KEA ಗುಡ್ ನ್ಯೂಸ್: ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಕೃಷಿ ಇಲಾಖೆಯಲ್ಲಿ ಬಂಪರ್ ನೇಮಕಾತಿ! ಇಂದೇ ಅರ್ಜಿ ಹಾಕಿ
Published by: Yallamma G | Date:21 ಎಪ್ರಿಲ್ 2026

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್-ಬಿ ವೃಂದದ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ.
ಬೆಂಗಳೂರು: ಕೃಷಿ ಕ್ಷೇತ್ರದಲ್ಲಿ ಪದವಿ ಪಡೆದು ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ರಾಜ್ಯದ ಯುವಜನತೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬಂಪರ್ ಸಿಹಿಸುದ್ದಿ ನೀಡಿದೆ. ಕರ್ನಾಟಕ ರಾಜ್ಯದ ಕೃಷಿ ಇಲಾಖೆಯಲ್ಲಿ ಖಾಲಿಯಿರುವ ಗ್ರೂಪ್-ಬಿ ವೃಂದದ 'ಕೃಷಿ ಅಧಿಕಾರಿ' (Agriculture Officer) ಮತ್ತು 'ಸಹಾಯಕ ಕೃಷಿ ಅಧಿಕಾರಿ' (Assistant Agriculture Officer) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಏಪ್ರಿಲ್ 18, 2026 ರಂದು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯದ ಕೃಷಿ ಇಲಾಖೆಯಲ್ಲಿ ಖಾಲಿಯಿರುವ ಒಟ್ಟು 890 ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ನೇಮಕಾತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 10-ಮೇ-2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಉಳಿಕೆ ಮೂಲ ವೃಂದ (RPC) ಹಾಗೂ ಕಲ್ಯಾಣ ಕರ್ನಾಟಕ ವೃಂದದ (KK) ಹುದ್ದೆಗಳಿಗೆ ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು KEA ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಯ ಕುರಿತಾದ ವಿದ್ಯಾರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರ ಇಲ್ಲಿದೆ.
ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ
ನೇಮಕಾತಿಯ ಪ್ರಮುಖ ಮುಖ್ಯಾಂಶಗಳು (Key Highlights)
ಈ ನೇಮಕಾತಿಯಲ್ಲಿ ಕೃಷಿ ಪದವೀಧರರಿಗೆ (ಶೇ.85 ರಷ್ಟು) ಮತ್ತು ಇತರೆ ಕೃಷಿ ಸಂಬಂಧಿತ ತಾಂತ್ರಿಕ ಪದವೀಧರರಿಗೆ (ಶೇ.15 ರಷ್ಟು) ಹುದ್ದೆಗಳನ್ನು ಮೀಸಲಿಡಲಾಗಿದೆ.
1. ಉಳಿಕೆ ಮೂಲ ವೃಂದ (RPC) - ಒಟ್ಟು ಹುದ್ದೆಗಳು: 632
ಅಭ್ಯರ್ಥಿಗಳು ICAR ಅಥವಾ AICTE ಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಈ ಕೆಳಕಂಡ ಪದವಿಗಳನ್ನು ಹೊಂದಿರಬೇಕು:
ವಯೋಮಿತಿ ಸಡಿಲಿಕೆ (Age Limit & Relaxation)
ಸರ್ಕಾರದ ಇತ್ತೀಚಿನ ಆದೇಶದಂತೆ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು.
ಹಂತ 1: ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ (Mandatory Kannada Language Test)
ಮುಖ್ಯ ಪರೀಕ್ಷೆಯು ಎರಡು ಪತ್ರಿಕೆಗಳನ್ನು (Paper 1 & Paper 2) ಒಳಗೊಂಡಿರುತ್ತದೆ.
