Loading..!

ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಬಂಪರ್ ಉದ್ಯೋಗಾವಕಾಶ: ನರ್ಸಿಂಗ್ ಆಫೀಸರ್ ಸೇರಿ ವಿವಿಧ ಹುದ್ದೆಗಳಿಗೆ ನೇಮಕಾತಿ!
Tags: Degree
Published by: Yallamma G | Date:20 ಎಪ್ರಿಲ್ 2026
not found
ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ (IGICH) ಖಾಲಿ ಇರುವ 50 ಶುಶ್ರೂಷಕಾಧಿಕಾರಿ (Nursing Officer) ಹಾಗೂ ಗ್ರೂಪ್ ಎ ಹುದ್ದೆಗಳ ಗುತ್ತಿಗೆ ಆಧಾರಿತ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ. B.Sc Nursing ಪದವೀಧರರಿಗೆ ಇದೊಂದು ಅತ್ಯುತ್ತಮ ಅವಕಾಶ. 

ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದೆ. ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿರುವ ಬೆಂಗಳೂರಿನ ಪ್ರತಿಷ್ಠಿತ 'ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ'ಯಲ್ಲಿ (Indira Gandhi Institute of Child Health - IGICH) ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ.

ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 78 ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಸಮಾಲೋಚಕರು, ಸೀನಿಯರ್ ರೆಸಿಡೆಂಟ್ ಮತ್ತು ಶುಶ್ರೂಷಕಾಧಿಕಾರಿಗಳು ಸೇರಿದಂತ್ತೆ ವಿವಿಧ ಹುದ್ದೆಗಳ ನೇಮಕಾತಿ ನಡೆಯಲಿದೆ. ಬೆಂಗಳುರು - ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 28-ಏಪ್ರಿಲ್-2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. 

ಬಿ.ಎಸ್ಸಿ ನರ್ಸಿಂಗ್ (B.Sc Nursing) ಮುಗಿಸಿರುವ ಅಭ್ಯರ್ಥಿಗಳಿಗೆ 70ಕ್ಕೂ ಹೆಚ್ಚು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಹುದ್ದೆಗಳ ಸಂಪೂರ್ಣ ವಿವರ, ವಿದ್ಯಾರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.

ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ

ನೇಮಕಾತಿಯ ಪ್ರಮುಖ ಮುಖ್ಯಾಂಶಗಳು (Highlights)

