದ ಕಚೇರಿಯ ವಿಳಾಸ:
ಆಯುಕ್ತರು,
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ,
2ನೇ ಮಹಡಿ, ಕೆ.ಹೆಚ್.ಬಿ ಕಟ್ಟಡ,
ಕಾವೇರಿ ಭವನ, ಕೆ.ಜಿ. ರಸ್ತೆ,
ಬೆಂಗಳೂರು - 560009





Comments