ಪತ್ರಿಕೆ-1: ಸಾಮಾನ್ಯ ಪತ್ರಿಕೆ (General Paper)
ಇದನ್ನು ಓದಿ : ಯಾವುದೇ ವಿದ್ಯಾರ್ಹತೆ ಬೇಡ! ಹಾವೇರಿ ಜಿಲ್ಲೆಯಲ್ಲಿ 73 ನೇರಪಾವತಿ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಪ್ರಮುಖ ದಿನಾಂಕಗಳು (Important Dates)

- ಇಲಾಖೆ: ಕೃಷಿ ಇಲಾಖೆ, ಕರ್ನಾಟಕ ಸರ್ಕಾರ.
- ಪರೀಕ್ಷಾ ಪ್ರಾಧಿಕಾರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA).
- ಹುದ್ದೆಗಳ ಹೆಸರು: ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO).
- ವೇತನ ಶ್ರೇಣಿ:
- ಕೃಷಿ ಅಧಿಕಾರಿ: ರೂ. 69,250 - 1,34,200/-.
- ಸಹಾಯಕ ಕೃಷಿ ಅಧಿಕಾರಿ: ರೂ. 65,950 - 1,24,900/-.
ಈ ನೇಮಕಾತಿಯಲ್ಲಿ ಕೃಷಿ ಪದವೀಧರರಿಗೆ (ಶೇ.85 ರಷ್ಟು) ಮತ್ತು ಇತರೆ ಕೃಷಿ ಸಂಬಂಧಿತ ತಾಂತ್ರಿಕ ಪದವೀಧರರಿಗೆ (ಶೇ.15 ರಷ್ಟು) ಹುದ್ದೆಗಳನ್ನು ಮೀಸಲಿಡಲಾಗಿದೆ.
1. ಉಳಿಕೆ ಮೂಲ ವೃಂದ (RPC) - ಒಟ್ಟು ಹುದ್ದೆಗಳು: 632
- ಕೃಷಿ ಅಧಿಕಾರಿ (ಶೇ.85%): 69 ಹುದ್ದೆಗಳು (67+02 ಹಿಂಬಾಕಿ)
- ಕೃಷಿ ಅಧಿಕಾರಿ (ಶೇ.15%): 12 ಹುದ್ದೆಗಳು
- ಸಹಾಯಕ ಕೃಷಿ ಅಧಿಕಾರಿ (ಶೇ.85%): 468 ಹುದ್ದೆಗಳು
- ಸಹಾಯಕ ಕೃಷಿ ಅಧಿಕಾರಿ (ಶೇ.15%): 83 ಹುದ್ದೆಗಳು
- ಕೃಷಿ ಅಧಿಕಾರಿ (ಶೇ.85%): 35 ಹುದ್ದೆಗಳು (27+08 ಹಿಂಬಾಕಿ)
- ಕೃಷಿ ಅಧಿಕಾರಿ (ಶೇ.15%): 05 ಹುದ್ದೆಗಳು
- ಸಹಾಯಕ ಕೃಷಿ ಅಧಿಕಾರಿ (ಶೇ.85%): 186 ಹುದ್ದೆಗಳು (178+08 ಹಿಂಬಾಕಿ)
- ಸಹಾಯಕ ಕೃಷಿ ಅಧಿಕಾರಿ (ಶೇ.15%): 32 ಹುದ್ದೆಗಳು
ಅಭ್ಯರ್ಥಿಗಳು ICAR ಅಥವಾ AICTE ಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಈ ಕೆಳಕಂಡ ಪದವಿಗಳನ್ನು ಹೊಂದಿರಬೇಕು:
- ಶೇ.85 ರಷ್ಟು ಹುದ್ದೆಗಳಿಗೆ: ಬಿಎಸ್‌ಸ್ಸಿ (ಕೃಷಿ) ಅಥವಾ ಬಿಎಸ್‌ಸ್ಸಿ (ಆನರ್ಸ್) ಕೃಷಿ ಪದವಿ.