  • ಸಂಸ್ಥೆಯ ಹೆಸರು: ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ಬೆಂಗಳೂರು.
  • ಉದ್ಯೋಗದ ಸ್ವರೂಪ: ಗುತ್ತಿಗೆ ಆಧಾರಿತ ನೇಮಕಾತಿ (11 ತಿಂಗಳ ಅವಧಿಗೆ).
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-05-2026, ಸಂಜೆ 5.30 ರವರೆಗೆ.
  • ಅರ್ಜಿ ಸಲ್ಲಿಕೆ ವಿಧಾನ: ಆಫ್‌ಲೈನ್ (ಅರ್ಜಿಯನ್ನು ಡೌನ್‌ಲೋಡ್ ಮಾಡಿ ಸಲ್ಲಿಸುವುದು).
ಹುದ್ದೆಗಳ ವಿವರ ಮತ್ತು ಮಾಸಿಕ ವೇತನ (Vacancy & Salary Details)
ಈ ಅಧಿಸೂಚನೆಯಡಿ ಗ್ರೂಪ್-ಎ ಮತ್ತು ಗ್ರೂಪ್-ಸಿ ವೃಂದದ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
1. ಗ್ರೂಪ್-ಸಿ ಹುದ್ದೆಗಳು (Group-C Posts):
  • ಶುಶ್ರೂಷಕಾಧಿಕಾರಿಗಳು (Nursing Officers): 50 ಹುದ್ದೆಗಳು.
  • ಮಾಸಿಕ ವೇತನ: ರೂ. 33,350/-.
2. ಗ್ರೂಪ್-ಎ ಹುದ್ದೆಗಳು (Group-A Medical & Teaching Posts):
  • ಶಿಶು ವೈದ್ಯ ಶಾಸ್ತ್ರ, ನವಜಾತ ಶಿಶು ಶಾಸ್ತ್ರ, ಅರವಳಿಕೆ ಶಾಸ್ತ್ರ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಈ ಕೆಳಗಿನ ಹುದ್ದೆಗಳಿವೆ.
  • ಸಹ ಪ್ರಾಧ್ಯಾಪಕರು (Associate Professors): ಮಾಸಿಕ ವೇತನ ರೂ. 1,20,000/- ದಿಂದ ರೂ. 1,50,000/-.
  • ಸಹಾಯಕ ಪ್ರಾಧ್ಯಾಪಕರು (Assistant Professors): ಮಾಸಿಕ ವೇತನ ರೂ. 1,10,000/- ದಿಂದ ರೂ. 1,20,000/-.
  • ಸೀನಿಯರ್ ರೆಸಿಡೆಂಟ್ (Senior Residents): ಮಾಸಿಕ ವೇತನ ರೂ. 75,000/-.
  • ಸಮಾಲೋಚಕರು/ಸ್ಪೆಷಲಿಸ್ಟ್ (Consultants/Specialists): ಮಾಸಿಕ ವೇತನ ರೂ. 1,50,000/- ದಿಂದ ರೂ. 2,50,000/-.
  • ಬ್ಲಡ್ ಸೆಂಟರ್ ಆಫೀಸರ್: 1 ಹುದ್ದೆ, ಮಾಸಿಕ ವೇತನ ರೂ. 85,000/-.
ಶೈಕ್ಷಣಿಕ ಅರ್ಹತೆಗಳು (Educational Qualification)
  • ಶುಶ್ರೂಷಕಾಧಿಕಾರಿ (Nursing Officer): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ನರ್ಸಿಂಗ್ (B.Sc. in Nursing) ಪದವಿ ಪಡೆದಿರಬೇಕು. ನರ್ಸಿಂಗ್ ಕೌನ್ಸಿಲ್‌ನಲ್ಲಿ ನೊಂದಣಿಯಾಗಿರಬೇಕು (Registered Nurse). ಪೀಡಿಯಾಟ್ರಿಕ್ ನರ್ಸಿಂಗ್‌ನಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
  • ಗ್ರೂಪ್-ಎ ಹುದ್ದೆಗಳಿಗೆ: ಸಂಬಂಧಪಟ್ಟ ವಿಷಯಗಳಲ್ಲಿ ಎನ್‌ಎಂಸಿ (NMC) ನಿಯಮಾವಳಿಗಳ ಪ್ರಕಾರ ಬ್ರಾಡ್/ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ ವಿವರ (Age Limit)
ಅಭ್ಯರ್ಥಿಗಳಿಗೆ ಹುದ್ದೆವಾರು ಗರಿಷ್ಠ ವಯೋಮಿತಿಯನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:
  • ಶುಶ್ರೂಷಕಾಧಿಕಾರಿ ಹುದ್ದೆಗೆ: ಸಾಮಾನ್ಯ ವರ್ಗಕ್ಕೆ 40 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 43 ವರ್ಷ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 45 ವರ್ಷ ಗರಿಷ್ಠ ವಯೋಮಿತಿ ಇರುತ್ತದೆ.
  • ಪ್ರಾಧ್ಯಾಪಕರು ಹುದ್ದೆಗಳಿಗೆ: ಗರಿಷ್ಠ 60 ವರ್ಷ.
  • ಸಹ ಪ್ರಾಧ್ಯಾಪಕರು ಹುದ್ದೆಗಳಿಗೆ: ಸಾಮಾನ್ಯ ವರ್ಗ 46, ಒಬಿಸಿ 48, ಎಸ್ಸಿ/ಎಸ್ಟಿ 53 ವರ್ಷ.
  • ಸಹಾಯಕ ಪ್ರಾಧ್ಯಾಪಕರು/ಸೀನಿಯರ್ ರೆಸಿಡೆಂಟ್: ಸಾಮಾನ್ಯ ವರ್ಗ 43, ಒಬಿಸಿ 45, ಎಸ್ಸಿ/ಎಸ್ಟಿ 48 ವರ್ಷ.
ಅರ್ಜಿ ಶುಲ್ಕದ ವಿವರ (Application Fee)
  • ಸಾಮಾನ್ಯ ವರ್ಗ (GM): ರೂ. 2,000/-.
  • ಹಿಂದುಳಿದ ವರ್ಗಗಳು (OBC): ರೂ. 1,500/-.
  • ಎಸ್ಸಿ, ಎಸ್ಟಿ ಮತ್ತು ಪ್ರವರ್ಗ-1 (SC/ST, Category-1): ರೂ. 500/-.
ಅರ್ಜಿ ಸಲ್ಲಿಸುವ ವಿಧಾನ (How to Apply?)
  • ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ http://igich.karnataka.gov.in ಗೆ ಭೇಟಿ ನೀಡಿ.
  • ಅಲ್ಲಿ ಲಭ್ಯವಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
  • ಅರ್ಜಿಯಲ್ಲಿನ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ.
  • ನಿಗದಿತ ಅರ್ಜಿ ಶುಲ್ಕದೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ 08-05-2026 ರಂದು ಸಂಜೆ 5.30 ಗಂಟೆಯೊಳಗೆ ಕಛೇರಿಗೆ ತಲುಪುವಂತೆ ಸಲ್ಲಿಸತಕ್ಕದ್ದು.
ವಿಶೇಷ ಸೂಚನೆ: ಆಯ್ಕೆಯಾದ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗುವ ಮುನ್ನ ರೂ. 100 ಗಳ ಛಾಪಾ ಕಾಗದದಲ್ಲಿ ಮುಚ್ಚಳಿಕೆಯನ್ನು ಬರೆದುಕೊಡಬೇಕಾಗುತ್ತದೆ. ಇದು ಸಂಪೂರ್ಣವಾಗಿ ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರಿತ ನೇಮಕಾತಿಯಾಗಿದ್ದು, ಖಾಯಂ ಮಾಡುವಂತೆ ಕೋರುವ ಹಕ್ಕು ಅಭ್ಯರ್ಥಿಗಳಿಗೆ ಇರುವುದಿಲ್ಲ.

KEA ಇಂದ ನಡೆದ ಹಳೆಯ ಪ್ರಶ್ನೆ ಪತ್ರಿಕೆಗಳನ್ನು practice ಮಾಡಲು ಇಲ್ಲಿ ಕ್ಲಿಕ್ ಮಾಡಿ (To Practice Old KEA Question Papers)

ಇದೇ ರೀತಿಯ ಸರ್ಕಾರಿ ಉದ್ಯೋಗಗಳ ನಿಖರ ಮಾಹಿತಿಗಾಗಿ KPSCVaani ವೆಬ್‌ಸೈಟ್ ಅನ್ನು ಪ್ರತಿದಿನ ವೀಕ್ಷಿಸಿ.
Application End Date:  28 ಎಪ್ರಿಲ್ 2026
Employment Type: FULL_TIME
Hiring Organization: igich https://igich.karnataka.gov.in/kn
Job Location: KA,
To Download Official Notification
Related Tags: Degree

Comments