- ಶೇ.15 ರಷ್ಟು ಹುದ್ದೆಗಳಿಗೆ: ಬಿ.ಟೆಕ್ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ / ಆಹಾರ ತಂತ್ರಜ್ಞಾನ / ಜೈವಿಕ ತಂತ್ರಜ್ಞಾನ / ಅಗ್ರಿಕಲ್ಚರಲ್ ಇಂಜಿನಿಯರಿಂಗ್) ಅಥವಾ ಬಿಎಸ್‌ಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ / ಅಗ್ರಿ ಬಿಸಿನೆಸ್ ಮ್ಯಾನೇಜ್‌ಮೆಂಟ್ / ಕೃಷಿ ಜೈವಿಕ ತಂತ್ರಜ್ಞಾನ / ಅಗ್ರಿಕಲ್ಚರಲ್ ಇಂಜಿನಿಯರಿಂಗ್) ಪದವಿ.
ವಯೋಮಿತಿ ಸಡಿಲಿಕೆ (Age Limit & Relaxation)
ಸರ್ಕಾರದ ಇತ್ತೀಚಿನ ಆದೇಶದಂತೆ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು.
- ಸಾಮಾನ್ಯ ವರ್ಗ (GM): ಗರಿಷ್ಠ 40 ವರ್ಷಗಳು.
- ಪ್ರವರ್ಗ 2A, 2B, 3A, 3B: ಗರಿಷ್ಠ 43 ವರ್ಷಗಳು.
- SC, ST, ಪ್ರವರ್ಗ-1: ಗರಿಷ್ಠ 45 ವರ್ಷಗಳು.
- (ಮಾಜಿ ಸೈನಿಕ, ವಿಶೇಷ ಚೇತನ ಹಾಗೂ ವಿಧವೆಯರಿಗೆ ನಿಯಮಾನುಸಾರ ಹೆಚ್ಚುವರಿ ಸಡಿಲಿಕೆ ಇರುತ್ತದೆ )
- ಸಾಮಾನ್ಯ ಅರ್ಹತೆ (GM) ಮತ್ತು ಇತರೆ ಹಿಂದುಳಿದ ವರ್ಗಗಳು (2A, 2B, 3A, 3B): ರೂ. 750/- (ಅರ್ಜಿ ಶುಲ್ಕ ರೂ. 500 + ಪ್ರಕ್ರಿಯೆ ಶುಲ್ಕ ರೂ. 250).
- SC, ST, ಪ್ರವರ್ಗ-1, ಮಾಜಿ ಸೈನಿಕ ಮತ್ತು ತೃತೀಯ ಲಿಂಗ: ರೂ. 500/- (ಅರ್ಜಿ ಶುಲ್ಕ ರೂ. 250 + ಪ್ರಕ್ರಿಯೆ ಶುಲ್ಕ ರೂ. 250).
- ವಿಶೇಷ ಚೇತನ ಅಭ್ಯರ್ಥಿಗಳಿಗೆ: ರೂ. 250/- (ಪ್ರಕ್ರಿಯೆ ಶುಲ್ಕ ಮಾತ್ರ).
ಹಂತ 1: ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ (Mandatory Kannada Language Test)
- ವಿನಾಯಿತಿ (Exemption): ಅಭ್ಯರ್ಥಿಯು SSLC ಅಥವಾ ಅದಕ್ಕಿಂತ ಉನ್ನತ ವ್ಯಾಸಂಗದಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿದ್ದರೆ, ಅಥವಾ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೆ, ಅಥವಾ ಈ ಹಿಂದೆ ನಡೆದ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ, ಅವರಿಗೆ ಈ ಪರೀಕ್ಷೆಯಿಂದ ವಿನಾಯಿತಿ ಇರುತ್ತದೆ.
- ಪರೀಕ್ಷಾ ವಿಧಾನ: ವಿನಾಯಿತಿ ಇಲ್ಲದ ಅಭ್ಯರ್ಥಿಗಳು 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಬರೆಯಬೇಕು.
- ಅರ್ಹತಾ ಅಂಕ: ಇದರಲ್ಲಿ ಕನಿಷ್ಠ 50 ಅಂಕಗಳನ್ನು ಪಡೆಯುವುದು ಕಡ್ಡಾಯ. ಈ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಅಂತಿಮ ಆಯ್ಕೆಯ (Merit List) ಪಟ್ಟಿಗೆ ಪರಿಗಣಿಸಲಾಗುವುದಿಲ್ಲ.
ಮುಖ್ಯ ಪರೀಕ್ಷೆಯು ಎರಡು ಪತ್ರಿಕೆಗಳನ್ನು (Paper 1 & Paper 2) ಒಳಗೊಂಡಿರುತ್ತದೆ.
ಪತ್ರಿಕೆ-1: ಸಾಮಾನ್ಯ ಪತ್ರಿಕೆ (General Paper)
- ಅಂಕಗಳು: 300 ಅಂಕಗಳು.
- ಸಮಯ: 2 ಗಂಟೆ.
- ವಿಷಯಗಳು: ಪ್ರಚಲಿತ ವಿದ್ಯಮಾನಗಳು, ಸಾಮಾನ್ಯ ವಿಜ್ಞಾನ, ಕರ್ನಾಟಕ ಮತ್ತು ಭಾರತದ ಇತಿಹಾಸ ಹಾಗೂ ಭೂಗೋಳಶಾಸ್ತ್ರ, ಭಾರತದ ಸಂವಿಧಾನ, ವಿಜ್ಞಾನ-ತಂತ್ರಜ್ಞಾನ, ಪರಿಸರ ವಿಜ್ಞಾನ ಇತ್ಯಾದಿ.
- ಅಂಕಗಳು: 300 ಅಂಕಗಳು.
- ಸಮಯ: 2 ಗಂಟೆ.
- ವಿಷಯಗಳು: ಹುದ್ದೆಗೆ ಸಂಬಂಧಿಸಿದ ಪಠ್ಯಕ್ರಮದ ಆಧಾರದ ಮೇಲೆ ಪ್ರತ್ಯೇಕವಾಗಿ ಪ್ರಕಟಿಸಲಾಗುವುದು.
- ಕನಿಷ್ಠ ಅಂಕಗಳು (Minimum Qualifying Marks): ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಅಭ್ಯರ್ಥಿಗಳು ಕನಿಷ್ಠ ಶೇ. 35% ರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿರುತ್ತದೆ. ಇದಕ್ಕಿಂತ ಕಡಿಮೆ ಅಂಕ ಪಡೆದರೆ ಆಯ್ಕೆ ಪ್ರಕ್ರಿಯೆಗೆ ಅನರ್ಹರಾಗುತ್ತಾರೆ.
- ಋಣಾತ್ಮಕ ಮೌಲ್ಯಮಾಪನ (Negative Marking): ಪ್ರತಿ ತಪ್ಪು ಉತ್ತರಕ್ಕೆ 0.75 ಅಂಕಗಳನ್ನು ಕಳೆಯಲಾಗುವುದು. ಪ್ರಶ್ನೆ ಪತ್ರಿಕೆಯು ವಸ್ತುನಿಷ್ಠ ಬಹು ಆಯ್ಕೆ (Multiple Choice) ಮಾದರಿಯಲ್ಲಿದ್ದು, 4 ಪರ್ಯಾಯ ಉತ್ತರಗಳಿರುತ್ತವೆ.
- 5ನೇ ಆಯ್ಕೆಯ ನಿಯಮ (5th Option Rule): OMR ಉತ್ತರ ಪತ್ರಿಕೆಯಲ್ಲಿ ಉತ್ತರಿಸದೆ ಬಿಡಲು 5ನೇ ವೃತ್ತವನ್ನು ನೀಡಲಾಗಿರುತ್ತದೆ. ಉತ್ತರ ಗೊತ್ತಿಲ್ಲದಿದ್ದರೆ 5ನೇ ವೃತ್ತವನ್ನು ಕಡ್ಡಾಯವಾಗಿ ಶೇಡ್ ಮಾಡಬೇಕು (ಇದಕ್ಕಾಗಿ ಕೊನೆಯಲ್ಲಿ 5 ನಿಮಿಷ ಹೆಚ್ಚುವರಿ ಸಮಯ ನೀಡಲಾಗುತ್ತದೆ). ಯಾವುದೇ ವೃತ್ತವನ್ನು ಶೇಡ್ ಮಾಡದೆ ಖಾಲಿ ಬಿಟ್ಟರೆ, ಆ ಪ್ರಶ್ನೆಗೆ 0.75 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
- ಅಭ್ಯರ್ಥಿಗಳು ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಒಂದೇ ಪರೀಕ್ಷೆ ಬರೆದರೂ, ಅವರು ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದ ಹುದ್ದೆಗಳಿಗೆ ಪ್ರತ್ಯೇಕ ಅಂಕ ಪಟ್ಟಿಯನ್ನು ಸಿದ್ಧಪಡಿಸಿ ಇಲಾಖೆಗೆ ನೀಡಲಾಗುತ್ತದೆ.
- ಮೆರಿಟ್ ಮತ್ತು ಮೀಸಲಾತಿ ರೋಸ್ಟರ್ ಆಧಾರದ ಮೇಲೆ ಅರ್ಹರಾದ ಅಭ್ಯರ್ಥಿಗಳನ್ನು ಮೂಲ ದಾಖಲೆಗಳ ಪರಿಶೀಲನೆಗೆ (Document Verification) ಕರೆಯಲಾಗುತ್ತದೆ.
- ದಾಖಲೆ ಪರಿಶೀಲನೆ ಸಮಯದಲ್ಲಿ ಅಭ್ಯರ್ಥಿಗಳು ಅರ್ಜಿಯಲ್ಲಿ ಕೋರಿರುವ ಎಲ್ಲಾ ಮೀಸಲಾತಿ (Caste, Rural, Kannada Medium, HK, etc.) ಹಾಗೂ ಶೈಕ್ಷಣಿಕ ಪ್ರಮಾಣ ಪತ್ರಗಳ ಮೂಲ (Original) ಪ್ರತಿಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.
- ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ನೇರ ನೇಮಕಾತಿಯಡಿ 2 ವರ್ಷಗಳ ಖಾಯಂಪೂರ್ವ (Probationary) ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.
1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ ಅಲ್ಲಿ ಲಭ್ಯವಿರುವ ಲಿಂಕ್ ಅನ್ನು ಆಯ್ಕೆ ಮಾಡಬೇಕು.
2. ಆನ್‌ಲೈನ್ ಮೂಲಕ ಮಾತ್ರ ಸಲ್ಲಿಕೆ: ಅರ್ಜಿಗಳನ್ನು ಕೇವಲ ಆನ್‌ಲೈನ್ ಮುಖಾಂತರ ಮಾತ್ರ ಭರ್ತಿ ಮಾಡತಕ್ಕದ್ದು. ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಅರ್ಜಿ ಭರ್ತಿ ಮಾಡುವ ಮೊದಲು ಅರ್ಹತೆಗೆ ಸಂಬಂಧಿಸಿದ ಎಲ್ಲಾ ಸೂಚನೆಗಳನ್ನು ಓದಿಕೊಳ್ಳತಕ್ಕದ್ದು ಹಾಗೂ ನೀಡಿರುವ ಸೂಚನೆಗಳನ್ವಯ ಅರ್ಜಿಯನ್ನು ಭರ್ತಿ ಮಾಡತಕ್ಕದ್ದು.
3. ಒಂದೇ ಅರ್ಜಿ ಸಲ್ಲಿಕೆಗೆ ಅವಕಾಶ: ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಶೇ. 85% ಹುದ್ದೆಗಳಿಗೆ ಹಾಗೂ ಶೇ. 15% ಹುದ್ದೆಗಳಿಗೆ ಆನ್‌ಲೈನ್ ಮುಖಾಂತರ ಒಂದೇ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮೊದಲ ಒಂದು ಹುದ್ದೆಯ ಅರ್ಜಿಗೆ ನಿಗದಿತ ಶುಲ್ಕವನ್ನು ಪಾವತಿಸತಕ್ಕದ್ದು ಹಾಗೂ ಒಂದೇ ಪಠ್ಯಕ್ರಮದ ಹೆಚ್ಚುವರಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದಲ್ಲಿ ಆಯ್ಕೆ ಮಾಡಲಾದ ಪ್ರತಿ ಹೆಚ್ಚುವರಿ ಹುದ್ದೆಗೆ ರೂ. 100/- ಗಳನ್ನು ಅರ್ಜಿ ಶುಲ್ಕವಾಗಿ ಪಾವತಿಸತಕ್ಕದ್ದು.
4. ಫೋಟೋ ಮತ್ತು ಸಹಿ ಅಪ್‌ಲೋಡ್: * ಅಭ್ಯರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು (Recent photograph in JPEG format, with a file size between 50KB to 200KB) ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು.
5. ತಿದ್ದುಪಡಿಗೆ ಅವಕಾಶವಿಲ್ಲ: ಒಮ್ಮೆ ಸಲ್ಲಿಸಿದ ಅರ್ಜಿಯಲ್ಲಿನ ಯಾವುದೇ ಮಾಹಿತಿಯನ್ನು ಯಾವುದೇ ಹಂತದಲ್ಲಿ ಬದಲಾವಣೆ / ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ. ಆದ್ದರಿಂದ ಅರ್ಜಿ ಸಲ್ಲಿಸುವಾಗ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಿ.
6. ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್: ಅಭ್ಯರ್ಥಿಯು ಅರ್ಜಿಯಲ್ಲಿ ನೀಡುವ ಮೊಬೈಲ್ ಸಂಖ್ಯೆ/ಇ-ಮೇಲ್ ಅಂತಿಮವಾಗಿದ್ದು, ಎಲ್ಲಾ ಮಾಹಿತಿಗಳನ್ನು ಅದೇ ಮೊಬೈಲ್ ಸಂಖ್ಯೆ/ಇ-ಮೇಲ್ ಗಳಿಗೆ ಕಳುಹಿಸಿಕೊಡಲಾಗುವುದು.
7. ಅರ್ಜಿ ಪ್ರತಿ ಕಾಯ್ದಿಟ್ಟುಕೊಳ್ಳಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿರುವ ಬಗ್ಗೆ ಖಚಿತಪಡಿಸಿಕೊಂಡು ನಂತರ ಅದರ ಒಂದು ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಹಾಗೂ ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೂ ಕಾಯ್ದಿಟ್ಟುಕೊಳ್ಳತಕ್ಕದ್ದು.
ಇದನ್ನು ಓದಿ : ಯಾವುದೇ ವಿದ್ಯಾರ್ಹತೆ ಬೇಡ! ಹಾವೇರಿ ಜಿಲ್ಲೆಯಲ್ಲಿ 73 ನೇರಪಾವತಿ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಪ್ರಮುಖ ದಿನಾಂಕಗಳು (Important Dates)
- ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: 19.04.2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10.05.2026
- ಶುಲ್ಕ ಪಾವತಿಸಲು ಕಡೆ ದಿನಾಂಕ: 12.05.2026
ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕಗಳು:
- ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ: 06.06.2026 (ಮಧ್ಯಾಹ್ನ 3.00 ರಿಂದ 5.00).
- ಪತ್ರಿಕೆ 1 & 2 (ಉಳಿಕೆ ಮೂಲ ವೃಂದ - RPC): 07.06.2026.
- ಪತ್ರಿಕೆ 1 & 2 (ಕಲ್ಯಾಣ ಕರ್ನಾಟಕ - KK): 14.06.2026.
No. of posts: 890
Application Start Date: 20 ಎಪ್ರಿಲ್ 2026
Application End Date: 10 ಮೇ 2026
Work Location: ಕರ್ನಾಟಕ
Employment Type: FULL_TIME
Hiring Organization: Karnataka Examination Authority https://cetonline.karnataka.gov.in/kea/
Job Location: ಕರ್ನಾಟಕ, KA,
To Download Official Notification
Related Tags: Degree

Comments